ಟಿ20 ವಿಶ್ವಕಪ್‌ಗೆ ಟಿಕೆಟ್ ಮಾರಟ ಆರಂಭ
ಮುಂದಿನ ವರ್ಷದಲ್ಲಿ ಟಿ20 ವಿಶ್ವಕಪ್ ಆಯೋಜನೆ ಆಗಲಿದೆ. ಈ ಬಾರಿಯ ವಿಶ್ವಕಪ್‌ನ್ನು ಭಾರತ ಹಾಗೂ ಶ್ರೀಲಂಕಾ ತಂಡಗಳು ಜಂಟಿಯಾಗಿ ಆಯೋಜಿಸುತ್ತಿವೆ. ಫೆಬ್ರವರಿ 7 ರಿಂದ ಮಾರ್ಚ್ 8ರ ವರೆಗೆ ಟಿ20 ವಿಶ್ವಕಪ್‌ಗಳು ನಡೆಯಲಿವೆ. ಭಾರತದ ಐದು ನಗರಗಳು ಹಾಗೂ ಶ್ರೀಲಂಕಾ ಮೂರು ಸ್ಥಳಗಳಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಅಭಿಮಾನಿಗಳಿಗೆ ಐಸಿಸಿ ಈಗ ಗುಡ್ ನ್ಯೂಸ್ ನೀಡಿದ್ದು, ಟಿಕೆಟ್ ಮಾರಾಟ ಆರಂಭವಾಗಿದೆ.
ಐಸಿಸಿ 2026 ಟಿ20 ವಿಶ್ವಕಪ್‌ಗೆ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದೆ. ಟಿಕೆಟ್ ಮಾರಾಟಗಳು ಗುರುವಾರ ಸಂಜೆ 6:45 ರಿಂದ ಆರಂಭವಾಗಿವೆ. ಅಭಿಮಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದತ್ತ ಕರೆತರಲು ಐಸಿಸಿ ಹೊಸ ಪ್ಲ್ಯಾನ್ ಮಾಡಿದೆ. ಐಸಿಸಿ ತನ್ನ ಪ್ರಕಟಣೆಯಲ್ಲಿ ಕನಿಷ್ಠ ಟಿಕೆಟ್ ಬೆಲೆಯನ್ನು ಕೇವಲ ₹100 ಎಂದು ನಿಗದಿಪಡಿಸಿದೆ. ಭಾರತದಲ್ಲಿ ನೂರು ರೂಪಾಯಿ ಕನಿಷ್ಠ ಟಿಕೆಟ್ ದರವಾದರೆ, ಶ್ರೀಲಂಕಾದಲ್ಲಿ 1,000 ರೂಪಾಯಿ ಎಂದು ನಿಗದಿ ಪಡಿಸಿದೆ.

ಅಭಿಮಾನಿಗಳನ್ನು ತಮ್ಮ ಟಿಕೆಟ್‌ಗಳನ್ನು https://tickets.cricketworldcup.com ಅಲ್ಲಿ ಖರೀದಿಸಬಹುದಾಗಿದೆ. ಐಸಿಸಿ ಈಗ ಗುಂಪು ಹಂತದ ಟಿಕೆಟ್‌ಗಳ ಮಾರಾಟವನ್ನು ಮಾತ್ರ ಆರಂಭಿಸಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. 29 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ಆಡಲಾಗುತ್ತದೆ. ಫೆ.15 ರಂದು ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯ ಶ್ರೀಲಂಕಾದ ಆರ್.ಪ್ರೇಮದಾಸ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಪಡೆಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
20 ತಂಡಗಳನ್ನು 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲೂ ಅಗ್ರ 2 ಸ್ಥಾನ ಪಡೆದ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿವೆ. ಸೂಪರ್ 8 ಹಂತವನ್ನು ಸಹ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಈ ಹಂತದಲ್ಲಿ ಅಗ್ರ 2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಪಾಕಿಸ್ತಾನ ನಾಕೌಟ್ ಹಂತಕ್ಕೆ ಅರ್ಹತೆ ಪಡೆದರೆ, ಆ ಪಂದ್ಯಗಳನ್ನು ಸಹ ಶ್ರೀಲಂಕಾದಲ್ಲಿ ಆಡಲಿದೆ.
ಟಿ20 ವಿಶ್ವಕಪ್ 2024: ಗುಂಪುಗಳ ವಿವರಣೆ
A ಗುಂಪು- ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಅಮೆರಿಕ
B ಗುಂಪು- ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್
C ಗುಂಪು- ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡಾ, ಪಪುವಾ ನ್ಯೂಗಿನಿ
D ಗುಂಪು- ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications