SL vs NAM : ಅರ್ಹತಾ ಸುತ್ತಿನ ಮೊದಲನೇ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ, ಉಭಯ ತಂಡಗಳ ಬಲಾಬಲ, ಪಿಚ್ ರಿಪೋರ್ಟ್

ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳು ಅಕ್ಟೋಬರ್ 16ರಂದು ಆರಂಭವಾಗಲಿವೆ. ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ನಮೀಬಿಯಾ ತಂಡದ ವಿರುದ್ಧ ಸೆಣಸಲಿದೆ. ಯುಎಇ, ನೆದರ್ಲ್ಯಾಂಡ್ಸ್, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಲಿವೆ.
ಐಸಿಸಿ ಟಿ20 ವಿಶ್ವಕಪ್ 2022 ರ ಅರ್ಹತಾ ಸುತ್ತಿನಲ್ಲಿ ಎರಡು ಗುಂಪುಗಳಿವೆ. ಅವುಗಳು ಎ ಗುಂಪು ಮತ್ತು ಬಿ ಗುಂಪು. ಎ ಗುಂಪಿನಲ್ಲಿ 4 ತಂಡಗಳಿವೆ, ಶ್ರೀಲಂಕಾ, ನಮೀಬಿಯಾ, ಯುಎಇ, ಮತ್ತು ನೆದರ್ಲ್ಯಾಂಡ್ಸ್. ಬಿ ಗುಂಪಿನಲ್ಲಿ 4 ತಂಡಗಳಿವೆ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್.
ಐಸಿಸಿ ಟಿ20 ವಿಶ್ವಕಪ್ 2022ರ ಕ್ವಾಲಿಫೈಯರ್ ಸುತ್ತಿನಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಎ ಗುಂಪಿನ ತಂಡಗಳು ಗುಂಪಿನಲ್ಲಿರುವ ಇತರ ತಂಡಗಳೊಂದಿಗೆ ಒಂದು ಪಂದ್ಯವನ್ನು ಆಡುತ್ತವೆ. ಅದೇ ರೀತಿ, ಬಿ ಗುಂಪಿನ ತಂಡಗಳು ಗುಂಪಿನ ಇತರ ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡುತ್ತವೆ.

ಸೂಪರ್ 12 ಹಂತಕ್ಕೆ ಪ್ರವೇಶಸಲಿವೆ 4 ತಂಡಗಳು
ಪ್ರತಿ ಗುಂಪಿನಲ್ಲಿ 4 ತಂಡಗಳಿರುವುದರಿಂದ, ಕ್ವಾಲಿಫೈಯರ್ ಸುತ್ತಿನಲ್ಲಿ ಪ್ರತಿ ತಂಡವು 3 ಪಂದ್ಯಗಳನ್ನು ಆಡುತ್ತದೆ. ಕ್ವಾಲಿಫೈಯರ್ ಸುತ್ತಿನ ಅಂತ್ಯದ ನಂತರ, ಗ್ರೂಪ್ ಎ ಮತ್ತು ಗ್ರೂಪ್ ಬಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳು ಸೂಪರ್ 12 ಸುತ್ತಿಗೆ ಅರ್ಹತೆ ಪಡೆಯುತ್ತವೆ.
ಏಷ್ಯಾಕಪ್ ಚಾಂಪಿಯನ್ ಆಗಿರುವ ಶ್ರೀಲಂಕಾ ಆತ್ಮವಿಶ್ವಾಸದಿಂದಲೇ ಟೂರ್ನಿಗೆ ಲಗ್ಗೆ ಇಟ್ಟಿದೆ. ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಅಲ್ಲದೆ ಟೂರ್ನಿಯ ಪೂರ್ವ ಫೇವರಿಟ್ ಭಾರತವನ್ನೂ ಸೋಲಿಸಿದರು.
Ind vs Aus ಅಭ್ಯಾಸ ಪಂದ್ಯ: ಭಾರತ ವಿರುದ್ಧ ಸ್ಟಾರ್ ಆಟಗಾರರನ್ನ ಆಸ್ಟ್ರೇಲಿಯಾ ಕಣಕ್ಕಿಳಿಸುವುದು ಕಷ್ಟಸಾಧ್ಯ!

ಹೆಚ್ಚಿನ ಪಂದ್ಯಗಳನ್ನಾಡದ ನಮೀಬಿಯಾ
ಕಳೆದ ವರ್ಷ ನಮೀಬಿಯಾ ಟಿ20 ವಿಶ್ವಕಪ್‌ನಲ್ಲಿ ಆಡಿತ್ತು. ಅಂದಿನಿಂದ, ಅವರು ಹೆಚ್ಚು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಗೆರ್ಹಾರ್ಡ್ ಎರಾಸ್ಮಸ್ ತಂಡವನ್ನು ಮುನ್ನಡೆಸಲಿದ್ದಾರೆ. ಜಾನ್ ಫ್ರಿಲಿಂಕ್, ಡೇವಿಡ್ ವೈಸ್, ರೂಬೆನ್ ಟ್ರಂಪೆಲ್ಮನ್, ಝೇನ್ ಗ್ರೀನ್ ಮತ್ತು ಬರ್ನಾರ್ಡ್ ಸ್ಕೋಲ್ಟ್ಜ್ ಅವರು ಹಿಂದಿನ ಟಿ20 ವಿಶ್ವಕಪ್‌ನಲ್ಲಿಯೂ ಆಡಿದ್ದರು.
ಶ್ರೀಲಂಕಾ ತಂಡಕ್ಕೆ ನಮೀಬಿಯಾ ಹೆಚ್ಚಿನ ಸ್ಪರ್ಧೆ ಒಡ್ಡಲು ಚಿಂತಿಸಬಹುದು. ಆದರೂ, ಎರಡೂ ತಂಡಗಳನ್ನು ನೋಡಿದಾಗ ಶ್ರೀಲಂಕಾ ಸಾಕಷ್ಟು ಬಲಿಷ್ಠವಾಗಿದೆ. ಆದರೂ, ಕ್ರಿಕೆಟ್‌ನಲ್ಲಿ ಯಾವಾಗ ಬೇಕಾದರೂ ಅಚ್ಚರಿಯ ಫಲಿತಾಂಶಗಳು ಹೊರಬೀಳಬಹುದಾಗಿದೆ.

ಹೈ ಸ್ಕೋರಿಂಗ್ ಪಂದ್ಯವಾಗುವ ಸಾಧ್ಯತೆ
ಆಸ್ಟ್ರೇಲಿಯಾದಲ್ಲಿ ಪಂದ್ಯಕ್ಕೂ ಮುನ್ನ ಸಾಕಷ್ಟು ಮಳೆಯಾಗಿದೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಕೊನೆಯ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ಕೊನೆಗೊಂಡಿತ್ತು. ಶ್ರೀಲಂಕಾ ಮತ್ತು ನಮೀಬಿಯಾ ನಡುವಿನ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ (ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆ) ಆರಂಭವಾಗಲಿದೆ. ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.
ಮಧ್ಯಾಹ್ನದ ತಾಪಮಾನವು ಸುಮಾರು 16 ಡಿಗ್ರಿಗಳಷ್ಟಿರುತ್ತದೆ ಮತ್ತು ಮಳೆ ಪಂದ್ಯಕ್ಕೆ ಅಡ್ಡಿಯುಂಟು ಮಾಡುವ ಅಪಾಯವಿದೆ. ಸೈಮಂಡ್ಸ್ ಅಂಗಳದಲ್ಲಿ ಈವರೆಗೆ ಕೇವಲ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ 174 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ. ಈ ಪಿಚ್ ಬ್ಯಾಟರ್ ಗಳಿಗೆ ಅನುಕೂಲಕರವಾಗಿದ್ದು, ಹೆಚ್ಚಿನ ರನ್‌ಗಳನ್ನು ನಿರೀಕ್ಷಿಸಬಹುದಾಗಿದೆ. ಅಲ್ಲದೆ ಶ್ರೀಲಂಕಾ ತಂಡ ಬಲಿಷ್ಠವಾಗಿದ್ದು, ಸುಲಭವಾಗಿ ಗೆಲುವು ಸಾಧಿಸಲು ನೋಡುತ್ತದೆ.

ಉಭಯ ತಂಡಗಳ ವಿವರ
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ದುಷ್ಮಂತ ಚಮೀರ, ಜೆಫನ್ ವಂದರ್, ಲಾಹಿರು ಕುಮಾರ, ಚರಿತ್ ಅಸಲಂಕ
ನಮೀಬಿಯಾ: ಸ್ಟೀಫನ್ ಬಾರ್ಡ್, ಡೇವಿಡ್ ವೈಸ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜಾನ್ ನಿಕೋಲ್ ಲಾಫ್ಟಿ-ಈಟನ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಝೇನ್ ಗ್ರೀನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್, ತಂಗೇನಿ ಲುಂಗಮೆನಿ, ಬೆನ್ ಶಿಕೊಂಗೊ, ಮೈಕೆಲ್ ವ್ಯಾನ್ ಲಿಂಗೆನ್, ಲೋಹಾಂಡ್ರೆ ಲೌರೆನ್ಸ್, ಕಾರ್ಲ್ ಬಿರ್ಕೆನ್‌ಸ್ಟಾಕ್, ದಿವಾನ್ ಲಾ ಕಾಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications