Scotland vs Ireland: ಕರ್ಟಿಸ್ ಕ್ಯಾಂಫರ್ ಸ್ಫೋಟಕ ಬ್ಯಾಟಿಂಗ್, ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಐರ್ಲೆಂಡ್

ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್ ಸ್ಫೋಟಕ ಆಟದ ನೆರವಿನಿಂದಾಗಿ ಐರ್ಲೆಂಡ್ ತಂಡ ಸ್ಕಾಟ್ಲೆಂಡ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
2022 ರ ಟಿ 20 ವಿಶ್ವಕಪ್‌ನ ಮೊದಲ ಸುತ್ತಿನ ಬಿ ಗುಂಪಿನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಕಾಟ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಸ್ಕಾಟ್ಲೆಂಡ್ ಆತ್ಮವಿಶ್ವಾಸದಿಂದಲೇ ಇನ್ನಿಂಗ್ಸ್ ಆರಂಭಿಸಿತು.
ಕಳೆದ ಪಂದ್ಯದಲ್ಲಿ ಮಿಂಚಿದ್ದ ಜಾರ್ಜ್ ಮುನ್ಸಿ ಒಂದು ರನ್ ಆಗುವಷ್ಟರಲ್ಲಿ ಔಟ್ ಆಗುವ ಮೂಲಕ ಸ್ಕಾಟ್ಲೆಂಡ್ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ಮೈಕೆಲ್ ಜೋನ್ಸ್ ಸ್ಕಾಟ್ಲೆಂಡ್ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಸ್ಕಾಟ್ಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿದರು.
ಈ ಬೃಹತ್ ಮೊತ್ತವನ್ನು ಐರ್ಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದರು. ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್ ಅವರ ಅಮೋಘ ಆಟದ ನೆರವಿನಿಂದ ಇನ್ನೂಒಂದು ಓವರ್ ಬಾಕಿ ಇರುವಂತೆಯೇ ಗುರಿ ತಲುಪುವ ಮೂಲಕ 6 ವಿಕೆಟ್‌ಗಳ ಜಯ ದಾಖಲಿಸಿತು. ಈ ಮೂಲಕ ಸೂಪರ್ 12 ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮೈಕೆಲ್ ಜೋನ್ಸ್ ಭರ್ಜರಿ ಅರ್ಧಶತಕ
ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಸ್ಕಾಟ್ಲೆಂಡ್ ನಂತರ ಸುಲಭವಾಗಿ ರನ್ ಗಳಿಸಿತು. ಆರಂಭಿಕ ಆಟಗಾರ ಮೈಕೆಲ್ ಜೋನ್ಸ್ ಮ್ಯಾಥ್ಯೂ ಕ್ರಾಸ್ ಜೊತೆಗೂಡಿ ಉತ್ತಮ ಜೊತೆಯಾಟ ಆಡಿದರು. ಮ್ಯಾಥ್ಯೂ ಕ್ರಾಸ್ 21 ಎಸೆತಗಳಲ್ಲಿ 28 ರನ್ ಗಳಿಸಿದರು. ನಾಯಕ ರಿಚಿ ಬೆರಿಂಗ್ಟನ್ 27 ಎಸೆತಗಳಲ್ಲಿ 37 ರನ್ ಗಳಿಸಿದರು. ಮೈಕೆಲ್ ಜೋನ್ಸ್ 55 ಎಸೆತಗಳಲ್ಲಿ 6 ಬೌಂಡರಿ ನಾಲ್ಕು ಸಿಕ್ಸರ್ ಸಹಿತ 86 ರನ್ ಗಳಿಸಿದರು. ಮೈಕೆಲ್ ಲೀಸ್ಕ್ 13 ಎಸೆತಗಳಲ್ಲಿ 17 ರನ್ ಗಳಿಸಿದರು.
ಜೋನ್ಸ್, ಕ್ರಾಸ್, ರಿಚಿ ಬೆರಿಂಗ್ಟನ್ ಆಟದ ನೆರವಿನಿಂದ ಸ್ಕಾಟ್ಲೆಂಡ್ ಅಂತಿಮವಾಗಿ 20 ಓವರ್ ಗಳಲ್ಲಿ 176 ರನ್ ಗಳಿಸಿದರು. ಐರ್ಲೆಂಡ್ ತಂಡದ ಪರವಾಗಿ, ಕರ್ಟಿಸ್ ಕ್ಯಾಂಫರ್ 2 ಓವರ್ ಗಳಲ್ಲಿ 9 ರನ್ ನೀಡಿ ಎರಡು ವಿಕೆಟ್ ಪಡೆದರು. ಉಳಿದಂತೆ ಮಾರ್ಕ್ ಅಡೇರ್, ಜೋಶುವಾ ಲಿಟಲ್ ತಲಾ ಒಂದು ವಿಕೆಟ್ ಪಡೆದರು.
ಟಿ20 ವಿಶ್ವಕಪ್ 2022: IND vs PAK ಪಂದ್ಯಕ್ಕೂ ಮುನ್ನ ತಮ್ಮದೇ ತಂಡವನ್ನು ಟೀಕಿಸಿದ ಮಿಸ್ಬಾ-ಉಲ್-ಹಕ್

ಐರ್ಲೆಂಡ್ ಆರಂಭಿಕ ಬ್ಯಾಟರ್ ಗಳು ವಿಫಲ
ಬೃಹತ್ ಮೊತ್ತವನ್ನು ಬೆನ್ನತ್ತಿದ ಐರ್‍ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. ಪೌಲ್ ಸ್ಟರ್ಲಿಂಗ್ 10 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಔಟಾದರು. ನಾಯಕ ಆಂಡ್ರ್ಯೂ ಬಾಲ್ಬಿರ್ನಿ 12 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು.
ನಂತರ ಬಂದ ಲೋರ್ಕನ್ ಟಕರ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ, 17 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 20 ರನ್ ಗಳಿಸಿ ಔಟಾದರು. ಹ್ಯಾರಿ ಟೆಕ್ಟರ್ 16 ಎಸೆತಗಳಲ್ಲಿ 14 ರನ್ ಗಳಿಸಿ ವೈಫಲ್ಯ ಅನುಭವಿಸಿದರು. 9.3 ಓವರ್ ಗಳಲ್ಲಿ 61 ರನ್ ಆಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡ ಐರ್ಲೆಂಡ್ ಸೋಲಿನ ಭೀತಿಯಲ್ಲಿತ್ತು.
ಆದರೆ, ನಂತರ ಬಂದ ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್ ಸ್ಕಾಟ್ಲೆಂಡ್ ಬೌಲಿಂಗ್ ಅನ್ನು ದಿಟ್ಟವಾಗಿ ಎದುರಿಸಿದರು. ಜಾರ್ಜ್ ಡಾಕ್ರೆಲ್ ಎಚ್ಚರಿಕೆಯಿಂದ ರನ್ ಗಳಿಸಿದರೆ, ಕರ್ಟಿಸ್ ಕ್ಯಾಂಫರ್ ಮಾತ್ರ ಸ್ಫೋಟಕ ಆಟವಾಡಿದರು. 32 ಎಸೆತಗಳಲ್ಲಿ 7 ಬೌಂಡರಿ ಎರಡು ಭರ್ಜರಿ ಸಿಕ್ಸರ್ ಸಹಿತ ಅಜೇಯ 72 ರನ್ ಗಳಿಸಿದರು. ಜಾರ್ಜ್ ಡಾಕ್ರೆಲ್ 27 ಎಸೆತಗಳಲ್ಲಿ 4 ಬೌಂಡರಿ ಒಂದು ಸಿಕ್ಸರ್ ಸಹಿತ ಅಜೇಯ 39 ರನ್ ಗಳಿಸಿದರು. ಈ ಜೋಡಿ 59 ಎಸೆತಗಳಲ್ಲಿ ಅಜೇಯ 119 ರನ್ ಜೊತೆಯಾಟ ಆಡುವ ಮೂಲಕ ಐರ್ಲೆಂಡ್ ಗೆಲುವಿಗೆ ಕಾರಣವಾದರು.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಸ್ಕಾಟ್ಲೆಂಡ್ ಪ್ಲೇಯಿಂಗ್ XI: ಜಾರ್ಜ್ ಮುನ್ಸಿ, ಮೈಕೆಲ್ ಜೋನ್ಸ್, ಮ್ಯಾಥ್ಯೂ ಕ್ರಾಸ್, ರಿಚಿ ಬೆರಿಂಗ್ಟನ್ (ನಾಯಕ), ಕ್ಯಾಲಮ್ ಮ್ಯಾಕ್ಲಿಯೋಡ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ ವೀಲ್
ಐರ್ಲೆಂಡ್ ಪ್ಲೇಯಿಂಗ್ XI: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ , ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಸಿಮಿ ಸಿಂಗ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications