T20 World Cup: ನಮೀಬಿಯಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ನೆದರ್ಲ್ಯಾಂಡ್ಸ್

ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ನಮೀಬಿಯಾ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಅದು ಸೂಪರ್ 12 ಹಂತ ಪ್ರವೇಶಿಸಲು ಸಜ್ಜಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಮೀಬಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಯಿತು.
ನಮೀಬಿಯಾ ಆರಂಭಿಕ ಆಟಗಾರ ದಿವಾನ್ ಲಾ ಕಾಕ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭದಲ್ಲೇ ಆಘಾತ ಅನುಭವಿಸಿತು. ಜಾನ್ ಫ್ರಿಲಿಂಕ್ 48 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ನಮೀಬಿಯಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತು.
122 ರನ್‌ಗಳು ಸಾಧಾರಣ ಗುರಿಯನ್ನು ಬೆನ್ನತ್ತಿದ ನೆದರ್ಲ್ಯಾಂಡ್ಸ್ ಅತ್ಯುತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ವಿಕ್ರಮಜಿತ್ ಸಿಂಗ್ 31 ಎಸೆತಗಳಲ್ಲಿ 3 ಬೌಂಡರಿ ಎರಡು ಭರ್ಜರಿ ಸಿಕ್ಸರ್ ಸಹಿತ 39 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಮ್ಯಾಕ್ಸ್ ಓಡೌಡ್ ಕೂಡ 35 ಎಸೆತಗಳಲ್ಲಿ 35 ರನ್ ಗಳಿಸಿದರು. ಕೊನೆಯ ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡ ನೆದರ್ಲ್ಯಾಂಡ್ಸ್ ಒತ್ತಡಕ್ಕೆ ಸಿಲುಕಿದರೂ, ಅಂತಿಮವಾಗಿ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.

ನೆದರ್ಲ್ಯಾಂಡ್ಸ್ ಅತ್ಯುತ್ತಮ ಬೌಲಿಂಗ್
ಶ್ರೀಲಂಕಾ ತಂಡವನ್ನು ಮಣಿಸಿ ಭಾರಿ ಆತ್ಮವಿಶ್ವಾಸದಲ್ಲಿದ್ದ ನಮೀಬಿಯಾ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ನೆದರ್ಲ್ಯಾಂಡ್ಸ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ನಮೀಬಿಯಾ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. ಶ್ರೀಲಂಕಾ ವಿರುದ್ಧ ಅತ್ಯುತ್ತಮ ರನ್ ಗಳಿಸಿದ್ದ ನಮೀಬಿಯಾ ಈ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿತು.
ಬಾಸ್ ಡಿ ಲೀಡೆ 3 ಓವರ್ ಗಳಲ್ಲಿ 18 ರನ್ ನೀಡಿ ಎರಡು ವಿಕೆಟ್ ಪಡೆದರು. ಟಿಮ್ ಪ್ರಿಂಗಲ್ 3 ಓವರ್ ಗಳಲ್ಲಿ 15 ರನ್ ನೀಡಿ 1 ವಿಕೆಟ್ ಪಡೆದರು. ಪಾಲ್ ವ್ಯಾನ್ ಮೀಕೆರೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಕಾಲಿನ್ ಅಕರ್ಮನ್ ಕೂಡ ತಲಾ ಒಂದು ವಿಕೆಟ್ ಪಡೆದರು.
T20 ವಿಶ್ವಕಪ್: IND vs PAK ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಕೊಹ್ಲಿ-ಅಜಂ ನೆಟ್‌ನಲ್ಲಿ ಒಟ್ಟಿಗೆ ಅಭ್ಯಾಸ

ಲೆಕ್ಕಾಚಾರದಲ್ಲಿ ಎಡವಿದ ನಮೀಬಿಯಾ
ಶ್ರೀಲಂಕಾ ವಿರುದ್ಧ ಜಯ ಗಳಿಸಿದ್ದ ನಮೀಬಿಯಾ ಭಾರಿ ಆತ್ಮವಿಶ್ವಾಸದಲ್ಲಿತ್ತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡ ನಮೀಬಿಯಾ ಮತ್ತೆ ಚೇತರಿಸಿಕೊಳ್ಳಲಿಲ್ಲ. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಜಾನ್ ಫ್ರಿಲಿಂಕ್ ಈ ಪಂದ್ಯದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದರು.
ವಿಕೆಟ್‌ಗಳು ಉರುಳಿದರೂ, ಅಂತಿಮ ಓವರ್ ಗಳ ವರೆಗೆ ಸ್ಫೋಟಕ ಬ್ಯಾಟರ್ ಗಳಾದ ಜೆ ಸ್ಮಟ್ ಮತ್ತು ಡೇವಿಡ್ ವೀಸ್ ಬ್ಯಾಟಿಂಗ್‌ಗೆ ಬರಲಿಲ್ಲ, ನಮೀಬಿಯಾ ಲೆಕ್ಕಾಚಾರದಲ್ಲಿ ಎಡವಿದ್ದು ಇಲ್ಲಿ, ಇನ್ನೂ ಐದಾರು ಓವರ್ ಇದ್ದಾಗಲೇ ಇವರಿಬ್ಬರೂ ಬ್ಯಾಟಿಂಗ್‌ಗೆ ಬಂದಿದ್ದರೆ ನಮೀಬಿಯಾ 140 ರನ್ ಗಳಿಸುವ ಸಾಧ್ಯತೆ ಇತ್ತು. ತಪ್ಪಾದ ಲೆಕ್ಕಾಚಾರ ನಮೀಬಿಯಾಗೆ ಮುಳುವಾಯಿತು.

ಆರಂಭದಲ್ಲೇ ಉತ್ತಮ ರನ್ ಗಳಿಸಿದ ನೆದರ್ಲ್ಯಾಂಡ್ಸ್
ನೆದರ್ಲ್ಯಾಂಡ್ಸ್ ಆರಂಭಿಕ ಆಟಗಾರರಾದ ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್ ಆರಂಭದಲ್ಲೇ ಬೌಂಡರಿಗಳನ್ನು ಬಾರಿಸುವ ಮೂಲಕ ನಮೀಬಿಯಾ ಬೌಲರ್ ಗಳ ಮೇಲೆ ಒತ್ತಡ ಹಾಕಿದರು. ಮೊದಲ 6 ಒವರ್ ಗಳಲ್ಲಿ ಈ ಜೋಡಿ 51 ರನ್ ಗಳಿಸುವ ಮೂಲಕ ಸುಲಭವಾಗಿ ಪಂದ್ಯವನ್ನು ಗೆಲ್ಲುವ ಮುನ್ಸೂಚನೆ ನೀಡಿತು.
ಮಧ್ಯಮ ಓವರ್ ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ನಮೀಬಿಯಾ ವಿಕೆಟ್‌ಗಳನ್ನು ಪಡೆಯುವ ಮೂಲಕ ನೆದರ್ಲ್ಯಾಂಡ್ಸ್ ಮೇಲೆ ಒತ್ತಡ ಹೇರಿತು. ಬಾಸ್ ಡಿ ಲೀಡೆ ಕ್ರೀಸ್‌ಗೆ ಕಚ್ಚಿನಿಂತು ರನ್ ಗಳಿಸುತ್ತಿದ್ದರು. ಅಂತಿಮ ಓವರ್ ವರೆಗೂ ಆಡಿದ ಅವರು ಕೊನೆಯ ಓವರ್ ನಲ್ಲಿ ಬೌಂಡರಿ ಗಳಿಸುವ ಮೂಲಕ ಜಯವನ್ನು ಖಚಿತಪಡಿಸಿದರು.

ಉಭಯ ತಂಡಗಳ ಪ್ಲೇಯಿಂಗ್ XI
ನಮೀಬಿಯಾ ಪ್ಲೇಯಿಂಗ್ XI: ಮೈಕೆಲ್ ವ್ಯಾನ್ ಲಿಂಗೆನ್, ದಿವಾನ್ ಲಾ ಕಾಕ್, ಸ್ಟೀಫನ್ ಬಾರ್ಡ್, ಜಾನ್ ನಿಕೋಲ್ ಲಾಫ್ಟಿ-ಈಟನ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ಫ್ರಿಲಿಂಕ್, ಡೇವಿಡ್ ವೈಸ್, ಜೆಜೆ ಸ್ಮಿಟ್, ಝೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ಬೆನ್ ಶಿಕೊಂಗೊ
ನೆದರ್ಲ್ಯಾಂಡ್ಸ್ ಪ್ಲೇಯಿಂಗ್ XI: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಬಾಸ್ ಡಿ ಲೀಡೆ, ಕಾಲಿನ್ ಅಕರ್ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ರೋಲೋಫ್ ವ್ಯಾನ್ ಡೆರ್ ಮೆರ್ವೆ, ಟಿಮ್ ಪ್ರಿಂಗಲ್, ಟಿಮ್ ವ್ಯಾನ್ ಡೆರ್ ಗುಗ್ಟನ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications