ಟೆಸ್ಟ್ ಕ್ರಿಕೆಟ್ ಶ್ರೇಯಾಂಕ: ರೂಟ್ ಗೆ ಅಗ್ರಸ್ಥಾನ, ಕೊಹ್ಲಿಗೂ ಸ್ಥಾನ
ಲಂಡನ್, ಆಗಸ್ಟ್ 09 : ಆಷ್ಯಸ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್ ಮನ್ ಜೋ ರೂಟ್ ಈಗ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿದ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದ ಟಾಪ್ 10 ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶನಿವಾರದಂದು ಇಂಗ್ಲೆಂಡಿಗೆ ಇನ್ನಿಂಗ್ಸ್ ಹಾಗೂ 78 ರನ್ ಗಳ ಅಂತರದ ಜಯ ದಾಖಲಿಸಿ ಸರಣಿಯಲ್ಲಿ 3-1 ಜಯ ಪಡೆದುಕೊಂಡಿತು. ಇಂಗ್ಲೆಂಡ್ ಆಡಿದ ಒಂದು ಇನ್ನಿಂಗ್ಸ್ ನಲ್ಲೇ ಜೋ ರೂಟ್ 130 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ದಕ್ಷಿಣ ಆಫ್ರಿಕಾದ ಎಬಿ ಡಿ ವಿಲೆಯರ್ಸ್ ಅವರು ಐಸಿಸಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ರೂಟ್ ಮೇಲಕ್ಕೇರುತ್ತಿದ್ದಂತೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಟ್ ಕೊಹ್ಲಿ ಅವರು ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಬ್ಯಾಟ್ಸ್ ಮನ್ (ಶನಿವಾರ ಆಗಸ್ಟ್ 08 ಕ್ಕೆ ಅನ್ವಯ)
1. ಜೋ ರೂಟ್ (ಇಂಗ್ಲೆಂಡ್) 917 ಅಂಕಗಳು
2. ಎಬಿ ಡಿವಿಲೆಯರ್ಸ್ (ದಕ್ಷಿಣ ಆಫ್ರಿಕಾ)890
3. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) 884
4. ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ) 881
5. ಕುಮಾರ್ ಸಂಗಕ್ಕಾರ (ಶ್ರೀಲಂಕಾ) 874
6. ಏಂಜೆಲೋ ಮ್ಯಾಥ್ಯೂಸ್ (ಶ್ರೀಲಂಕಾ) 860
7. ಯೂನಿಸ್ ಖಾನ್ (ಪಾಕಿಸ್ತಾನ) 829
8. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) 813
9. ಕ್ರಿಸ್ ರೋಜರ್ಸ್ (ಆಸ್ಟ್ರೇಲಿಯಾ) 763
10. ವಿರಾಟ್ ಕೊಹ್ಲಿ (ಭಾರತ) 755.
(ಒನ್ ಇಂಡಿಯಾ ಸುದ್ದಿ)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: ICC Test Rankings: Joe Root on top
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications