Netherlands vs Sri Lanka : ಶ್ರೀಲಂಕಾ Vs ನೆದರ್ಲ್ಯಾಂಡ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ

2022 ರ ಐಸಿಸಿ ಪುರುಷರ T20 ವಿಶ್ವಕಪ್‌ನ 9 ನೇ ಪಂದ್ಯದಲ್ಲಿ ಶ್ರೀಲಂಕಾವನ್ನು ನೆದರ್ಲ್ಯಾಂಡ್ಸ್ ಅನ್ನು ಎದುರಿಸಲಿದೆ. ಗೀಲಾಂಗ್‌ನಲ್ಲಿರುವ ಸೈಮಂಡ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಅಕ್ಟೋಬರ್ 20ರಂದು ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಈ ಪಂದ್ಯ ಆರಂಭವಾಗಲಿದೆ.
ಶ್ರೀಲಂಕಾ ತನ್ನ ಮೊದಲನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೋತ ನಂತರ ತನ್ನ ಎರಡನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಭರ್ಜರಿ ಸಾಧಿಸಿದೆ. ಯುಎಇ ವಿರುದ್ಧದ ದೊಡ್ಡ ಗೆಲುವು ಶ್ರೀಲಂಕಾ ರನ್ ರೇಟ್ ಉತ್ತಮ ಪಡಿಸಲು ಸಹಾಯ ಮಾಡಿತು. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೆ ಎ ಗುಂಪಿಯನಲ್ಲಿ ಸೂಪರ್ 12 ಹಂತ ಪ್ರವೇಶಿಸಲು ತಂಡಗಳ ನಡುವೆ ಭಾರಿ ಪೈಪೋಟಿ ನಡೆಯಲಿದೆ.
ಮೊದಲನೇ ಪಂದ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದ ಶ್ರೀಲಂಕಾ ಬೌಲರ್ ಗಳು, ಯುಎಇ ವಿರುದ್ಧದ ಪಂದ್ಯದಲ್ಲಿ ಮಿಂಚಿದರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು. ಪಾತುಮ್ ನಿಸ್ಸಾಂಕ 74 ರನ್ ಗಳಿಸುವ ಮೂಲಕ ಶ್ರೀಲಂಕಾ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ನಂತರ ಯುಎಇ ತಂಡವನ್ನು ಕೇವಲ 73 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 79 ರನ್‌ಗಳ ಬೃಹತ್ ಜಯ ಸಾಧಿಸಿದರು.
ದುಷ್ಮಂತ ಚಮೀರ ಮತ್ತು ವನಿಂದು ಹಸರಂಗ ತಲಾ ಮೂರು ವಿಕೆಟ್‌ಗಳನ್ನು ಪಡೆದು ಗೆಲುವಿಗೆ ನೆರವಾದರು. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸುವ ಭರವಸೆಯಲ್ಲಿದ್ದಾರೆ.
ಮತ್ತೊಂದೆಡೆ, ನೆದರ್ಲ್ಯಾಂಡ್ಸ್ ತಾವು ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಮೊದಲನೇ ಪಂದ್ಯದಲ್ಲಿ ಯುಎಇ ವಿರುದ್ಧ ಗೆಲುವು ಸಾಧಿಸಿದ್ದ ಅವರು ಎರಡನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆಲುವು ಸಾಧಿಸಿದರು.
ನೆದರ್ಲ್ಯಾಂಡ್ಸ್ ಬೌಲರ್‌ಗಳು ತಮ್ಮ 20 ಓವರ್‌ಗಳಲ್ಲಿ ನಮೀಬಿಯಾವನ್ನು 121 ರನ್‌ಗಳಿಗೆ ನಿರ್ಬಂಧಿಸಿದರು. ನೆದರ್ಲ್ಯಾಂಡ್ಸ್‌ನ ಬಾಸ್ ಡಿ ಲೀಡೆ ಎರಡು ವಿಕೆಟ್ ಪಡೆದರು. ವಿಕ್ರಮ್‌ಜಿತ್ ಸಿಂಗ್ (39), ಮ್ಯಾಕ್ಸ್ ಒ'ಡೌಡ್ (35), ಮತ್ತು ಬಾಸ್ ಡಿ ಲೀಡೆ (30*) ಉತ್ತಮ ಬ್ಯಾಟಿಂಗ್ ನೆರವಿನಿಂದ ನೆದರ್‌ಲ್ಯಾಂಡ್ಸ್ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.

ಸೈಮಂಡ್ಸ್ ಸ್ಟೇಡಿಯಂ ಪಿಚ್ ವರದಿ
ಸೈಮಂಡ್ಸ್ ಸ್ಟೇಡಿಯಂನಲ್ಲಿನ ಪಿಚ್ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಚೆಂಡು ಸ್ವಿಂಗ್ ಆಗುತ್ತದೆ. ಬ್ಯಾಟರ್‌ಗಳು ತಮ್ಮ ಸ್ಟ್ರೋಕ್‌ಗಳನ್ನು ಮುಕ್ತವಾಗಿ ಆಡುವ ಮೊದಲು ಎಚ್ಚರಿಕೆಯಿಂದ ಕೆಲವು ಎಸೆತಗಳನ್ನು ಎದುರಿಸಬೇಕಾಗುತ್ತದೆ. ಸ್ಪಿನ್ನರ್‌ಗಳು ಆಟದ ಕೊನೆಯ ಹಂತಗಳಲ್ಲಿ ಪಿಚ್‌ನ ಸಹಾಯ ಪಡೆಯಬಹುದು.
ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಮಾಡಿದರೆ ಉತ್ತಮ ಮೊತ್ತ ಕಲೆ ಹಾಕಬಹುದು. ಎರಡನೇ ಇನ್ನಿಂಗ್ಸ್ ವೇಳೆಗೆ ಪಿಚ್ ಬೌಲಿಂಗ್‌ಗೆ ಸಹಕಾರಿಯಾಗಿರುತ್ತದೆ. ಜಿಲಾಂಗ್‌ನಲ್ಲಿ ತಾಪಮಾನವು 12 ಮತ್ತು 19 ಡಿಗ್ರಿ ಸೆಲ್ಸಿಯಸ್‌ನ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ XI: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ , ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ದುಷ್ಮಂತ ಚಮೀರ/ಲಹಿರು ಕುಮಾರ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ.
ನೆದರ್ಲ್ಯಾಂಡ್ಸ್ ಸಂಭಾವ್ಯ ಪ್ಲೇಯಿಂಗ್ XI : ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡೆ, ಕಾಲಿನ್ ಅಕರ್ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ರೋಲೋಫ್ ವ್ಯಾನ್ ಡೆರ್ ಮೆರ್ವೆ, ಟಿಮ್ ಪ್ರಿಂಗಲ್, ಟಿಮ್ ವ್ಯಾನ್ ಡೆರ್ ಗುಗ್ಟನ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications