
ವಿರಾಟ್ ಕೊಹ್ಲಿ ಹಿಂದಿಕ್ಕಿದ ಹಿಟ್‌ಮ್ಯಾನ್ ರೋಹಿತ್
ಟೆಸ್ಟ್ ಕ್ರಿಕೆಟ್ ಪುರುಷರ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ. 5ನೇ ರ್‍ಯಾಂಕಿಂಗ್‌ನಲ್ಲಿರುವ ರೋಹಿತ್ 773 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿದ್ದರೆ, 6ನೇ ಶ್ರೇಯಾಂಕದಲ್ಲಿರುವ ವಿರಾಟ್ 766 ಪಾಯಿಂಟ್ಸ್ ಗಳಿಸಿದ್ದಾರೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಕ್ರಮವಾಗಿ 36, 12, 83, 21, 19, 59 ರನ್ ಗಳಿಸಿದ್ದರೆ, ವಿರಾಟ್ ಕ್ರಮವಾಗಿ ವಿರಾಟ್ 0, 42, 20, 7, 55 ರನ್ ಗಳಿಸಿದ್ದರು. ಕಳಪೆ ಬ್ಯಾಟಿಂಗ್ ನೀಡಿದ್ದರಿಂದ ನಂ.1 ಸ್ಥಾನದಲ್ಲಿದ್ದ ಕೊಹ್ಲಿ ಹಂತ ಹಂತವಾಗಿ ಕೆಳ ಕುಸಿಯತೊಡಗಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ 5ನೇ ಸ್ಥಾನದಲ್ಲಿದ್ದರು.

ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಗ್ ಅಗ್ರ ಸ್ಥಾನಿಗರು
ಟೆಸ್ಟ್ ರ್‍ಯಾಂಕಿಂಗ್‌ನ ಬ್ಯಾಟಿಂಗ್ ವಿಭಾಗದಲ್ಲಿ 1. ಇಂಗ್ಲೆಂಡ್‌ನ ಜೋ ರೂಟ್ (916 ಪಾಯಿಂಟ್ಸ್), 2. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (901), 3. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (891), 4. ಆಸ್ಟ್ರೇಲಿಯಾದ ಮಾರ್ನಸ್ ಲ್ಯಬುಶೇನ್ (878), 5. ಭಾರತದ ರೋಹಿತ್ ಶರ್ಮಾ (773), 6. ಭಾರತದ ವಿರಾಟ್ ಕೊಹ್ಲಿ (766), 7. ಪಾಕಿಸ್ತಾನದ ಬಾಬರ್ ಅಝಾಮ್ (749), 8. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (724), 9. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (717), 10. ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್ (714) ಅಗ್ರ 10 ಸ್ಥಾನಗಳಲ್ಲಿದ್ದಾರೆ.

ಟೆಸ್ಟ್ ರ್ಯಾಂಕಿಂಗ್ ಬೌಲಿಂಗ್ ರ್‍ಯಾಂಕಿಂಗ್
ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ನಂ.1 ಸ್ಥಾನದಲ್ಲಿದ್ದಾರೆ. 908 ಪಾಯಿಂಟ್ಸ್ ಗಳಿಸಿರುವ ಕಮಿನ್ಸ್ ಮೊದಲ ಸ್ಥಾನಕ್ಕೇರಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಇದ್ದಾರೆ. 1. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (908), 2. ಭಾರತದ ರವಿಚಂದ್ರನ್ ಅಶ್ವಿನ್ (839), 3. ನ್ಯೂಜಿಲೆಂಡ್‌ನ ಟಿಮ್ ಸೌಥೀ (824), 4. ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್, 5. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್, 6. ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್, 7. ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ, 8. ಪಾಕಿಸ್ತಾನದ ಶಹೀನ್ ಅಫ್ರಿದಿ, 9. ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್, 10. ಭಾರತದ ಜಸ್‌ಪ್ರೀತ್ ಬೂಮ್ರಾ ಇದ್ದಾರೆ.

ಟೆಸ್ಟ್ ಆಲ್ ರೌಂಡರ್‌ಗಳ ಶ್ರೇಯಾಂಕ
ಟೆಸ್ಟ್ ಕ್ರಿಕೆಟ್ ಆಲ್ ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಮೊದಲ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಆಲ್ ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ರವಿಂದ್ರನ್ ಅಶ್ವಿನ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. 1. ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ (434), 2. ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (355), 3. ಭಾರತದ ರವೀಂದ್ರ ಜಡೇಜಾ (343), 4. ಭಾರತದ ರವೀಂದ್ರ ಜಡೇಜಾ, 5. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, 6. ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್, 7. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, 8. ಆಸ್ಟ್ರೇಲಿಯಾದ ಪ್ಯಾಕ್ ಕಮಿನ್ಸ್, 9. ನ್ಯೂಜಿಲೆಂಡ್‌ನ ಕಾಲಿಂಗ್ ಡಿ ಗ್ರ್ಯಾಂಡ್‌ಹೋಮ್, 10. ನ್ಯೂಜಿಲೆಂಡ್‌ನ ಟಿಮ್ ಸೌಥೀ ಇದ್ದಾರೆ. ಇನ್ನು ದೇಶಗಳಲ್ಲಿ ನ್ಯೂಜಿಲೆಂಡ್, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ ಕ್ರಮವಾಗಿ ಆರಂಭಿಕ ಐದು ಸ್ಥಾನಗಳಲ್ಲಿವೆ.


Click it and Unblock the Notifications












