ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ: 3ನೇ ಸ್ಥಾನಕ್ಕೆ ಕುಸಿದ ರಾಹುಲ್, 6ನೇ ಸ್ಥಾನದಲ್ಲಿ ಕೊಹ್ಲಿ ಸ್ಥಿರ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ICC) ಬುಧವಾರ ಟಿ20 ಕ್ರಿಕೆಟ್‌ನ ಇತ್ತೀಚಿನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಇತ್ತೀಚೆಗೆ ಅಂತ್ಯವಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸರಣಿಯ ಆಧಾರದಲ್ಲಿ ಈ ಶ್ರೇಯಾಂಕವನ್ನು ನೀಡಲಾಗಿದೆ. ಇದರಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಒಂದು ಸ್ಥಾನಗಳ ಕುಸಿತವನ್ನು ಕಂಡಿದ್ದಾರೆ.
ಕೆಎಲ್ ರಾಹುಲ್ ಈ ಮೊದಲು ಟಿ20 ಕ್ರಿಕೆಟ್‌ನ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ ಈಗ ಅವರು ಮೂರನೇ ಸ್ಥಾನಕ್ಕಿಳಿದಿದ್ದಾರೆ. ಟಾಪ್ 10ರಲ್ಲಿರುವ ಇನ್ನೋರ್ವ ಭಾರತೀಯ ಆಟಗಾರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

2ನೇ ಸ್ಥಾನಕ್ಕೇರಿದ ಫಿಂಚ್
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಎರಡು ಸ್ಥಾನಗಳ ಏರಿಕೆ ಕಂಡಿದ್ದು 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್ ಆಟಗಾರ ಡೇವಿಡ್ ಮಲನ್ ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

ಗಪ್ಟಿಲ್ ಶ್ರೇಯಾಂಕದಲ್ಲಿ ಭಾರೀ ಯಶಸ್ಸು
ಈ ಶ್ರೇಯಾಂಕ ಪಟ್ಟಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡವರು ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗಪ್ಟಿಲ್. ನ್ಯೂಜಿಲೆಂಡ್ ಆಸಿಸ್ ವಿರುದ್ಧದ ಸರಣಿಯನ್ನು 3-2 ಅಂತರದಿಂದ ಗೆಲ್ಲಲು ಕಾರಣವಾದ ಕೀವಿಸ್‌ನ ಬ್ಯಾಟ್ಸ್‌ಮನ್ 3 ಅಂಕಗಳ ಏರಿಕೆಕಂಡು ಟಾಪ್ 10ರಲ್ಲಿ ಸ್ಥಾನ ಗಿಟ್ಟಸಿಕೊಂಡಿದ್ದಾರೆ. ಸದ್ಯ ಗಪ್ಟಿಲ್ 6ನೇ ಸ್ಥಾನದಲ್ಲಿದ್ದಾರೆ.

ಆಶ್ಟನ್ ಅಗರ್ ಕೂಡ ಉತ್ತಮ ಸ್ಥಾನ
ಇನ್ನು ಟಿ20 ಬೌಲರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆಶ್ಟನ್ ಆಗರ್ 4 ಸ್ಥಾನಗಳ ಏರಿಕೆ ಕಂಡು ಟಾಪ್ 4ರಲ್ಲಿ ಕಾಣಿಸಿಕೊಂಡಿದ್ದಾರೆ. ರಶೀದ್ ಖಾನ್ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಭಾರತದ ಯಾವ ಬೌಲರ್ ಕೂಡ ಟಾಪ್ 10ರಲ್ಲಿ ಕಾಣಿಸಿಕೊಂಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications