ICC T20I rankings: ಅಗ್ರ 5ರಲ್ಲಿ ಕೆಎಲ್ ರಾಹುಲ್, ಕುಲದೀಪ್ ಯಾದವ್

ನವದೆಹಲಿ, ಮಾರ್ಚ್ 25: ಟೀಮ್ ಇಂಡಿಯಾ ಬ್ಯಾಟ್ಸ್ಮನ್, ಕನ್ನಡಿಗ ಕೆಎಲ್ ರಾಹುಲ್ ಮತ್ತು ಬೌಲರ್ ಕುಲದೀಪ್ ಯಾದವ್ ಐಸಿಸಿ ಪ್ರಕಟಿಸಿರುವ ನೂತನ ಟಿ20 ರ್ಯಾಂಕಿಂಗ್‌ನಲ್ಲಿ ಅಗ್ರ 5ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ತಂಡ ದ್ವಿತೀಯ ಸ್ಥಾನದಲ್ಲಿ ಮತ್ತು ಪಾಕಿಸ್ತಾನ ನಂ.1 ಸ್ಥಾನದಲ್ಲಿ ಮುಂದುವರೆದಿದೆ.
ಒಟ್ಟು 726 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿರುವ ರಾಹುಲ್ 5ನೇ ಸ್ಥಾನದಲ್ಲಿದ್ದರೆ, ಕುಲದೀಪ್ ಒಟ್ಟು 699 ಪಾಯಿಂಟ್ಸ್‌ನೊಂದಿಗೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದ ಮೊದಲ ಸ್ಥಾನ ಕ್ರಮವಾಗಿ ಪಾಕ್ ಕ್ರಿಕೆಟಿಗ ಬಾಬರ್ ಅಝಾಮ್ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಪಡೆದುಕೊಂಡಿದ್ದಾರೆ.
ಐಸಿಸಿ ಪ್ರಕಟಿಸಿರುವ ನೂತನ ಟಿ20 ರ್ಯಾಂಕಿಂಗ್‌ನಲ್ಲಿ ಕ್ರಿಕೆಟ್ ತಂಡಗಳ, ಬ್ಯಾಟ್ಸ್ಮನ್‌ಗಳ, ಬೌಲರ್‌ಗಳ ಸ್ಥಿತಿಗತಿಯ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರವಿದೆ.

ಪಾಕ್ ಮೀರಿಸೋರಿಲ್ಲ
ಚುಟುಕು ಕ್ರಿಕೆಟ್ ಟಿ20ಯಲ್ಲಿ ಈ ಬಾರಿಯೂ ಪಾಕ್ ತಂಡ ಅಗ್ರ ಸ್ಥಾನಕ್ಕೆ ಗಟ್ಟಿಯಾಗಿದೆ. ಪಾಕ್ ಖಾತೆಯಲ್ಲೀಗ 135 ರೇಟಿಂಗ್ ಪಾಯಿಂಟ್ಸ್ ಇವೆ. ದ್ವಿತೀ ಸ್ಥಾನದಲ್ಲಿರುವ ಭಾರತ 122 ಅಂಕಗಳನ್ನು ಕಲೆ ಹಾಕಿದೆ. ಇನ್ನು ಇಂಗ್ಲೆಂಡ್ (121 ರೇಟಿಂಗ್ ಪಾಯಿಂಟ್ಸ್), ಆಸ್ಟ್ರೇಲಿಯಾ (120), ದಕ್ಷಿಣ ಆಫ್ರಿಕಾ (120) 3-5ರ ಸ್ಥಾನ ಪಡೆದುಕೊಂಡಿವೆ.

ಬಾಬರ್ ಟಾಪ್ ಪ್ಲೇಯರ್
ಟಿ20 ಬ್ಯಾಟ್ಸ್ಮನ್‌ಗಳಲ್ಲಿ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ಮನ್ ಬಾಬರ್ ಅಝಾಮ್ ನಂ.1 ಸ್ಥಾನದಲ್ಲಿ ಗಟ್ಟಿಯಾಗಿದ್ದಾರೆ. ಅಝಾಮ್ 885 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ. 2ರಿಂದ 5ರಲ್ಲಿ ನ್ಯೂಜಿಲ್ಯಾಂಡ್‌ನ ಕಾಲಿನ್ ಮುನ್ರೋ (825 ರೇಟಿಂಗ್), ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಆಸೀಸ್‌ನ ಆ್ಯರನ್ ಫಿಂಚ್ ಮತ್ತು ಭಾರತದ ಲೋಕೇಶ್ ರಾಹುಲ್ ಇದ್ದಾರೆ.

ರಶೀದ್ ಖಾನ್ ನಂ.1
ಟಿ20 ಬೌಲರ್‌ಗಳಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ 780 ಅಂಕಗಳೊಂದಿಗೆ ನಂ.1 ಸ್ಥಾನ ಅಲಂಕರಿಸಿದ್ದಾರೆ. ಪಾಕ್ ಕ್ರಿಕೆಟಿಗ ಶದಾಬ್ ಖಾನ್ (720) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನುಳಿದ ಶ್ರೇಯಾಂಕಗಳು ಇಂಗ್ಲೆಂಡ್‌ನ ಆದಿಲ್ ರಶೀದ್, ಪಾಕಿಸ್ತಾನದ ಇಮಾದ್ ವಾಸಿಮ್, ಭಾರತದ ಕುಲದೀಪ್ ಯಾದವ್ ಪಾಲಾಗಿವೆ.

ಮ್ಯಾಕ್ಸ್‌ವೆಲ್ ವೆರಿ ವೆಲ್
ಟಿ20 ಆಲ್ ರೌಂಡರ್‌ಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಕಮ್ ಬೌಲರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಗ್ರ ಶ್ರೇಯಾಂಕದಲ್ಲಿದ್ದಾರೆ. ಮ್ಯಾಕ್ಸ್‌ವೆಲ್ ಖಾತೆಯಲ್ಲಿ ಬರೋಬ್ಬರಿ 390 ರೇಟಿಂಗ್ ಪಾಯಿಂಟ್ಸ್‌ಗಳಿವೆ. ದ್ವಿತೀಯ ಸ್ಥಾನದಲ್ಲಿ ಬಾಂಗ್ಲಾದ ಶಕೀಬ್ ಅಲ್ ಹಸನ್ (338), ತೃತೀಯ ಸ್ಥಾನದಲ್ಲಿ ಮೊಹಮ್ಮದ್ ನಬೀ (ಅಫ್ಘಾನ್), 4ನೇ ಸ್ಥಾನದಲ್ಲಿ ಮೊಹಮ್ಮದುಲ್ಲ (ಬಾಂಗ್ಲಾ), 5ನೇ ಸ್ಥಾನದಲ್ಲಿ ರಿಚರ್ಡ್ ಬರ್ರಿಂಗ್ಟನ್ (ಸ್ಕಾಟ್ಲೆಂಡ್) ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications