ಟೆಸ್ಟ್ ಕ್ರಿಕೆಟ್ ಶ್ರೇಯಾಂಕ: ಅಶ್ವಿನ್, ಜಡೇಜಗೆ ಮಾತ್ರ ಸ್ಥಾನ
ದುಬೈ, ಡಿ. 15: ಐಸಿಸಿ ಮಂಗಳವಾರ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿ ಪ್ರಕಾರ, ಭಾರತದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ವಿಶ್ವದ ನಂ.1 ಆಲ್ ರೌಂಡರ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಈ ನಡುವೆ ರವೀಂದ್ರ ಜಡೇಜ ಅವರು ಆಲ್ ರೌಂಡರ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.
ಆದರೆ, ಬ್ಯಾಟ್ಸ್ ಮನ್ ಗಳ ಟಾಪ್ 10 ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾದಿಂದ ಒಬ್ಬ ಆಟಗಾರರು ಆಯ್ಕೆಯಾಗಿಲ್ಲ. ಆಲ್ ರೌಂಡರ್ ಪಟ್ಟಿಯಲ್ಲಿ ಉತ್ತಮ ಸ್ಥಾನಗಳಿಸಿರುವ ಅಶ್ವಿನ್ ಹಾಗೂ ಜಡೇಜ ಅವರು ಬೌಲರ್ ಗಳ ಪಟ್ಟಿಯಲ್ಲೂ ಕ್ರಮವಾಗಿ 2ನೇ ಹಾಗೂ 8ನೇ ಸ್ಥಾನ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.[ಆರ್ ಅಶ್ವಿನ್ ಈಗ ವಿಶ್ವದ ನಂ.1 ಆಲ್ ರೌಂಡರ್]

ಈ ನಡುವೆ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಅವರು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಗಿಂತ ಕೇವಲ ಮೂರು ಅಂಕ ಹಿಂದೆ ಇದ್ದು, ಟಾಪ್ ಸ್ಥಾನಕ್ಕೇರುವ ನಿರೀಕ್ಷೆ ಮೂಡಿಸಿದ್ದಾರೆ. ಟಾಪ್ ಸ್ಥಾನದಲ್ಲಿ ಸದ್ಯಕ್ಕೆ ಇಂಗ್ಲೆಂಡಿನ ಜೋ ರೂಟ್ ಇದ್ದಾರೆ. [ಐಪಿಎಲ್ : ಪುಣೆ ಪಾಲಾದ ಧೋನಿ, ರೈನಾ ರಾಜ್ ಕೋಟ್ ಗೆ]
ಡುನೇಡಿನ್ ಹಾಗೂ ಹೋಬಾರ್ಟ್ ನಲ್ಲಿ ಶ್ರೀಲಂಕಾ ವಿರುದ್ಧ ಕ್ರಮವಾಗಿ 77 ಹಾಗೂ 71ರನ್ ಗಳಿಸಿದ್ದರು. ಭಾರತದಿಂದ ಅಜಿಂಕ್ಯ ರಹಾನೆ 11ನೇ ಸ್ಥಾನ, ವಿರಾಟ್ ಕೊಹ್ಲಿ 14ನೇ ಸ್ಥಾನದಲ್ಲಿದ್ದರೆ, ಮುರಳಿ ವಿಜಯ್ 17ನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಟೀಂ ಇಂಡಿಯಾ ಗೆದ್ದುಕೊಂಡಿತ್ತು. ಇದರಿಂಡ ತಂಡದ ಕೆಲ ಆಟಗಾರರ ಶ್ರೇಯಾಂಕ ಹೆಚ್ಚಿದೆ. ಅಶ್ವಿನ್ ಅಲ್ಲದೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ, ರವೀಂದ್ರ ಜಡೇಜ ಅವರು ಇಲ್ಲಿ ತನಕದ ಶ್ರೇಷ್ಠ ಸ್ಥಾನ ಪಡೆದುಕೊಂಡಿದ್ದಾರೆ.(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications