Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟೆಸ್ಟ್ ರ‍್ಯಾಂಕಿಂಗ್​‌ನಲ್ಲಿ ಟ್ವಿಸ್ಟ್ ನೀಡಿದ ಐಸಿಸಿ: ಭಾರತ ನಂಬರ್ 1 ಅಲ್ಲ!

ICC Test Ranking: Dramatic changes in ICC Ranking: India not No. 1 in Tests

ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿಯೂ ನಂಬರ್ 1 ಸ್ಥಾನಕ್ಕೇರಿದ ಸಂಭ್ರಮದಲ್ಲಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಐಸಿಸಿ ಶಾಕ್ ನೀಡಿದೆ. ನಂಬರ್ 1 ಸ್ಥಾನಕ್ಕೇರಿದ ಕೆಲವೇ ಗಂಟೆಗಳಲ್ಲಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಾಟಕೀಯ ಬೆಳವಣಿಗೆಯಾಗಿದ್ದು ಆಸ್ಟ್ರೇಲಿಯಾ ಮತ್ತೆ ನಂಬರ್ 1 ಸ್ಥಾನಕ್ಕೇರಿದೆ. ಭಾರತ 2ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ತಣ್ಣೀರೆರಚಿದಂತಾಗಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ಭಾರತ ತಂಡವನ್ನು ನಂಬರ್ 1 ಎಂದು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಪ್ರಕಟಿಸಿತ್ತು ಎನ್ನಲಾಗಿದ್ದು ಇದೀಗ ಪಟ್ಟಿಯನ್ನು ಪರಿಷ್ಕರಿಸಿದೆ. ಇದರಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದು ಭಾರತ ಎರಡನೇ ಸ್ಥಾನದಲ್ಲಿದೆ.

ICC Test Ranking: Dramatic changes in ICC Ranking: India not No. 1 in Tests

ಆಸ್ಟ್ರೇಲಿಯಾ ಪ್ರಸ್ತುತ 29 ಪಂದ್ಯಗಳಲ್ಲಿ 3668 ಅಂಕ ಪಡೆದುಕೊಂಡಿದ್ದು 126 ರೇಟಿಂಗ್ ಹೊಂದುವ ಮೂಲಕ ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ. ಇತ್ತ ಭಾರತ ತಂಡ 115 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಭಾರತ 32 ಪಂದ್ಯಗಳಲ್ಲಿ ಆಡಿದ್ದು 3690 ಅಂಕಗಳನ್ನು ಹೊಂದಿದೆ. ಇದಕ್ಕೂ ಮುನ್ನ ಐಸಿಸಿ ಶ್ರೇಯಾಂಕ ಪಟ್ಟಿಯನ್ನು ಅಪ್‌ಡೇಟ್ ಮಾಡಿದಾಗ ಭಾರತ ಎಲ್ಲಾ ಮಾದರಿಯಲ್ಲಿಯೂ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಈ ಸಂಭ್ರಮ ಕೆಲವು ಗಂಟೆಗಳವರೆಗೆ ಮಾತ್ರವೇ ಉಳಿದುಕೊಂಡಿತ್ತು.

ಇನ್ನು ಐಸಿಸಿ ಈ ರೀತಿಯ ಎಡವಟ್ಟನ್ನು ಮಾಡುತ್ತಿರುವುದು ಇದೇನು ಮೊದಲಲ್ಲ. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಎರಡೇ ಬಾರಿಗೆ ಇದೇ ತಪ್ಪನ್ನು ಮಾಡಿದೆ ಐಸಿಸಿ. ಕಳೆದ ಜನವರಿ 17ರಂದು ಪ್ರಕಟಿಸಿದ ಪರಿಷ್ಕೃತ ಶ್ರೇಯಾಂಕ ಪಟ್ಟಿಯಲ್ಲಿಯೂ ಇದೇ ರೀತಿ ಐಸಿಸಿ ಎಡವಟ್ಟು ಮಾಡಿತ್ತು. ಭಾರತ ನಂಬರ್ 1 ತಂಡ ಎಂದು ತನ್ನ ಅಧಿಕೃತ ವೆಬ್‌ಸೈಟ್‌ನ ಶ್ರೇಯಾಂಕ ಪಟ್ಟಿಯಲ್ಲಿ ಪರಿಷ್ಕರಿಸಿ ಪಟ್ಟು ಬಿಡುಗಡೆ ಮಾಡಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಬದಲಾವಣೆ ಮಾಡಿದ್ದು ಆಸ್ಟ್ರೇಲಿಯಾ ನಂಬರ್ 1 ತಂಡವಾಗಿಯೇ ಮುಂದುವರಿದಿತ್ತು.

Story first published: Wednesday, February 15, 2023, 20:57 [IST]
Other articles published on Feb 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+