ICC Test Ranking: ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡ ರೋಹಿತ್, ಜೈಸ್ವಾಲ್; ರಿಷಭ್ ಪಂತ್ ಇಳಿಕೆ
ಭಾರತ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ತಮ್ಮ ಏರಿಕೆಯನ್ನು ಮುಂದುವರೆಸಿದ್ದು, 11 ಸ್ಥಾನಗಳನ್ನು ಮೇಲಕ್ಕೇರಿ 63ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇನ್ನು ಭಾರತದ ನಾಯಕ ರೋಹಿತ್ ಶರ್ಮಾ ಬ್ಯಾಟರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನ ತಲುಪಿದ್ದಾರೆ.
ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಡ್ರಾಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ 57 ಮತ್ತು 38 ರನ್ ಗಳಿಸಿದ 21 ವರ್ಷದ ಯಶಸ್ವಿ ಜೈಸ್ವಾಲ್ 466 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ 80 ಮತ್ತು 57 ರನ್ ಗಳಿಸಿದ್ದ ರೋಹಿತ್ ಶರ್ಮಾ, ಅತ್ಯುನ್ನತ ಶ್ರೇಯಾಂಕದ ಭಾರತೀಯ ಟೆಸ್ಟ್ ಬ್ಯಾಟರ್ ಆಗಿದ್ದಾರೆ. ರೋಹಿತ್ 759 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಶ್ರೀಲಂಕಾದ ಬ್ಯಾಟ್ಸ್‌ಮನ್ ದಿಮುತ್ ಕರುಣಾರತ್ನೆ ಅವರೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.
ಭಾರತದ ಆಟಗಾರರಾದ ರಿಷಭ್ ಪಂತ್ ಅವರು 743 ರೇಟಿಂಗ್ ಅಂಕಗಳೊಂದಿಗೆ 12ನೇ ಸ್ಥಾನಕ್ಕೆ ಕುಸಿದಿದ್ದರೆ, 733 ಅಂಕಗಳೊಂದಿಗೆ ವಿರಾಟ್ ಕೊಹ್ಲಿ 14ನೇ ಸ್ಥಾನದಲ್ಲಿದ್ದಾರೆ.

ಹಿಂದಿನ ಅಗ್ರ ಶ್ರೇಯಾಂಕದ ಬ್ಯಾಟ್ಸ್‌ಮನ್‌ಗಳಾದ ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಇಂಗ್ಲೆಂಡ್‌ನ ಜೋ ರೂಟ್ ತಲಾ ಮೂರು ಸ್ಥಾನಗಳನ್ನು ಪ್ರಗತಿ ಕಂಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಿಗೆ ತಲುಪಿದ್ದಾರೆ.
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರು 883 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ನಾಲ್ಕನೇ ಆಶಸ್ ಟೆಸ್ಟ್ ಬಳಿಕ ಇಂಗ್ಲೆಂಡ್‌ನ ಝಾಕ್ ಕ್ರಾಲಿ 13 ಸ್ಥಾನ ಮೇಲೇರಿ 35ನೇ ಸ್ಥಾನ ತಲುಪಿದ್ದರೆ, ಹ್ಯಾರಿ ಬ್ರೂಕ್ 11ನೇ ಸ್ಥಾನಕ್ಕೆ ಹಾಗೂ ಜಾನಿ ಬೈರ್‌ಸ್ಟೋವ್ ಮೂರು ಸ್ಥಾನ ಏರಿಕೆ ಕಂಡು ಜಂಟಿ 19ನೇ ಸ್ಥಾನಕ್ಕೆ ತಲುಪಿದ್ದಾರೆ.
ಭಾರತ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 879 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದರೆ, ರವೀಂದ್ರ ಜಡೇಜಾ 782 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನಕ್ಕೆ ಏರಿದ್ದಾರೆ.

ಇನ್ನು ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರು 6 ಸ್ಥಾನಗಳ ಏರಿಕೆಯೊಂದಿಗೆ 33ನೇ ಸ್ಥಾನಕ್ಕೆ ಏರುವ ಮೂಲಕ ಬೌಲರ್‌ಗಳ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ.
ಶ್ರೀಲಂಕಾದ ಪ್ರಭಾತ್ ಜಯಸೂರ್ಯ ಅವರು ಗಾಲೆಯಲ್ಲಿ ಏಳು ವಿಕೆಟ್ ಪಡೆಯುವ ಮೂಲಕ 7 ಸ್ಥಾನಗಳನ್ನು ಮೇಲಕ್ಕೇರಿ ವೃತ್ತಿಜೀವನದ ಅತ್ಯುತ್ತಮ 7ನೇ ಸ್ಥಾನಕ್ಕೆ ತಲುಪಿದ್ದಾರೆ.
ಪ್ರಭಾತ್ ಜಯಸೂರ್ಯ ಸಹ ಆಟಗಾರ ರಮೇಶ್ ಮೆಂಡಿಸ್ ಈ ಪಂದ್ಯದಲ್ಲಿ 6 ವಿಕೆಟ್‌ಗಳೊಂದಿಗೆ ಒಂದು ಸ್ಥಾನ ಏರಿಕೆ ಕಂಡು 21ನೇ ಸ್ಥಾನ ತಲುಪಿದ್ದಾರೆ.
ಇಂಗ್ಲೆಂಡ್ ವೇಗಿಗಳಾದ ಮಾರ್ಕ್ ವುಡ್ 3 ಸ್ಥಾನ ಮೇಲೇರಿ 23ನೇ ಸ್ಥಾನ, ಕ್ರಿಸ್ ವೋಕ್ಸ್ 5 ಸ್ಥಾನ ಮೇಲೇರಿ 31ನೇ ಸ್ಥಾನ ಪಡೆದು ಆಂಗ್ಲ ತಂಡಕ್ಕೆ ಲಾಭ ತಂದುಕೊಟ್ಟಿದ್ದಾರೆ.
ಪಾಕಿಸ್ತಾನದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ 12 ಸ್ಥಾನ ಮೇಲೇರಿ 45ನೇ ಸ್ಥಾನ, ವೆಸ್ಟ್ ಇಂಡೀಸ್ ಎಡಗೈ ಸ್ಪಿನ್ನರ್ ಜೊಮೆಲ್ ವಾರಿಕಾನ್ 6 ಸ್ಥಾನ ಮೇಲೇರಿ 62ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಭಾರತದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅಗ್ರ ಎರಡು ಸ್ಥಾನಗಳಲ್ಲಿ ಮುಂದುವರಿದರೆ, ಅಕ್ಷರ್ ಪಟೇಲ್ ಐದನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications