ICC Test Ranking: ಅಗ್ರ 3 ಸ್ಥಾನಗಳನ್ನು ಆಕ್ರಮಿಸಿಕೊಂಡ ಆಸೀಸ್ ಆಟಗಾರರು; ಟಾಪ್ 10ರಲ್ಲಿ ಏಕೈಕ ಭಾರತೀಯ!
ಲಂಡನ್‌ನ ಓವಲ್‌ನಲ್ಲಿ ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಅಮೋಘ ಶತಕಗಳ ನಂತರ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ.
ವಾರದ ರ್‍ಯಾಂಕಿಂಗ್ ನವೀಕರಣದ ನಂತರ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರು ಅಗ್ರ ಶ್ರೇಯಾಂಕದ ಮಾರ್ನಸ್ ಲ್ಯಾಬುಸ್‌ಚಾಗ್ನೆ ಅವರನ್ನು ಅನುಸರಿಸಿದ್ದಾರೆ. ಈ ಮೂಲಕ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರ ಮೂರು ಸ್ಥಾನಗಳನ್ನು ಆಸ್ಟ್ರೇಲಿಯಾ ತಂಡದ ಆಟಗಾರರು ಆಕ್ರಮಿಸಿಕೊಂಡಿದ್ದಾರೆ.

ಮಾರ್ನಸ್ ಲ್ಯಾಬುಸ್ಚಾಗ್ನೆ 903 ರೇಟಿಂಗ್ ಪಾಯಿಂಟ್‌ಗಳಿಂದ ಮೊದಲ ಸ್ಥಾನದಲ್ಲಿದ್ದರೆ, ಸ್ಟೀವ್ ಸ್ಮಿತ್ 121 ಮತ್ತು 34 ರನ್ ಗಳಿಸಿದ ನಂತರ ಒಂದು ಸ್ಥಾನ ಏರಿಕೆ ಕಂಡು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.
ಭಾರತ ವಿರುದ್ಧ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದ ಟ್ರಾವಿಸ್ ಹೆಡ್ ಅವರು 163 ಮತ್ತು 18 ರನ್ ಗಳಿಸಿದ ಬಳಿಕ ಮೂರು ಸ್ಥಾನಗಳನ್ನು ಏರಿಕೆ ಕಂಡು ವೃತ್ತಿಜೀವನದ ಅತ್ಯುತ್ತಮ 3ನೇ ಸ್ಥಾನಕ್ಕೆ ತಲುಪಿದ್ದಾರೆ.
ಸ್ಟೀವ್ ಸ್ಮಿತ್ 885 ರೇಟಿಂಗ್ ಪಾಯಿಂಟ್‌ಗಳು, ಟ್ರಾವಿಸ್ ಹೆಡ್ 884 ರೇಟಿಂಗ್ ಪಾಯಿಂಟ್‌ಗಳು ಮತ್ತು ಕೇನ್ ವಿಲಿಯಮ್ಸನ್ 883 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವುದರಿಂದ ಎರಡನೇ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.

ಒಂದೇ ತಂಡದ ಬ್ಯಾಟರ್‌ಗಳು ಮೊದಲ ಮೂರು ಶ್ರೇಯಾಂಕಗಳನ್ನು ಪಡೆದಿರುವುದು ಅಪರೂಪದ ಘಟನೆಯಾಗಿದೆ. ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಇದು ಕೊನೆಯ ಬಾರಿಗೆ 1984ರಲ್ಲಿ ಸಂಭವಿಸಿತ್ತು. ವೆಸ್ಟ್ ಇಂಡೀಸ್ ಆಟಗಾರರಾದ ಗಾರ್ಡನ್ ಗ್ರೀನಿಡ್ಜ್ (810 ರೇಟಿಂಗ್ ಅಂಕಗಳು), ಕ್ಲೈವ್ ಲಾಯ್ಡ್ (787) ಮತ್ತು ಲ್ಯಾರಿ ಗೋಮ್ಸ್ (773) ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನ ಹೊಂದಿದ್ದರು.
ಭಾರತದ ವಿರುದ್ಧ 209 ರನ್‌ಗಳ ಗೆಲುವಿನ ನಂತರ ಆಸ್ಟ್ರೇಲಿಯಾ ತಂಡದ ಹಲವು ಆಟಗಾರರು ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ.
ಅಲೆಕ್ಸ್ ಕ್ಯಾರಿ 48 ಮತ್ತು 66 ರನ್ ಗಳಿಸಿದ ನಂತರ 11 ಸ್ಥಾನಗಳ ಏರಿಕೆ ಸಾಧಿಸಿ 36ನೇ ಸ್ಥಾನಕ್ಕೆ ತಲುಪಿದ್ದರೆ, ನಾಥನ್ ಲಿಯಾನ್ ಅವರು ಎರಡು ಸ್ಥಾನ ಮೇಲೇರಿ ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಮತ್ತು ಸ್ಕಾಟ್ ಬೋಲ್ಯಾಂಡ್ (5 ಸ್ಥಾನ ಮೇಲೇರಿ 36ನೇ ಸ್ಥಾನಕ್ಕೆ) ಕೂಡ ಪಂದ್ಯದಲ್ಲಿ ತಲಾ ಐದು ವಿಕೆಟ್ ಕಬಳಿಸಿ ಮುಗಿಸಿದ್ದಾರೆ.
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಿಂಕ್ಯ ರಹಾನೆ ಅವರ 89 ಮತ್ತು 46 ರನ್ ಬಾರಿಸಿದ ಬಳಿಕ 37ನೇ ಸ್ಥಾನದಲ್ಲಿ ಶ್ರೇಯಾಂಕಕ್ಕೆ ಮರಳಿದ್ದಾರೆ. ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕದ ನಂತರ ಆರು ಸ್ಥಾನ ಮೇಲಕ್ಕೇರಿ 94ನೇ ಸ್ಥಾನ ತಲುಪಿದ್ದಾರೆ.
ಈ ಮಧ್ಯೆ, ಪುರುಷರ ಏಕದಿನ ಶ್ರೇಯಾಂಕದಲ್ಲಿ ಯುಎಇ ಬ್ಯಾಟರ್ ವೃತ್ಯ ಅರವಿಂದ್ ಶಾರ್ಜಾದಲ್ಲಿ ನಡೆದ ತಮ್ಮ ತವರು ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 36 ಮತ್ತು 70 ರನ್ ಗಳಿಸಿದ ಬಳಿಕ ಏಳು ಸ್ಥಾನ ಮೇಲೇರಿ 49ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಅವರು ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಐದು ಸ್ಥಾನ ಏರಿಕೆ ಕಂಡು 62ನೇ ಸ್ಥಾನಕ್ಕೆ ತಲುಪಿದ್ದಾರೆ. ಆಲ್‌ರೌಂಡರ್ ವನಿಂದು ಹಸರಂಗ ಬೌಲರ್‌ಗಳ ಶ್ರೇಯಾಂಕದಲ್ಲಿ ಎರಡು ಸ್ಥಾನ ಮೇಲೇರಿ 28ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಐಸಿಸಿ ಪುರುಷರ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕ (ರೇಟಿಂಗ್ ಪಾಯಿಂಟ್ಸ್):
1) ಮಾರ್ನಸ್ ಲ್ಯಾಬುಸ್ಚಾಗ್ನೆ - ಆಸ್ಟ್ರೇಲಿಯಾ - 903
2) ಸ್ಟೀವ್ ಸ್ಮಿತ್ - ಆಸ್ಟ್ರೇಲಿಯಾ - 885
3) ಟ್ರಾವಿಸ್ ಹೆಡ್ - ಆಸ್ಟ್ರೇಲಿಯಾ - 884
4) ಕೇನ್ ವಿಲಿಯಮ್ಸನ್ - ನ್ಯೂಜಿಲೆಂಡ್ - 883
5) ಬಾಬರ್ ಅಜಂ - ಪಾಕಿಸ್ತಾನ - 862
6) ಜೋ ರೂಟ್ - ಇಂಗ್ಲೆಂಡ್ - 861
7) ಡೆರಿಲ್ ಮಿಚೆಲ್ - ನ್ಯೂಜಿಲೆಂಡ್ - 792
8) ದಿಮುತ್ ಕರುಣಾರತ್ನೆ - ಶ್ರೀಲಂಕಾ - 780
9) ಉಸ್ಮಾನ್ ಖವಾಜಾ - ಆಸ್ಟ್ರೇಲಿಯಾ - 777
10) ರಿಷಭ್ ಪಂತ್ - ಭಾರತ - 758
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications