For Quick Alerts
ALLOW NOTIFICATIONS  
For Daily Alerts
 

Sri Lanka Vs Ireland : ಲಂಕನ್ನರಿಗೆ ಸೆಡ್ಡು ಹೊಡೆಯುತ್ತಾ ಐರ್ಲೆಂಡ್? ಪಿಚ್ ರಿಪೋರ್ಟ್, ಸಂಭಾವ್ಯ ಆಡುವ ಬಳಗ

ICC T20 World Cup 2022: Sri Lanka Vs Ireland, Pitch Report, Probable XI, Weather Update

ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ರ 15 ನೇ ಪಂದ್ಯದಲ್ಲಿ ಶ್ರೀಲಂಕಾ ಭಾನುವಾರ ಐರ್ಲೆಂಡ್ ವಿರುದ್ಧ ಸೆಣಸಲಿದೆ. ಪಂದ್ಯಾವಳಿಯ ಸೂಪರ್ 12 ಹಂತದಲ್ಲಿ 1ನೇ ಗುಂಪಿನಲ್ಲಿರುವ ಈ ಎರಡೂ ತಂಡಗಳು ಹೋಬರ್ಟ್‌ನಲ್ಲಿರುವ ಬೆಲ್ಲೆರಿವ್ ಓವಲ್‌ನಲ್ಲಿ ಮುಖಾಮುಖಿಯಾಗಲಿವೆ.

ಗುಂಪು ಹಂತದ ಪಂದ್ಯಗಳಲ್ಲಿ ಸ್ಪರ್ಧಿಸಿದ ಶ್ರೀಲಂಕಾ ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯಿತು. ತಮ್ಮ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೋತರು. ಆದರೆ, ನಂತರದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಸೂಪರ್ 12 ಹಂತಕ್ಕೆ ಪ್ರವೇಶಿಸಿತು.

ಲಂಕಾ ತಂಡವನ್ನು ದಾಸುನ್ ಶನಕ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ವನಿಂದು ಹಸರಂಗ, ಪಾತುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡಿಸ್ ಇತ್ತೀಚಿನ ದಿನಗಳಲ್ಲಿ ತಮ್ಮ ತಂಡಕ್ಕೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಮತ್ತು 2022 ರ ಟಿ 20 ವಿಶ್ವಕಪ್‌ನಲ್ಲಿ ಇವರ ಆಟ ತಂಡಕ್ಕೆ ನಿರ್ಣಾಯಕವಾಗಲಿದೆ.

ಐರ್ಲೆಂಡ್ ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸುವ ಮೂಲಕ ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯಿತು. ಅವರು ತಮ್ಮ ಮೊದಲ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಸೋತರು ಆದರೆ ತಮ್ಮ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು.

ICC T20 World Cup 2022: Sri Lanka Vs Ireland, Pitch Report, Probable XI, Weather Update

ಅನುಭವಿ ಆಟಗಾರರಾದ ಪಾಲ್ ಸ್ಟರ್ಲಿಂಗ್ ಮತ್ತು ಆಂಡ್ರ್ಯೂ ಬಾಲ್ಬಿರ್ನಿ ತಮ್ಮ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಕರ್ಟಿಸ್ ಕ್ಯಾಂಫರ್ ಮತ್ತು ಜಾರ್ಜ್ ಡಾಕ್ರೆಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೂಡ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರೆಸಲು ನೋಡುತ್ತಾರೆ.

ಅಕ್ಟೋಬರ್ 23ರಂದು ಭಾನುವಾರ ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಈ ಪಂದ್ಯ ಆರಂಭವಾಗಲಿದೆ.

ಬೆಲ್ಲೆರಿವ್ ಓವಲ್‌ ಪಿಚ್ ವರದಿ

ಬೆಲ್ಲೆರಿವ್ ಓವಲ್‌ನಲ್ಲಿರುವ ಪಿಚ್ ಸಮತೋಲಿತ ಟ್ರ್ಯಾಕ್ ಆಗಿದೆ. ಪಂದ್ಯದ ಆರಂಭದಲ್ಲಿ ಬೌಲರ್‌ಗಳಿಗೆ ಸಹಾಯ ಸಿಗಲಿದೆ. ಆದರೆ, ಕೆಲವು ಓವರ್ ನಂತರ ಬ್ಯಾಟರ್ ಗಳು ಸುಲಭವಾಗಿ ರನ್ ಗಳಿಸಬಹುದಾಗಿದೆ.

ಹೋಬರ್ಟ್‌ನಲ್ಲಿ ತಾಪಮಾನವು 9-12 ಡಿಗ್ರಿ ಸೆಲ್ಸಿಯಸ್‌ನ ನಡುವೆ ಇರುವ ಸಾಧ್ಯತೆ ಇದೆ. ಭಾನುವಾರದಂದು ಮಳೆಯ ಮುನ್ಸೂಚನೆ ಇದೆ ಮತ್ತು ಆಟದ ಸಮಯದಲ್ಲಿ ಅಡಚಣೆ ಉಂಟುಮಾಡುವ ಸಾಧ್ಯತೆ ಇದೆ.

ICC T20 World Cup 2022: Sri Lanka Vs Ireland, Pitch Report, Probable XI, Weather Update

ಉಭಯ ತಂಡಗಳ ಸಂಭವನೀಯ XI

ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಭಾನುಕ ರಾಜಪಕ್ಸೆ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಬಿನೂರ ಫೆರ್ನಾಂಡೋ, ಮಹೇಶ್ ತೀಕ್ಷಣ, ಲಹಿರು ಕುಮಾರ

ಐರ್ಲೆಂಡ್ : ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ , ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಸಿಮಿ ಸಿಂಗ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್

Story first published: Saturday, October 22, 2022, 19:26 [IST]
Other articles published on Oct 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+