ICC Test Rankings: ಮೂರಕ್ಕೇರಿದ ರೂಟ್, ಕೊಹ್ಲಿ ಭಾರೀ ಕುಸಿತ!

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ವಿಭಾಗದ ನೂತನ ಟೆಸ್ಟ್ ರ್‍ಯಾಂಕಿಂಗ್ ಪ್ರಕಟಿಸಿದೆ. ವಿಶ್ವ ನಂ.1 ಸ್ಥಾನದಲ್ಲಿದ್ದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಕುಸಿತ ಕಂಡಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಏರಿಳಿತಗಳಾಗಿವೆ.
2020ರ ಆರಂಭದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಟೆಸ್ಟ್ ರ್‍ಯಾಂಕಿಗ್ ಮತ್ತು ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದರು. ಕೊಹ್ಲಿ ಈಗಲೂ ಏಕದಿನದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಕೆಳ ಕುಸಿದಿದ್ದಾರೆ.
ನೂತನ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಏರಿಳಿತ ಕಂಡಿರುವ ಆಟಗಾರರ, ತಂಡಗಳ ಮಾಹಿತಿ ಕೆಳಗಿದೆ ನೋಡಿ.

ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್
1. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್, 919 ರೇಟಿಂಗ್ ಪಾಯಿಂಟ್ಸ್), 2. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, 891), 3. ಜೋ ರೂಟ್ (ಇಂಗ್ಲೆಂಡ್, 883), 4. ಮಾರ್ನಸ್ ಲ್ಯಬುಶೇನ್ (ಆಸ್ಟ್ರೇಲಿಯಾ), 5. ವಿರಾಟ್ ಕೊಹ್ಲಿ (ಭಾರತ), 6. ಬಾಬರ್ ಅಝಾಮ್ (ಪಾಕಿಸ್ತಾನ), 7. ಚೇತೇಶ್ವರ್ ಪೂಜಾರ (ಭಾರತ), 8. ಹೆನ್ರಿ ನಿಕೋಲ್ಸ್ (ನ್ಯೂಜಿಲೆಂಡ್), 9. ಬೆನ್ ಸ್ಟೋಕ್ಸ್ (ಇಂಗ್ಲೆಂಡ್), 10. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ).

ಟೆಸ್ಟ್ ಆಲ್ ರೌಂಡರ್‌ಗಳು
1. ಬೆನ್ ಸ್ಟೋಕ್ಸ್ (ಇಂಗ್ಲೆಂಡ್, 428), 2. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್, 414), 3. ರವೀಂದ್ರ ಜಡೇಜಾ (ಭಾರತ, 410), 4. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), 5. ಕೈಲ್ ಜೇಮಿಸನ್ (ನ್ಯೂಜಿಲೆಂಡ್), 6. ರವಿಚಂದ್ರನ್ ಅಶ್ವಿನ್ (ಭಾರತ), 7. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), 8. ಕಾಲಿನ್ ಡೆ ಗ್ರ್ಯಾಂಡ್‌ಹೋಮ್ (ನ್ಯೂಜಿಲೆಂಡ್), 9. ಕ್ರಿಸ್ ವೋಕ್ಸ್ (ಇಂಗ್ಲೆಂಡ್), 10. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ).

ಬೌಲರ್ ಮತ್ತು ತಂಡಗಳು
* ಬೌಲರ್‌ಗಳು: 1. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ, 908), 2. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್, 830), 3. ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್, 826), 4. ನೀಲ್ ವ್ಯಾಗ್ನರ್ (ನ್ಯೂಜಿಲೆಂಡ್), 5. ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ).
* ತಂಡಗಳು: 1. ನ್ಯೂಜಿಲೆಂಡ್ (118 ರೇಟಿಂಗ್ ಪಾಯಿಂಟ್ಸ್), 2. ಭಾರತ (118), 3. ಆಸ್ಟ್ರೇಲಿಯಾ (113), 4. ಇಂಗ್ಲೆಂಡ್, 5. ಪಾಕಿಸ್ತಾನ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications