Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳದ್ದೇ ಪಾರಮ್ಯ: ಮತ್ತೋರ್ವ ಬ್ಯಾಟ್ಸ್‌ಮನ್ಸ್ ಟಾಪ್‌10 ಸನಿಹ

 ICC Test Rankings: Mayank Agarwal nears top 10

ಭಾರತೀಯ ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಹಿಂದೇದೂ ಕಂಡಿರದಷ್ಟು ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ತೀವ್ರ ಪೈಪೋಟಿಗಿಳಿದು ಬ್ಯಾಟ್ಸ್‌ಮನ್‌ಗಳು ರನ್ ಕಲೆಹಾಕುತ್ತಿದ್ದಾರೆ. ಭಾರತೀಯ ದಾಂಡಿಗರ ಪಾರುಪತ್ಯ ಹೇಗಿದೆ ಅನ್ನೋದಕ್ಕೆ ರ್ಯಾಂಕಿಂಗ್ ಪಟ್ಟಿಯೇ ಸಾಕ್ಷಿ. ನಾಲ್ವರು ಭಾರತೀಯ ಬ್ಯಾಟ್ಸ್‌ಮನ್‌ಗಳು ಟೆಸ್ಟ್‌ ರ್ಯಾಂಕಿಂಗ್‌ನ ಟಾಪ್ 10 ಕಾಣಸಿಕೊಂಡಿದ್ದಾರೆ.

ನಾಯಕ ವಿರಾಟ್‌ಕೊಹ್ಲಿ, ಚೇತೇಶ್ವರ್ ಪೂಜಾರಾ, ಉಪನಾಯಕ ಅಜಿಂಕ್ಯಾ ರೆಹಾನೆ, ರೋಹಿತ್ ಶರ್ಮಾ ಈ ನಾಲ್ವರು ಭಾರತೀಯ ಬ್ಯಾಟ್ಸ್‌ಮನ್‌ಗಳೇ ಮೊದಲ ಹತ್ತು ಸ್ಥಾನದಲ್ಲಿದ್ದಾರೆ.
ಕೇವಲ ಬ್ಯಾಟ್ಸ್‌ಮನ್‌ಗಳು ಮಾತ್ರವಲ್ಲ ಆಲ್ರೌಂಡರ್ಗಳು ಕೂಡ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಇಬ್ಬರು ಆಲ್‌ರೌಂಡರ್‌ಗಳು ಟಾಪ್‌ ಹತ್ತರಲ್ಲಿದ್ದಾರೆ

ಇನ್ನು ಭಾರತೀಯ ವೇಗಿಗಳಂತೂ ರೆಡ್‌ಹಾಟ್‌ ಫಾರ್ಮ್‌ನಲ್ಲಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ವೇಗಿ ಬೂಮ್ರಾ 4ನೇ ಸ್ಥಾನದಲ್ಲಿ ಮುಂದುವರೆದಿದ್ದರೆ ಮತ್ತೋರ್ವ ಭಾರತೀಯ ಬೌಲರ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತೀಯರ ಪಾರುಪತ್ಯ

ಭಾರತೀಯರ ಪಾರುಪತ್ಯ

ಇಬ್ಬರು ಟೀಂಇಂಡಿಯಾ ಆಟಗಾರರು ರ್ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಅದರಲ್ಲಿ ಓರ್ವ ಹೊಸ ಓಪನಿಂಗ್ ಬ್ಯಾಟ್‌ಮನ್‌ ಮಾಯಾಂಕ್ ಅಗರ್ವಾಲ್. ಇನ್ನೋರ್ವ ಭಾರತೀಯ ವೇಗದ ಬೌಲರ್ ಮೊಹಮದ್ ಶಮಿ. ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 7 ವಿಕೆಟ್‌ ಕಿತ್ತ ಮೊಹಮದ್‌ ಶಮಿ ಏಳನೇ ಸ್ಥಾನಕ್ಕೆ ಭಡ್ತಿ ಪಡೆದಿಕೊಂಡರೆ ಎರಡನೇ ದ್ವಿಶತಕದ ಸಾಧನೆ ಮಾಡಿದ ಮಯಾಂಕ್ ಅಗರ್ವಾಲ್ ತಮ್ಮ ಕೆರಿಯರ್ ಅತ್ಯುನ್ನತ ರ್ಯಾಂಕಿಂಗ್ ಪಡೆದುಕೊಂಡಿದ್ದಾರೆ.

ಕನ್ನಡದ ಹುಡುಗನ ಸಾಧನೆ

ಕನ್ನಡದ ಹುಡುಗನ ಸಾಧನೆ

ಹೊಸ ಓಪನಿಂಗ್ ಸೆನ್ಸೇಶನ್ ಮಾಯಾಂಕ್ ಅಗರ್ವಾಲ್ ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈಗಾಗಲೇ ಟಾಪ್‌10ನಲ್ಲಿ ನಾಲ್ವರು ಭಾರತೀಯರೇ ಇದ್ದಾರೆ. ಇದೀಗ ಈ ಪಟ್ಟಿಯೊಳಗೆ ಮಾಯಾಂಕ್ ಅಗರ್ವಾಲ್ ಕೂಡ ಸೇರ್ಪಡೆಕೊಳ್ಳುವ ತವಕದಲ್ಲಿದ್ದು ಇನ್ನೊಂದೇ ಹೆಜ್ಜೆ ಹಿಂದೆಯಿದ್ದಾರೆ. ಸದ್ಯ ಮಾಯಾಂಕ್ ಅಗರ್ವಾಲ್11ನೇ ಶ್ರೇಯಾಂಕವನ್ನು ಹೊಂದಿದ್ದಾರೆ.

ಸತತವಾಗಿ ಮಿಂಚುತ್ತಿರುವ ಜಡೇಜಾ

ಸತತವಾಗಿ ಮಿಂಚುತ್ತಿರುವ ಜಡೇಜಾ

ಐಸಿಸಿ ಬಿಡುಗಡೆಗೊಳಿಸಿರುವ ರ್ಯಾಂಕಿಂಗ್‌ನಲ್ಲಿ ಭಾರತೀಯ ಆಲ್‌ರೌಂಡರ್‌ಗಳು ಕೂಡ ಅತ್ಯುತ್ತಮ ಸಾಧನೆ ಮುಂದುವರೆಸಿದ್ದಾರೆ. ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಟಾಪ್ ಹತ್ತರಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಸತತವಾಗಿ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವ ಜಡೇಜಾ ಆಲ್‌ರೌಂಡರ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಮುಂದುವರಿದ್ದಾರೆ. ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಡೇಜಾ 35ಸ್ಥಾನದಲ್ಲಿದ್ದಾರೆ.

ಎದುರಾಳಿಗಳಿಗೆ ವೇಗಿಗಳೇ ಸಿಂಹಸ್ವಪ್ನ

ಎದುರಾಳಿಗಳಿಗೆ ವೇಗಿಗಳೇ ಸಿಂಹಸ್ವಪ್ನ

ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಗಾಯಗೊಂಡು ವಿಶ್ತಾಂತಿಯಲ್ಲಿದ್ದಾರೆ. ಹಾಗಿದ್ರೂ ಭಾರತೀಯ ಬೌಲಿಂಗ್ ಲೈನ್‌ಅಪ್ ಎಷ್ಟು ಬಲಿಷ್ಠವಾಗಿದೆ ಅನ್ನೋದಿಕ್ಕೆ ಇತ್ತೀಚಿನ ಟೆಸ್ಟ್‌ ಸರಣಿಗಳೇ ಸಾಕ್ಷಿ. ಮೊಹಮದ್‌ ಶಮಿ 960 ಅಂಕಗಳೋಂದಿಗೆ ಟಾಪ್‌ 10ರಲ್ಲಿ ಸ್ಥಾನಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ವೇಗಿಗಳಾದ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಕ್ರಮವಾಗಿ 20ನೇ ಹಾಗೂ 22ನೇ ಸ್ಥಾನದಲ್ಲಿದ್ದಾರೆ.

Story first published: Monday, November 18, 2019, 12:05 [IST]
Other articles published on Nov 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+