Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC RANKING : ಅಶ್ವಿನ್ ಜತೆ ನಂ. 1 ಸ್ಥಾನಕ್ಕೆ ಲಗ್ಗೆಯಿಟ್ಟ ಜಡೇಜಾ

ನವದೆಹಲಿ, ಮಾರ್ಚ್ 8: ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ (ಐಸಿಸಿ) ಟೆಸ್ಟ್ ಬೌಲರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಜತೆಗೀಗ ಭಾರತದ ಮತ್ತೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಸೇರಿಕೊಂಡಿದ್ದಾರೆ.

ಮಂಗಳವಾರ ಪ್ರಕಟಗೊಂಡಿರುವ ಐಸಿಸಿಯ ನೂತನ ಶ್ರೇಯಾಂಕ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಕೂಡ ಟೆಸ್ಟ್ ಬೌಲರ್ ಗಳ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ತಂದಿದ್ದಾರೆ.[ಭಾರತ ಮೊದಲು ಬ್ಯಾಟ್ ಮಾಡುವುದೊಳಿತು: ಸೌರವ್ ಗಂಗೂಲಿ]

ICC Test Rankings: Ravindra Jadeja joins Ravichandran Ashwin in No.1 spot

ಮಂಗಳವಾರವಷ್ಟೇ ಮುಕ್ತಾಯವಾದ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಉರುಳಿಸಿದ್ದು ಜಡೇಜಾ ಅವರಿಗೆ ಅಗ್ರಸ್ಥಾನಕ್ಕೇರಲು ಕಾರಣವಾಗಿದೆ. ಇನ್ನು, ಅಶ್ವಿನ್ ಅವರು ಕಳೆದ ವರ್ಷಾಂತ್ಯದ ಹೊತ್ತಿಗೇ ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.[ಬೆಂಗಳೂರು ಟೆಸ್ಟ್ ಪಂದ್ಯದ ಕೊನೆ ದಿನದ ಟಿಕೆಟ್ ಹಣ ವಾಪಸ್: ಕೆಎಸ್ ಸಿಎ]

ಇಬ್ಬರು ಬೌಲರ್ ಗಳು ಶ್ರೇಯಾಂಕ ಪಟ್ಟಿಯ ಅಗ್ರಸ್ಥಾನಕ್ಕೇರಿರುವುದು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. ಈ ಹಿಂದೆ, 2008ರಲ್ಲಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಹಾಗೂ ಶ್ರೀಲಂಕಾದ ಮುತ್ತಯ್ಯ ಮುರಳಿಧರನ್ ಅವರು ಜಂಟಿ 2ನೇ ಸ್ಥಾನಕ್ಕೇರಿದ್ದು ಈವರೆಗಿನ ವಿಶೇಷವಾಗಿತ್ತು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+