T20 World Cup 2022: ಯುಎಇ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ನೆದರ್ಲ್ಯಾಂಡ್ಸ್

ಟಿ20 ವಿಶ್ವಕಪ್ 2022 ರ ಎ ಗುಂಪಿನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣದಲ್ಲಿ ನೆಡದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಯುಎಇ ನಿಧಾನಗತಿಯಲ್ಲಿ ರನ್ ಗಳಿಸಿತು. ನೆದರ್ಲ್ಯಾಂಡ್ಸ್ ಬೌಲಿಂಗ್ ವಿರುದ್ಧ ರನ್ ಗಳಿಸಲು ಪರದಾಡಿದ ಯುಎಇ ಬ್ಯಾಟರ್ ಗಳು ಪವರ್ ಪ್ಲೇ ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡರು. ಬೌಲಿಂಗ್‌ಗೆ ಸಹಕಾರಿಯಾಗಿದ್ದ ಪಿಚ್‌ನ ಲಾಭ ಪಡೆದ ನೆದರ್ಲ್ಯಾಂಡ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು.
ಮುಹಮ್ಮದ್ ವಸೀಮ್ 47 ಎಸೆತಗಳಲ್ಲಿ 41 ರನ್ ಗಳಿಸಿ ಯುಎಇ ತಂಡಕ್ಕೆ ಆಸರೆಯಾದರು. ಉಳಿದಂತೆ ವೃತ್ಯ ಅರವಿಂದ್ 18 ರನ್, ಖಾಸಿವ್ ದಾವೂದ್ 15 ರನ್ ಗಳಿಸಿದರು, ಚಿರಾಗ್ ಸೂರಿ 20 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿದರು. ಅಂತಿಮವಾಗಿ ಯುಎಇ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದರು.
ಯುಎಇ ನೀಡಿದ 112 ರನ್‌ಗಳ ಗುರಿಯನ್ನು ನೆದರ್ಲ್ಯಾಂಡ್ಸ್ 19.5 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ರೋಚಕವಾಗಿ ಬೆನ್ನತ್ತುವ ಮೂಲಕ 3 ವಿಕೆಟ್‌ಗಳ ಜಯ ಸಾಧಿಸಿತು.

ನೆದರ್ಲ್ಯಾಂಡ್ಸ್ ಉತ್ತಮ ಬೌಲಿಂಗ್ ಪ್ರದರ್ಶನ
ಆರಂಭದಿಂದಲೇ ನೆದರ್ಲ್ಯಾಂಡ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರಿಂದ ಯುಎಇ ಬ್ಯಾಟರ್ ಗಳಿಗೆ ರನ್ ಗಳಿಸಲು ಕಷ್ಟವಾಯಿತು. ಉತ್ತಮ ಬೌಲಿಂಗ್ ಜೊತೆಗೆ ಉತ್ತಮ ಫೀಲ್ಡಿಂಗ್ ಮಾಡಿದ ನೆದರ್ಲ್ಯಾಂಡ್ಸ್ ಯುಎಇ ರನ್ ಗಳಿಕೆಗೆ ಕಡಿವಾಣ ಹಾಕಿದರು.
ನೆದರ್ಲ್ಯಾಂಡ್ಸ್ ಪರವಾಗಿ ಬಾಸ್ ಡಿ ಲೀಡೆ 3 ಓವರ್ ಗಳಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಫ್ರೆಡ್ ಕ್ಲಾಸೆನ್ 4 ಓವರ್ ಗಳಲ್ಲಿ ಕೇವಲ 13 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಟಿಮ್ ಪ್ರಿಂಗಲ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ತಲಾ ಒಂದು ವಿಕೆಟ್ ಪಡೆದರು.
T20 World Cup: ನಮೀಬಿಯಾ ವಿರುದ್ಧ ಸೋತ ನಂತರ ಶ್ರೀಲಂಕಾ ತಂಡಕ್ಕೆ ಛೀಮಾರಿ ಹಾಕಿದ ಮಾಲಿಂಗ

ರೋಚಕ ಗೆಲುವು ಪಡೆದ ನೆದರ್ಲ್ಯಾಂಡ್ಸ್
112 ರನ್‌ಗಳ ಗುರಿಯನ್ನು ಬೆನ್ನತ್ತಿದ ನೆದರ್ಲ್ಯಾಂಡ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ಮ್ಯಾಕ್ಸ್ ಓಡೌಡ್, ವಿಕ್ರಮಜಿತ್ ಸಿಂಗ್ ಸುಲಭವಾಗಿ ರನ್ ಗಳಿಸಿದರು. 7 ಎಸೆತಗಳಲ್ಲಿ 10 ರನ್ ಗಳಿಸಿದ ನಂತರ ವಿಕ್ರಮಜಿತ್ ಸಿಂಗ್ ಔಟಾದರು. ಮ್ಯಾಕ್ಸ್ ಓಡೌಡ್ 18 ಎಸೆತಗಳಲ್ಲಿ 23 ರನ್ ಗಳಿಸಿದ್ದು ನೆದರ್ಲ್ಯಾಂಡ್ಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿತು.
ನಂತರ ಬಂದ ಬಾಸ್ ಡಿ ಲೀಡೆ, ಟಾಮ್ ಕೂಪರ್, ಕಾಲಿನ್ ಅಕರ್ಮನ್ ರನ್ ಗಳಿಸಲು ಪರದಾಡಿದರು. ಆದರೆ, ಅಂತಿಮ ಕ್ಷಣದಲ್ಲಿ ವಿಕೆಟ್ ಕಾಯ್ದುಕೊಂಡ ನಾಯಕ ಸ್ಕಾಟ್ ಎಡ್ವರ್ಡ್ಸ್ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಟಿಮ್ ಪ್ರಿಂಗಲ್ 16 ಎಸೆತಗಳಲ್ಲಿ 15 ರನ್ ಗಳಿಸಿದರು. ಅಂತಿಮ ಓವರ್ ಗಳಲ್ಲಿ ಪಂದ್ಯ ರೋಚಕ ಜಯ ಸಾಧಿಸಿತು.

ಯುಎಇ, ನೆದರ್ಲ್ಯಾಂಡ್ಸ್ ಆಡುವ ಬಳಗ
ಯುಎಇ ಪ್ಲೇಯಿಂಗ್ XI: ಮುಹಮ್ಮದ್ ವಸೀಮ್, ಚಿರಾಗ್ ಸೂರಿ, ವೃತ್ಯ ಅರವಿಂದ್, ಚುಂಡಂಗಪೊಯಿಲ್ ರಿಜ್ವಾನ್(ನಾಯಕ), ಬಸಿಲ್ ಹಮೀದ್, ಜವರ್ ಫರೀದ್, ಅಯಾನ್ ಅಫ್ಜಲ್ ಖಾನ್, ಕಾಶಿಫ್ ದೌದ್, ಕಾರ್ತಿಕ್ ಮೆಯ್ಯಪ್ಪನ್, ಜುನೈದ್ ಸಿದ್ದಿಕ್, ಜಹೂರ್ ಖಾನ್
ನೆದರ್ಲ್ಯಾಂಡ್ಸ್ ಪ್ಲೇಯಿಂಗ್ XI: ಮ್ಯಾಕ್ಸ್ ಓಡೌಡ್, ವಿಕ್ರಮಜಿತ್ ಸಿಂಗ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್(ನಾಯಕ), ರೋಲೋಫ್ ವ್ಯಾನ್ ಡೆರ್ ಮೆರ್ವೆ, ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications