For Quick Alerts
ALLOW NOTIFICATIONS  
For Daily Alerts
 

ICC Rankings: ಟೆಸ್ಟ್ ಶ್ರೇಯಾಂಕದಲ್ಲಿ ರೋಹಿತ್ ಶರ್ಮಾ ಹಿಂದಿಕ್ಕಿದ ಯಶಸ್ವಿ ಜೈಸ್ವಾಲ್

ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಏರಿಕೆಯು ಮುಂದುವರಿದಿದೆ. ಯುವ ಆರಂಭಿಕ ಆಟಗಾರ ತನ್ನ ವೃತ್ತಿಜೀವನಕ್ಕೆ 3 ಸ್ಥಾನಗಳ ಏರಿಕೆ ಕಂಡಿದ್ದಾರೆ.

ಬುಧವಾರ, ಫೆಬ್ರವರಿ 28ರಂದು ನವೀಕರಿಸಲಾದ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಯಶಸ್ವಿ ಜೈಸ್ವಾಲ್ ಅವರು ಸದ್ಯ 12ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೂಲಕ ಅವರ ಆರಂಭಿಕ ಜೊತೆಗಾರ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. ಪುರುಷರ ಟೆಸ್ಟ್ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ರೋಹಿತ್ ಶರ್ಮಾ 13ನೇ ಸ್ಥಾನಕ್ಕೆ ಇಳಿದಿದ್ದಾರೆ.

ICC Test Rankings: Yashasvi Jaiswal Overtakes Rohit Sharma in Test Batting Rankings

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ತೋರಿದ್ದಕ್ಕಾಗಿ ಯಶಸ್ವಿ ಜೈಸ್ವಾಲ್ ಅವರಿಗೆ ಬಹುಮಾನ ಸಿಕ್ಕಿದೆ. ಎಡಗೈ ಆರಂಭಿಕ ಬ್ಯಾಟರ್ 5 ಪಂದ್ಯಗಳ ಸರಣಿಯ ಮೊದಲ ನಾಲ್ಕು ಟೆಸ್ಟ್‌ಗಳ ನಂತರ, 655 ರನ್ ಗಳಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಎರಡು ದ್ವಿಶತಕಗಳೊಂದಿಗೆ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು.

ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡದಿದ್ದರೂ, ವಿರಾಟ್ ಕೊಹ್ಲಿ ಇನ್ನೂ ಹೆಚ್ಚಿನ ಶ್ರೇಯಾಂಕದ ಭಾರತೀಯ ಟೆಸ್ಟ್ ಬ್ಯಾಟರ್ ಆಗಿದ್ದಾರೆ. ಆದರೆ, ಭಾರತ ತಂಡದ ಮಾಜಿ ನಾಯಕ ಎರಡು ಸ್ಥಾನಗಳನ್ನು ಕಳೆದುಕೊಂಡು 9ನೇ ಸ್ಥಾನಕ್ಕೆ ಇಳಿದಿದ್ದಾರೆ.

ಸಂಪೂರ್ಣ ಸರಣಿಯಿಂದ ಹಿಂದೆ ಸರಿಯುವ ಮೊದಲು ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್‌ಗಳಿಂದ ಹಿಂದೆ ಸರಿದರು, ನಂತರ ಪಿತೃತ್ವ ರಜೆ ಪಡೆದರು. ಫೆಬ್ರವರಿ 15ರಂದು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಕಾಯ್ ಎಂಬ ಗಂಡು ಮಗುವಿಗೆ ಪೋಷಕರಾದರು.

ಯಶಸ್ವಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿಯ ಹುಡುಕಾಟದಲ್ಲಿದ್ದಾರೆ. ಯುವ ಆರಂಭಿಕ ಆಟಗಾರನು ತನ್ನ ಸಾಮರ್ಥ್ಯವನ್ನು ಭಾರತ ರಾಷ್ಟ್ರೀಯ ತಂಡಕ್ಕೆ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾನೆ.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಹಿರಿಯ ಬ್ಯಾಟರ್‌ಗಳ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ತಂಡದ ಜವಾಬ್ದಾರಿಯ ಭಾರವನ್ನು ಸುಲಭವಾಗಿ ನಿಭಾಯಿಸಿದರು. ಎರಡು ದ್ವಿಶತಕಗಳನ್ನು ಬಾರಿಸಿದರು, ಅಲ್ಲದೆ ವಿರಾಟ್ ಕೊಹ್ಲಿ ಮತ್ತು ವಿನೋದ್ ಕಾಂಬ್ಳಿ ನಂತರ ಸತತ ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಮೂರನೇ ಭಾರತೀಯ ಆಟಗಾರರಾದರು.

ಇದೇ ವೇಳೆ ಶುಭ್ಮನ್ ಗಿಲ್ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ 4 ಸ್ಥಾನಗಳನ್ನು ಮೇಲೇರಿ 31ನೇ ಸ್ಥಾನಕ್ಕೆ ಜಿಗಿದ ಕಾರಣ, ಸರಣಿಯಲ್ಲಿ ಉತ್ತಮ ಪ್ರದರ್ಶನಕ್ಕೆ ಬಹುಮಾನ ಪಡೆದರು. ಭಾರತ ತಂಡದ ರಾಂಚಿ ಟೆಸ್ಟ್ ಗೆಲುವಿನ ಹೀರೋ ಧ್ರುವ್ ಜುರೆಲ್ ಅವರು 69ನೇ ಶ್ರೇಯಾಂಕದಲ್ಲಿ ವೃತ್ತಿಜೀವನದ ಅತ್ಯುತ್ತಮ ಸ್ಥಾನವನ್ನು ಗಳಿಸಿದರು.

ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕ

1. ಕೇನ್ ವಿಲಿಯಮ್ಸನ್ - 893 ರೇಟಿಂಗ್ ಪಾಯಿಂಟ್ಸ್
2. ಸ್ಟೀವ್ ಸ್ಮಿತ್ - 818 ರೇಟಿಂಗ್ ಪಾಯಿಂಟ್ಸ್
3. ಜೋ ರೂಟ್ - 799 ರೇಟಿಂಗ್ ಪಾಯಿಂಟ್ಸ್
4. ಡೇರಿಲ್ ಮಿಚೆಲ್ - 780 ರೇಟಿಂಗ್ ಪಾಯಿಂಟ್ಸ್
5. ಬಾಬರ್ ಆಜಮ್ - 768 ರೇಟಿಂಗ್ ಪಾಯಿಂಟ್ಸ್
6. ಉಸ್ಮಾನ್ ಖವಾಜಾ - 765 ರೇಟಿಂಗ್ ಪಾಯಿಂಟ್ಸ್
7. ದಿಮುತ್ ಕರುಣಾರತ್ನ - 750 ರೇಟಿಂಗ್ ಪಾಯಿಂಟ್ಸ್
8. ಮಾರ್ನಸ್ ಲ್ಯಾಬುಸ್ಚಾಗ್ನೆ - 746 ರೇಟಿಂಗ್ ಪಾಯಿಂಟ್ಸ್
9. ವಿರಾಟ್ ಕೊಹ್ಲಿ - 744 ರೇಟಿಂಗ್ ಪಾಯಿಂಟ್ಸ್
10. ಹ್ಯಾರಿ ಬ್ರೂಕ್ - 743 ರೇಟಿಂಗ್ ಪಾಯಿಂಟ್ಸ್

ಪ್ರಮುಖ ಸ್ಥಾನಗಳಲ್ಲಿ ಇತರ ಭಾರತೀಯ ಆಟಗಾರರು
12. ಯಶಸ್ವಿ ಜೈಸ್ವಾಲ್ - 727 ರೇಟಿಂಗ್ ಪಾಯಿಂಟ್ಸ್
13. ರೋಹಿತ್ ಶರ್ಮಾ - 720 ರೇಟಿಂಗ್ ಪಾಯಿಂಟ್ಸ್
14. ರಿಷಭ್ ಪಂತ್ - 699 ರೇಟಿಂಗ್ ಪಾಯಿಂಟ್ಸ್

ಇನ್ನು ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ, ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದರೂ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಸಹ ಆಟಗಾರ ಕುಲದೀಪ್ ಯಾದವ್ 10 ಸ್ಥಾನಗಳನ್ನು ಜಿಗಿದು 32ನೇ ಸ್ಥಾನಕ್ಕೆ ಏರಿದ್ದಾರೆ ಮತ್ತು ಇಂಗ್ಲೆಂಡ್ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದ ನಂತರ ವೃತ್ತಿಜೀವನದ ಉನ್ನತ ಶ್ರೇಯಾಂಕ ಪಡೆದರು.

ಭಾರತವು ರಾಂಚಿ ಟೆಸ್ಟ್‌ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದು, 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದ ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿತು. ಉಭಯ ತಂಡಗಳ ನಡುವಿನ 5ನೇ ಟೆಸ್ಟ್ ಮಾರ್ಚ್ 7ರಂದು ಧರ್ಮಶಾಲಾದಲ್ಲಿ ನಡೆಯಲಿದೆ.

Story first published: Wednesday, February 28, 2024, 16:29 [IST]
Other articles published on Feb 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+