Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Test Ranking: ಟಾಪ್ 10ರೊಳಗೆ ನುಗ್ಗಿದ ರೋಹಿತ್ ಶರ್ಮಾ; ಕೊಹ್ಲಿ 6ನೇ ಸ್ಥಾನಕ್ಕೇರಿಕೆ

ಇತ್ತೀಚಿಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಕೇಪ್ ಟೌನ್ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಭಾರತೀಯ ಕ್ರಿಕೆಟಿಗರು ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೂರು ಸ್ಥಾನ ಮೇಲಕ್ಕೇರಿದ್ದು, ಶ್ರೇಯಾಂಕದಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಏರಿಕೆಯು ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್‌ನಲ್ಲಿ ನಡೆದ ಸವಾಲಿನ, ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ 46 ರನ್‌ಗಳ ಅಮೂಲ್ಯ ಕೊಡುಗೆ ಕಾರಣವಾಗಿದೆ.

ICC Test Ranking: Rohit Sharma Entered the Top 10; Virat Kohli Moves to 6th Position

ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡಿದ್ದಾರೆ. ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ, ಟಾಪ್ 10ರಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಇದೀಗ 10ನೇ ಸ್ಥಾನದಲ್ಲಿದ್ದಾರೆ.

ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್‌ ಪಂದ್ಯದಲ್ಲಿ 39 ಮತ್ತು ಅಜೇಯ 16 ರನ್‌ಗಳೊಂದಿಗೆ ನಿರ್ಣಾಯಕ ಪಾತ್ರವನ್ನು ವಹಿಸಿದ ನಂತರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅವರ ಏರಿಕೆ ಕಂಡುಬಂದಿದೆ.

ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟರ್ ಏಡೆನ್ ಮಾರ್ಕ್ರಾಮ್ ನ್ಯೂಲ್ಯಾಂಡ್ಸ್‌ನಲ್ಲಿ ಪ್ರಭಾವಶಾಲಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 176 ರನ್‌ಗಳಿಗೆ ಆಲೌಟ್ ಆದರೂ, ವೈಯಕ್ತಿಕ ಶತಕವನ್ನು ಬಾರಿಸಿದರು.

ICC Test Ranking: Rohit Sharma Entered the Top 10; Virat Kohli Moves to 6th Position

ಅವರ 106 ರನ್‌ಗಳು 9 ಸ್ಥಾನಗಳ ಜಿಗಿತ ಕಂಡು 667 ರೇಟಿಂಗ್‌ ಪಾಂಯಿಂಟ್‌ಗಳೊಂದಿಗೆ ಅಗ್ರ 20 ರೊಳಗೆ ಪ್ರವೇಶಿಸಲು ಕಾರಣವಾಯಿತು. ಇದು ಗಮನಾರ್ಹ ಬದಲಾವಣೆ ಮಾಡಿದ ಏಕೈಕ ದಕ್ಷಿಣ ಆಫ್ರಿಕಾ ಬ್ಯಾಟರ್ ಆಗಿದ್ದಾರೆ.

ಬೌಲಿಂಗ್ ಶ್ರೇಯಾಂಕಗಳು
ವಿಶೇಷವಾಗಿ, ಭಾರತ ತಂಡದ ವೇಗದ ದಾಳಿಯು ಪ್ರಭಾವಶಾಲಿಯಾಗಿದೆ. ಬೌಲರ್‌ಗಳ ಪೈಕಿ ಮೊಹಮ್ಮದ್ ಸಿರಾಜ್ ಅತಿ ಹೆಚ್ಚು ಲಾಭ ಗಳಿಸಿದರು. ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದ ಅವರು 13 ಸ್ಥಾನಗಳನ್ನು ಹೆಚ್ಚಿಸಿಕೊಂಡರು. 17ನೇ ಸ್ಥಾನ ಗಳಿಸುವ ಮೂಲಕ ಟಾಪ್ 20 ರೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಭಾರತದ ವೇಗದ ದಾಳಿಯ ಮತ್ತೊಂದು ಪ್ರಮುಖ ಅಸ್ತ್ರ ಜಸ್ಪ್ರೀತ್ ಬುಮ್ರಾ ಅವರು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ತಮ್ಮ ಸ್ಥಾನವನ್ನು ಸುಧಾರಿಸಿದ್ದಾರೆ. ಕೇಪ್ ಟೌನ್ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ ನಂತರ, ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಶ್ರೇಯಾಂಕಿತ ಬೌಲರ್‌ ಆಗಲು ಒಂದು ಸ್ಥಾನ ಮೇಲೇರಿದ್ದಾರೆ.

Story first published: Wednesday, January 10, 2024, 16:55 [IST]
Other articles published on Jan 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+