Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಆಲ್ ರೌಂಡರ್ ಪಟ್ಟಿಯಲ್ಲಿ ಅಶ್ವಿನ್ ನಂ.1

ದುಬೈ, ಡಿ.22: ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಐಸಿಸಿ ಪ್ರಕಟಿಸಿರುವ ಆಲ್‌ರೌಂಡರ್ ಶ್ರೇಯಾಂಕ ಪಟ್ಟಿಯಲ್ಲಿ ಸತತವಾಗಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದರೆ, ರವೀಂದ್ರ ಜಡೇಜ ಐದನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಬ್ಯಾಟಿಂಗ್‌ನಲ್ಲಿ 31.68 ಸರಾಸರಿಯನ್ನು ಕಾಯ್ದುಕೊಂಡಿರುವ ಅಶ್ವಿನ್ ಗಳಿಸಿರುವ ಗರಿಷ್ಠ ಸ್ಕೋರ್ 124 ರನ್.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಒಟ್ಟು 31 ವಿಕೆಟ್‌ಗಳನ್ನು ಕಬಳಿಸಿದ್ದರು.

ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕದ ಡೇಲ್ ಸ್ಟೇಯ್ನ್ ಮೊದಲ ಸ್ಥಾನದಲ್ಲಿದ್ದಾರೆ.
ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಟ್ಟು 23 ವಿಕೆಟ್‌ಗಳನ್ನು ಕಬಳಿಸಿದ್ದ ಎಡಗೈ ಸ್ಪಿನ್ನರ್ ಜಡೇಜ ಟಾಪ್-10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Ashwin remains No. 1 all-rounder

ಕೇನ್ ವಿಲಿಯಮ್ಸನ್ ನಂ.1 ಬ್ಯಾಟ್ಸ್ ಮನ್: ಶ್ರೀಲಂಕಾದ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಔಟಾಗದೆ ಶತಕ ದಾಖಲಿಸಿದ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಕೇನ್ ವಿಲಿಯಮ್ಸನ್ ಅವರು ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಪಟ್ಟಕ್ಕೇರಿದ ಈ ವರ್ಷದ ಮೊದಲ ಕಿವೀಸ್ ಆಟಗಾರ ಎಂಬ ಸಾಧನೆ ಇವರದ್ದಾಗಿದೆ. ಜೋ ರೂಟ್(886 ಅಂಕ) ಹಾಗೂ ಎಬಿ ಡಿವಿಲಿಯರ್ಸ್(881) ಅವರನ್ನು ಹಿಂದಕ್ಕೆ ಹಾಕಿ ವಿಲಿಯಮ್ಸನ್ ಮೇಲಕ್ಕೇರಿದ್ದಾರೆ.

13ನೇ ಟೆಸ್ಟ್ ಶತಕ ಸಿಡಿಸಿರುವ ವಿಲಿಯಮ್ಸನ್ 2015ರಲ್ಲಿ ನ್ಯೂಜಿಲೆಂಡ್‌ಪರ ಗರಿಷ್ಠ ಶತಕ ದಾಖಲಿಸಿರುವ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಮುರಿದಿದ್ದಾರೆ. ವಿಲಿಯಮ್ಸನ್ ಈ ವರ್ಷ ಈ ತನಕ ಆಡಿರುವ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 2,633ರನ್ ಗಳಿಸಿದ್ದಾರೆ. ವಿಲಿಯಮ್ಸನ್ 2015ರಲ್ಲಿ ಇನ್ನೂ ಮೂರು ಏಕದಿನ ಪಂದ್ಯಗಳು ಆಡಲು ಬಾಕಿಯಿದೆ. ಬ್ಯಾಟ್ಸ್ ಮನ್ ಗಳ ಟಾಪ್ 10 ಪಟ್ಟಿಯ ಭಾರತದ ಯಾವ ಆಟಗಾರರು ಸ್ಥಾನ ಪಡೆದಿಲ್ಲ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+