Test Ranking: ವಿರಾಟ್ ಕೊಹ್ಲಿ ಎದುರು ಭಾರೀ ಅಂತರ ಕಾಯ್ದುಕೊಂಡ ಸ್ಮಿತ್!

ಬೆಂಗಳೂರು, ಸೆಪ್ಟೆಂಬರ್ 10: ಎಲ್ಲಾ ಮಾದರಿಯ ಕ್ರಿಕೆಟ್ ಪರಿಗಣಿಸಿದರೆ ವಿರಾಟ್ ಕೊಹ್ಲಿ ವಿಶ್ವ ಶ್ರೇಷ್ಠ ಕ್ರಿಕೆಟಿಗರೆನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಟೆಸ್ಟ್ ಕ್ರಿಕೆಟ್ ವಿಚಾರಕ್ಕೆ ಬಂದರೆ ಸ್ಟೀವ್ ಸ್ಮಿತ್ ತಾನು ಬಲುಗಟ್ಟಿಗ ಅನ್ನೋದನ್ನು ಸಾಭೀತು ಪಡಿಸುತ್ತಲೇ ಇದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದಿಂದ ಒಂದು ವರ್ಷದ ನಿಷೇಧ ಅನುಭವಿಸಿದ ಬಳಿಕ ಕ್ರಿಕೆಟ್ ಅಂಗಳಕ್ಕೆ ಮತ್ತೆ ಬಂದಿದ್ದ ಆಸೀಸ್ ಮಾಜಿ ನಾಯಕ ಸ್ಮಿತ್, ಆ್ಯಷಸ್ ಟೆಸ್ಟ್ ಸರಣಿ ಮೂಲಕ ಮೊದಲ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಅದೊಂದೇ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸ್ಮಿತ್, ಟೆಸ್ಟ್ ಲೇಟೆಸ್ಟ್ ರ್ಯಾಂಕಿಂಗ್‌ನಲ್ಲಿ ಕೊಹ್ಲಿ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದರು.
ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ ಆರಂಭದಲ್ಲಿ ಸ್ಮಿತ್, ಕೊಹ್ಲಿಗಿಂತ ಕೇವಲ 1 ಹೆಚ್ಚುವರಿ ರೇಟಿಂಗ್ ಪಾಯಿಂಟ್ ಹೊಂದಿದ್ದರು. ಆದರೆ ನೂತನ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಸ್ಟೀವ್ ಸ್ಮಿತ್, ಕೊಹ್ಲಿಗಿಂತ ಭರ್ಜರಿ 34 ಹೆಚ್ಚುವರಿ ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ.

ಟೆಸ್ಟ್‌ನಲ್ಲಿ ಅದ್ಭುತ ಫಾರ್ಮ್
5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ 3 ಪಂದ್ಯಗಳನ್ನಾಡಿರುವ ಸ್ಮಿತ್ ಕ್ರಮವಾಗಿ 144, 142, 92, 211 ಮತ್ತು 82 ರನ್ ಗಳಿಸಿದ್ದಾರೆ. ಇದೇ ಸರಣಿಯ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬೌನ್ಸರ್‌ನಿಂದಾಗಿ ಗಾಯಗೊಂಡಿದ್ದ ಸ್ಟೀವ್, 3ನೇ ಟೆಸ್ಟ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಆಸೀಸ್-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಸೆಪ್ಟೆಂಬರ್ 12ರಿಂದ ಆರಂಭಗೊಳ್ಳಲಿದೆ.

ಸೀಮಿತ ಅವಧಿಯಲ್ಲಿ ಭರ್ಜರಿ ಜಿಗಿತ
ಕೇವಲ ಆ್ಯಷಸ್ ಟೆಸ್ಟ್ ಸರಣಿಯಲ್ಲಿನ ಆಕರ್ಷಕ ಆಟದಿಂದಾಗಿ ಸ್ಟೀವ್ ಸ್ಮಿತ್ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಬಲು ಎತ್ತರಕ್ಕೇರಿದ್ದಾರೆ. ರ್ಯಾಂಕಿಂಗ್‌ನಲ್ಲಿ ಸ್ಮಿತ್ ಮತ್ತು ಕೊಹ್ಲಿ ಮೊದಲೆರಡು ಸ್ಥಾನಗಳಲ್ಲಿ ಇದ್ದಾರಾದರೂ ರೇಟಿಂಗ್ ಪಾಯಿಂಟ್‌ನಲ್ಲಿ ಸ್ಮಿತ್ ಭಾರೀ ಅಂತರ ಕಾಯ್ದುಕೊಂಡಿದ್ದಾರೆ. ಅದೂ ಒಂದು ವಾರದ ಸೀಮಿತ ಅವಧಿಯಲ್ಲಿ ಸ್ಮಿತ್ ಹೀಗೆ ಭರ್ಜರಿ ಪಾಯಿಂಟ್ ಕಲೆ ಹಾಕಿರುವುದು ವಿಶೇಷ.

ರೇಟಂಗ್ ಪಾಯಿಂಟ್ಸ್‌ನಲ್ಲಿ ಅಂತರ
ಪ್ರಸ್ತುತ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಸ್ಮಿತ್ 937 ರೇಟಿಂಗ್ ಪಾಯಿಂಟ್ ಹೊಂದಿದ್ದರೆ, ವಿಶ್ವ ನಂ.2ರಲ್ಲಿರುವ ಕೊಹ್ಲಿ 903 ಪಾಯಿಂಟ್ ಕಲೆ ಹಾಕಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (878), ಭಾರತದ ಚೇತೇಶ್ವರ್ ಪೂಜಾರ (825), ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್ (749) ಅನಂತರದ ಸ್ಥಾನಗಳಲ್ಲಿದ್ದಾರೆ.

ಬೌಲರ್ಸ್, ಆಲ್ ರೌಂಡರ್ಸ್
ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (914), ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ (851), ಭಾರತದ ಜಸ್‌ಪ್ರೀತ್ ಬೂಮ್ರಾ (835) ಮೊದಲ 3 ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್ ಆಲ್ ರೌಂಡರ್‌ಗಳಲ್ಲಿ ವಿಂಡೀಸ್‌ನ ಜೇಸನ್ ಹೋಲ್ಡರ್, ಬಾಂಗ್ಲಾದ ಶಕೀಬ್ ಅಲ್ ಹಸನ್, ಭಾರತದ ರವೀಂದ್ರ ಜಡೇಜಾ ಅಗ್ರ 3ರಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications