ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌: ಲಂಕಾ ಪ್ರವಾಸಕ್ಕೆ ಬ್ರಹ್ಮಾಸ್ತ್ರ ಸಿದ್ಧ ಪಡಿಸಿದ ನ್ಯೂಜಿಲೆಂಡ್‌

New Zealand Test Squad

ವೆಲ್ಲಿಂಗ್ಟನ್‌, ಜುಲೈ 29: ಏಷ್ಯಾ ಭಾಗದಲ್ಲಿ ಸ್ಪಿನ್‌ ಬೌಲರ್‌ಗಳು ಪ್ರಾಬಲ್ಯ ಮೆರೆಯುತ್ತಾರೆ ಎಂಬ ಅಂಶವನ್ನು ಗಮನದಲ್ಲಿರಿಸಿ ಶ್ರೀಲಂಕಾ ಪ್ರವಾಸದ ಟೆಸ್ಟ್‌ ಸರಣಿ ಸಲುವಾಗಿ ತಂಡ ಪ್ರಕಟಿಸಿರುವ ನ್ಯೂಜಿಲೆಂಡ್‌ ತಂಡ, ನಾಲ್ವರು ಸ್ಪಿನ್ನರ್‌ಗಳಿಗೆ ಸ್ಥಾನ ನೀಡುವ ಮೂಲಕ ದ್ವೀಪ ರಾಷ್ಟ್ರದಲ್ಲಿ ಸ್ಪಿನ್‌ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪೈಪೋಟಿ ನಡೆಸಲಿದೆ. ಈ ಸಲುವಾಗಿ ಸೋಮವಾರ 15 ಆಟಗಾರರ ಟೆಸ್ಟ್‌ ತಂಡವನ್ನು ಪ್ರಕಟಿಸಿದೆ.

ಬ್ರಿಟನ್‌ ನಾಗರೀಕತ್ವ ಪಡೆಯಲು ಪ್ರಯತ್ನಿಸುತ್ತಿರುವ ಪಾಕ್‌ ಕ್ರಿಕೆಟಿಗ!ಬ್ರಿಟನ್‌ ನಾಗರೀಕತ್ವ ಪಡೆಯಲು ಪ್ರಯತ್ನಿಸುತ್ತಿರುವ ಪಾಕ್‌ ಕ್ರಿಕೆಟಿಗ!

ಎಡಗೈ ಸ್ಪಿನ್‌ ಬೌಲರ್‌ ಏಜಾಝ್‌ ಪಟೇಲ್‌, ಆಫ್‌ ಸ್ಪಿನ್ನರ್‌ ವಿಲ್‌ ಸಮರ್‌ವಿಲ್‌, ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಟಾಟ್‌ ಆಸೆಲ್‌ ತಂಡದಲ್ಲಿರುವ ನಾಲ್ವರು ಸ್ಪಿನ್‌ ಬೌಲರ್‌ಗಳಾಗಿದ್ದಾರೆ. ಶ್ರೀಲಂಕಾದ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವಾಗುವ ಕಾರಣ ಕಿವೀಸ್‌ ಪಡೆ ತನ್ನ ಸ್ಪಿನ್‌ ಬಲವನ್ನು ಹೆಚ್ಚಿಸಿದೆ.

ಕಳೆದ ವರ್ಷ ಯುಎಇನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ 2-1 ಅಂತರದ ಸರಣಿ ಜಯ ತಂದುಕೊಡುವಲ್ಲಿ ಪಟೇಲ್‌ ಮತ್ತು ಸಮರ್‌ವಿಲ್‌ ಮಹತ್ವದ ಪಾತ್ರ ವಹಿಸಿದ್ದರು. ಸರಣಿಯಲ್ಲಿ ಪಟೇಲ್‌ ಒಟ್ಟಾರೆ 13 ವಿಕೆಟ್‌ಗಳನ್ನು ಕಬಳಿಸಿದರೆ, ಅಬುದಾಭಿಯಲ್ಲಿ ನಡೆದ ಸರಣಿ ನಿರ್ಣಾಯಕ ಅಂತಿಮ ಟೆಸ್ಟ್‌ನಲ್ಲಿ ಸಮರ್‌ವಿಲ್‌ ಒಟ್ಟು 7 ವಿಕೆಟ್‌ ಪಡೆದು ಮ್ಯಾಚ್‌ ವಿನ್ನರ್‌ ಎನಿಸಿದ್ದರು.

"ಶ್ರೀಲಂಕಾದ ಪಿಚ್‌ಗಳಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಡಿಸಬೇಕಾಗುತ್ತದೆ. ಹೀಗಾಗಿ ಈಗ ಆಯ್ಕೆ ಮಾಡಲಾಗಿರುವ ಸ್ಪಿನ್ನರ್‌ಗಳು ತಂಡ ಆಡುವ 11ರ ರಚನೆಗೆ ಉತ್ತಮ ಸಂಯೋಜನೆ ಒದಗಿಸಿಕೊಡಬಲ್ಲರು. ಕಳೆದ ವರ್ಷ ಇಂಗ್ಲೆಂಡ್‌ ಕೂಡ ಶ್ರೀಲಂಕಾ ಪ್ರವಾಸದಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿ ಯಶಸ್ಸು ಕಂಡಿತ್ತು," ಎಂದು ನ್ಯೂಜಿಲೆಂಡ್‌ ತಂಡದ ಕೋಚ್‌ ಗ್ಯಾರಿ ಸ್ಟೆಡ್‌ ಹೇಳಿದ್ದಾರೆ.

ವಿಂಡೀಸ್‌ ವಿರುದ್ಧದ ಟಿ20 ಸರಣಿಗೆ ಟೀಮ್‌ ಇಂಡಿಯಾದ ಸಂಭಾವ್ಯ 11ವಿಂಡೀಸ್‌ ವಿರುದ್ಧದ ಟಿ20 ಸರಣಿಗೆ ಟೀಮ್‌ ಇಂಡಿಯಾದ ಸಂಭಾವ್ಯ 11

ನಾಲ್ವರು ಸ್ಪಿನ್ನರ್‌ಗಳ ಆಯ್ಕೆಯಿಂದಾಗಿ ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥೀ, ನೇಯ್ಲ್‌ ವ್ಯಾಗ್ನರ್‌ ಮತ್ತು ಕಾಲಿನ್‌ ಡಿ'ಗ್ರ್ಯಾಂಡ್‌ ಹೋಮ್ ಮೇಲೆ ವೇಗದ ಬೌಲಿಂಗ್‌ ಜವಾಬ್ದಾರಿ ಇದೆ. ಟಾಮ್‌ ಬ್ಲಂಡಲ್‌ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಸರಣಿಯ ಮೊದಲ ಟೆಸ್ಟ್‌ ಪಂದ್ಯ ಆಗಸ್ಟ್‌ 14ರಂದು ಗಾಲೆಯಲ್ಲಿ ಆರಂಭವಾಗಲಿದ್ದು, ದ್ವಿತೀಯ ಟೆಸ್ಟ್‌ ಪಂದ್ಯ ಕೊಲಂಬೊದಲ್ಲಿ ನಡೆಯಲಿದ್ದು ಆಗಸ್ಟ್‌ 22ರಂದು ಆರಂಭವಾಗಲಿದೆ.

ಕಿಂಗ್‌ ಕೊಹ್ಲಿ ಕಟ್ಟಿದ ಕಬಡ್ಡಿ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?ಕಿಂಗ್‌ ಕೊಹ್ಲಿ ಕಟ್ಟಿದ ಕಬಡ್ಡಿ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ಶ್ರೀಲಂಕಾ ಪ್ರವಾಸಕ್ಕೆ ನ್ಯೂಜಿಲೆಂಡ್‌ ಟೆಸ್ಟ್‌ ತಂಡ
ಕೇನ್‌ ವಿಲಿಯಮ್ಸನ್‌ (ನಾಯಕ), ಟಾಟ್‌ ಆಸೆಲ್‌, ಟಾಮ್‌ ಬ್ಲಂಡಲ್‌ (ವಿಕೆಟ್‌ಕೀಪರ್‌), ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ'ಗ್ರ್ಯಾಂಡ್‌ ಹೋಮ್‌, ಟಾಮ್‌ ಲೇಥಮ್‌, ಹೆನ್ರಿ ನಿಕೋಲ್ಸ್‌, ಏಜಾಝ್‌ ಪಟೇಲ್‌, ಜೀತ್‌ ರಾವಲ್‌, ವಿಲ್‌ ಸಮರ್‌ವಿಲ್‌, ಮಿಚೆಲ್‌ ಸ್ಯಾಂಟ್ನರ್‌, ಟಿಮ್‌ ಸೌಥೀ, ರಾಸ್‌ ಟೇಲರ್‌, ನೇಯ್ಲ್‌ ವ್ಯಾಗ್ನರ್‌ ಹಾಗೂ ಬಿ.ಜೆ ವ್ಯಾಟ್ಲಿಂಗ್‌.

Story first published: Monday, July 29, 2019, 14:54 [IST]
Other articles published on Jul 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X