T20 World Cup: ನಮೀಬಿಯಾ vs ನೆದರ್ಲ್ಯಾಂಡ್ಸ್ ಪಂದ್ಯ, ಗೆದ್ದವರಿಗೆ ಸೂಪರ್ 12 ಸುತ್ತಿಗೆ ಪ್ರವೇಶ

ಟಿ20 ವಿಶ್ವಕಪ್ ಅರ್ಹತಾ ಸುತ್ತಿನ 5 ನೇ ಪಂದ್ಯದಲ್ಲಿ ನಮೀಬಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ. ನಮೀಬಿಯಾ ಮತ್ತು ನೆದರ್ಲ್ಯಾಂಡ್ಸ್ ಎರಡೂ ಕ್ರಮವಾಗಿ ಶ್ರೀಲಂಕಾ ಮತ್ತು ಯುಎಇ ವಿರುದ್ಧ ಅದ್ಭುತ ಗೆಲುವು ಸಾಧಿಸಿವೆ.
ನಮೀಬಿಯಾ ಮೊದಲನೇ ಪಂದ್ಯದಲ್ಲಿ ಏಷ್ಯಾಕಪ್ ಚಾಂಪಿಯನ್ನರಾದ ಶ್ರೀಲಂಕಾವನ್ನು 55 ರನ್‌ಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಆಘಾತ ನೀಡಿದೆ. ಮತ್ತೊಂದೆಡೆ ನೆದರ್ಲ್ಯಾಂಡ್ಸ್ ಕೂಡ ಯುಎಇ ತಂಡದ ವಿರುದ್ಧ ಎರಡು ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಈ ಪಂದ್ಯ ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿರುತ್ತದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್ 12 ಹಂತಕ್ಕೆ ಸ್ಥಾನ ಪಡೆಯುತ್ತದೆ. ಆದ್ದರಿಂದ ಎರಡೂ ತಂಡಗಳು ಶತಾಯ ಗತಾಯ ಈ ಪಂದ್ಯವನ್ನು ಗೆಲ್ಲಲು ಯೋಚಿಸುತ್ತವೆ.
ಶ್ರೀಲಂಕಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿರುವ ನಮೀಬಿಯಾ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ. ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ವಿರುದ್ಧ ನಮೀಬಿಯಾ, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಡೇವಿಡ್ ವೈಸ್ ನೇತೃತ್ವದ ಬೌಲಿಂಗ್ ಪಡೆ ಲಂಕನ್ನರನ್ನು ಆಲೌಟ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಬ್ಯಾಟಿಂಗ್‌ನಲ್ಲಿ ಕೂಡ ನಮೀಬಿಯಾ ಉತ್ತಮವಾಗಿದೆ. ಜೆಜೆ ಸ್ಮಟ್ಸ್, ಡೇವಿಡ್ ವೀಸ್‌ರಂತಹ ಬಿಗ್ ಹಿಟ್ಟರ್ ಗಳು ತಂಡದಲ್ಲಿದ್ದಾರೆ.

ಸೈಮಂಡ್ಸ್ ಕ್ರೀಡಾಂಗಣದ ಪಿಚ್ ರಿಪೋರ್ಟ್
ಉಭಯ ತಂಡಗಳು ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಇದುವರೆಗೆ ಎರಡು ಪಂದ್ಯಗಳನ್ನಾಡಿದ್ದು, ಎರಡೂ ತಂಡಗಳು ಒಂದು ಬಾರಿ ಜಯ ಗಳಿಸುವ ಮೂಲಕ ಸಮಬಲ ಸಾಧಿಸಿವೆ. ಕಳೆದ ವರ್ಷದ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ನಮೀಬಿಯಾ ನೆದರ್ಲ್ಯಾಂಡ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತ್ತು.
ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ. ಗೀಲಾಂಗ್‌ನಲ್ಲಿನ ಪಿಚ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಅನುಕೂಲಕರವಾಗಿದೆ. ನಮೀಬಿಯಾ-ಶ್ರೀಲಂಕಾ, ನೆದರ್ಲ್ಯಾಂಡ್ಸ್-ಯುಎಇ ನಡುವಿನ ಪಂದ್ಯ ಕಡಿಮೆ ಸ್ಕೋರಿಂಗ್ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡುವ ತಂಡ 150 ರನ್ ಗಳಿಸಿದರೆ ರಕ್ಷಣೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ನಮೀಬಿಯಾ: ಸ್ಟೀಫನ್ ಬಾರ್ಡ್, ಡೇವಿಡ್ ವೈಸ್, ಗೆರ್ಹಾರ್ಡ್ ಎರಾಸ್ಮಸ್(ನಾಯಕ), ಜಾನ್ ನಿಕೋಲ್ ಲಾಫ್ಟಿ-ಈಟನ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಝೇನ್ ಗ್ರೀನ್, ದಿವಾನ್ ಲಾ ಕಾಕ್, ಮೈಕೆಲ್ ವ್ಯಾನ್ ಲಿಂಗೆನ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ
ನೆದರ್ಲ್ಯಾಂಡ್ಸ್: ಮ್ಯಾಕ್ಸ್ ಓಡೌಡ್, ವಿಕ್ರಮ್ಜಿತ್ ಸಿಂಗ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್(ನಾಯಕ), ರೋಲೋಫ್ ವ್ಯಾನ್ ಡೆರ್ ಮೆರ್ವೆ, ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications