Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟೆಸ್ಟ್ Ranking: ಮೊದಲ ಸ್ಥಾನದ ಸಮೀಪ ವಿರಾಟ್ ಕೊಹ್ಲಿ

ICC Test Ranking Virat Kohli Closes To First Place Behind Steve Smith

ನವದೆಹಲಿ, ಅಕ್ಟೋಬರ್ 14: ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ನಡೆದ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಅಜೇಯ ದ್ವಿಶತಕ ಗಳಿಸಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ಏರುವ ಸನಿಹ ಬಂದಿದ್ದಾರೆ.

ಸರಣಿ ಆರಂಭಕ್ಕೂ ಮುನ್ನ 900ಕ್ಕಿಂತ ಕಡಿಮೆ ಅಂಕಗಳನ್ನು ಹೊಂದಿದ್ದ ವಿರಾಟ್ ಕೊಹ್ಲಿ ಒಂದೇ ಇನ್ನಿಂಗ್ಸ್‌ನ ಪರಾಕ್ರಮದಲ್ಲಿ ಒಟ್ಟು 336 ಅಂಕಗಳೊಂದಿಗೆ ಟೆಸ್ಟ್ ಕ್ರಿಕೆಟ್ ರಾಂಕಿಂಗ್ ಪಟ್ಟಿಯಲ್ಲಿಎರಡನೆಯ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರಿಗಿಂತ ಕೊಹ್ಲಿ ಕೇವಲ ಒಂದು ಅಂಕ ಹಿಂದಿದ್ದಾರೆ. 2008ರ ಜನವರಿಯಲ್ಲಿ ಟೆಸ್ಟ್ ಕ್ರಿಕೆಟ್‌ ಆರಂಭಿಸಿದ್ದ ಕೊಹ್ಲಿ, ಇದೇ ಮೊದಲ ಬಾರಿಗೆ 900ಕ್ಕಿಂತ ಕಡಿಮೆ ಅಂಕ ಪಡೆದಿದ್ದರು.

ಇಂಗ್ಲೆಂಡ್ ವಿರುದ್ಧದ ಆ‍ಷಸ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 937 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿ ಎರಡು ಅಂಕಗಳನ್ನು ಪಡೆದರೂ ಮೊದಲ ಸ್ಥಾನಕ್ಕೇರಲಿದ್ದಾರೆ.

ಮೇಲಕ್ಕೇರಿದ ಮಯಾಂಕ್

ಮೇಲಕ್ಕೇರಿದ ಮಯಾಂಕ್

ಚೇತೇಶ್ವರ ಪೂಜಾರ 817 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಜಿಂಕ್ಯ ರಹಾನೆ 721 ಅಂಕ ಹೊಂದಿದ್ದು, 9ನೇ ಸ್ಥಾನಕ್ಕೇರುವ ಮೂಲಕ ಟಾಪ್ 10ಕ್ಕೆ ಮರಳಿದ್ದಾರೆ. ಇನ್ನು ಎರಡನೆಯ ಟೆಸ್ಟ್‌ನಲ್ಲಿಯೂ ಶತಕ ಬಾರಿಸಿರುವ ಕನ್ನಡಿಗ ಮಯಾಂಕ್ ಅಗರವಾಲ್, ಎಂಟು ಸ್ಥಾನ ಜಿಗಿದು 17ನೇ ಸ್ಥಾನಕ್ಕೇರಿದ್ದಾರೆ.

ಕೊಹ್ಲಿ ನಂತರ ವಿಲಿಯಮ್ಸನ್

ಕೊಹ್ಲಿ ನಂತರ ವಿಲಿಯಮ್ಸನ್

ನ್ಯೂಜಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್, ಕೊಹ್ಲಿ ನಂತರದ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಅವರು ಅಂಕಗಳ ಲೆಕ್ಕಾಚಾರದಲ್ಲಿ ಭಾರಿ ಹಿಂದಿದ್ದಾರೆ. ನ್ಯೂಜಿಲೆಂಡ್‌ನ ಮತ್ತಿಬ್ಬರು ಆಟಗಾರರಾದ ಹೆನ್ರಿ ನಿಕೊಲ್ಸ್ ಹಾಗೂ ಟಾಮ್ ಲಥಾಮ್ ಕ್ರಮವಾಗಿ 5 ಮತ್ತು 7ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್ 6ನೇ ಸ್ಥಾನದಲ್ಲಿದ್ದಾರೆ.

ಬಿಸಿಸಿಐ ಚುಕ್ಕಾಣಿ ಹಿಡಿಯಲು ಸಜ್ಜಾದ ಮಾಜಿ ನಾಯಕ ಸೌರವ್ ಗಂಗೂಲಿ!

ಮೇಲಕ್ಕೇರಿದ ಅಶ್ವಿನ್

ಮೇಲಕ್ಕೇರಿದ ಅಶ್ವಿನ್

ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್. ಅಶ್ವಿನ್ ಮೂರು ಸ್ಥಾನ ಮೇಲೇರಿದ್ದು, 792 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಆಡದಿದ್ದರೂ ವೇಗಿ ಜಸ್‌ಪ್ರೀತ್ ಬೂಮ್ರಾ 818 ಅಂಕಗಳೊಂದಿಗೆ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಮೊದಲ ಹಾಗೂ ಎರಡನೆಯ ಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿ ಜಡೇಜಾ

ಎರಡನೇ ಸ್ಥಾನದಲ್ಲಿ ಜಡೇಜಾ

ಆಲ್‌ರೌಂಡರ್‌ಗಳ ವಿಭಾಗದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ 472 ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಮಿಂಚಿರುವ ರವೀಂದ್ರ ಜಡೇಜಾ 414 ಅಂಕದೊಂದಿಗೆ ಎರಡನೆಯ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಹಾಗೂ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ನಂತರದ ಎರಡು ಸ್ಥಾನಗಳಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ 328 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಇನ್ನಿಂಗ್ಸ್‌ ಸಹಿತ 137 ರನ್ ಜಯ

Story first published: Monday, October 14, 2019, 19:26 [IST]
Other articles published on Oct 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+