T20 World Cup 2022: ಯುಎಇ Vs ನೆದರ್ಲ್ಯಾಂಡ್ಸ್ ಪ್ಲೇಯಿಂಗ್ ಇಲೆವೆನ್, ಪಿಚ್ ರಿಪೋರ್ಟ್ ವರದಿ

ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ರ ಎ ಗುಂಪಿನ ಎರಡನೇ ಪಂದ್ಯವು ಭಾನುವಾರ (ಅಕ್ಟೋಬರ್ 16) ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೆದರ್‌ಲ್ಯಾಂಡ್ಸ್ ಈ ಪಂದ್ಯದಲ್ಲಿ ಸೆಣಸಲಿದೆ. ಎರಡೂ ತಂಡಗಳಿಗೆ ಗೆಲುವಿನ ಆರಂಭವನ್ನು ಪಡೆಯಲು ಬಯಸುವುದರಿಂದ ಎರಡೂ ತಂಡಗಳ ನಡುವೆ ಭಾರಿ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.
ಚುಂಡಂಗಪೊಯಿಲ್ ರಿಜ್ವಾನ್ ನೇತೃತ್ವದ ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತು. ಎರಡನೇ ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ಲೆಂಡ್ ಅನ್ನು ಎದುರಿಸಬೇಕಾಗಿತ್ತು ಆದರೆ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಯುನೈಟೆಡ್ ಅರಬ್ ಎಮಿರೇಟ್ಸ್ ಈಗ ತಮ್ಮ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಯುಎಇ ತಂಡದಲ್ಲಿ ಚಿರಾಗ್ ಸೂರಿ, ಮುಹಮ್ಮದ್ ವಸೀಮ್ ಮತ್ತು ಅಹ್ಮದ್ ರಜಾ ಉನ್ನತ ಮಟ್ಟದಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ ಮತ್ತು ಅವರ ಕೊಡುಗೆಗಳು ಸ್ಪರ್ಧೆಯಲ್ಲಿ ಯುಎಇಯ ಯಶಸ್ಸಿಗೆ ಪ್ರಮುಖವಾಗಿವೆ.
ಮತ್ತೊಂದೆಡೆ ನೆದರ್ಲೆಂಡ್ಸ್, ಮೊದಲನೇ ಅಭ್ಯಾಸ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋಲನುಭವಿಸಿತು. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಸ್ಕಾಟ್ ಎಡ್ವರ್ಡ್ಸ್ ನೆದರ್ಲೆಂಡ್ಸ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.
ರೋಲೋಫ್ ವ್ಯಾನ್ ಡೆರ್ ಮೆರ್ವೆ, ಸ್ಟೀಫನ್ ಮೈಬರ್ಗ್ ಮತ್ತು ಟಾಮ್ ಕೂಪರ್ ಅವರಂತಹ ಅನುಭವಿ ಆಟಗಾರರು ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನೆದರ್ಲ್ಯಾಂಡ್ಸ್ ಉತ್ತಮ ತಂಡವನ್ನು ಹೊಂದಿದೆ ಮತ್ತು ಅವರು ಒಗ್ಗಟ್ಟಿನಿಂದ ಆಟವಾಡಿದರೆ, ಅವರನ್ನು ಸೋಲಿಸುವುದು ಯುಎಇ ತಂಡಕ್ಕೆ ಕಷ್ಟವಾಗಲಿದೆ.

ಪಂದ್ಯದ ಬಗ್ಗೆ ವಿವರ
ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ (ಸ್ಥಳೀಯ ಕಾಲಮಾನ ಸಂಜೆ 7 ಗಂಟೆ) ಆರಂಭವಾಗಲಿದೆ. ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಗೀಲಾಂಗ್‌ನಲ್ಲಿ ತಾಪಮಾನವು 4 ಮತ್ತು 16 ಡಿಗ್ರಿ ಸೆಲ್ಸಿಯಸ್‌ನ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ.
ಸೈಮಂಡ್ಸ್ ಸ್ಟೇಡಿಯಂನ ಪಿಚ್ ಬೌಲಿಂಗ್ ಸ್ನೇಹಿ ಟ್ರ್ಯಾಕ್ ಆಗಿದೆ. ವೇಗಿಗಳಿಗೆ ಆರಂಭದಲ್ಲಿ ಹೆಚ್ಚಿನ ಸಹಕಾರ ಸಿಗಲಿದೆ. ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಸ್ವಲ್ಪ ಸಮಯವನ್ನು ಕಳೆಯಬೇಕಾಗುತ್ತದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಯುಎಇ ಸಂಭಾವ್ಯ ಪ್ಲೇಯಿಂಗ್ XI: ಚುಂಡಂಗಪೊಯಿಲ್ ರಿಜ್ವಾನ್ (ನಾಯಕ), ಚಿರಾಗ್ ಸೂರಿ, ಮುಹಮ್ಮದ್ ವಸೀಮ್, ವೃತ್ಯ ಅರವಿಂದ್ , ಬಾಸಿಲ್ ಹಮೀದ್, ಅಲಿಶನ್ ಶರಫು, ಕಾಶಿಫ್ ದೌದ್, ಅಹ್ಮದ್ ರಜಾ, ಜಹೂರ್ ಖಾನ್, ಕಾರ್ತಿಕ್ ಮೆಯ್ಯಪ್ಪನ್, ಜುನೈದ್ ಸಿದ್ದಿಕ್.
ನೆದರ್ಲ್ಯಾಂಡ್ಸ್ ಸಂಭಾವ್ಯ ಪ್ಲೇಯಿಂಗ್ XI: ಸ್ಟೀಫನ್ ಮೈಬರ್ಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಫ್ರೆಡ್ ಕ್ಲಾಸೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಪಾಲ್ ವ್ಯಾನ್ ಮೀಕೆರೆನ್, ಬ್ರಾಂಡನ್ ಗ್ಲೋವರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications