Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂಡರ್ 19 ವಿಶ್ವಕಪ್ : ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್ ಗಳ ಜಯ

ICC U-19 World Cup 2018: India wallop Zimbabwe by 10 wickets

ಮೌಂಟ್ ಮಾಗಾನುಯಿಯ ಬೇ ಓವಲ್(ನ್ಯೂಜಿಲೆಂಡ್), ಜನವರಿ 19: ವಿಶ್ವಕಪ್ ಅಂಡರ್ 19 ಟೂರ್ನಮೆಂಟ್ ನಲ್ಲಿ ಟೀಂ ಇಂಡಿಯಾದ ಯುವ ತಂಡವು ಬಿ ಗುಂಪಿನಲ್ಲಿ ಅಜೇಯವಾಗಿ ಉಳಿದು ಲೀಗ್ ಹಂತದ ಕೊನೆ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದೆ. ಜಿಂಬಾಬ್ವೆ ವಿರುದ್ಧ ಶುಕ್ರವಾರ(ಜನವರಿ 19) ದಂದು ನಡೆದ ಪಂದ್ಯವನ್ನು 10 ವಿಕೆಟ್ ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟ್ ಮೈದ ಜಿಂಬಾಬ್ವೆ ತಂಡಕ್ಕೆ ಭಾರತದ ಸ್ಪಿನ್ನರ್ ಅನುಕೂಲ್ ರಾಯ್ ಮಾರಕವಾಗಿ ಪರಿಣಮಿಸಿದರು. 7.1 ಓವರ್ ಗಳಲ್ಲಿ 4/20 ಪಡೆದರು. ಪಪ್ಪುವಾ ನ್ಯೂ ಗಿನಿ ವಿರುದ್ಧ ಅನುಕೂಲ್ ಅವರು 5/14 ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಿಂಬಾಬ್ವೆ ತಂಡ 48.4 ಓವರ್ ಗಳಲ್ಲಿ 154 ಸ್ಕೋರಿಗೆ ಆಲೌಟ್ ಆಯಿತು. ಜಿಂಬಾಬ್ವೆ ಪರ ವೆಸ್ಲೆ ಮಧ್ವೆವೆರೆ 30, ಮಿಲ್ಟನ್ ಶುಂಬಾ 36, ಲಿಮ್ ರೋಚಿ 31ರನ್ ಗಳಿಸಿದರು.

ಸುಲಭ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಹಾರ್ವಿಕ್ ದೇಸಾಯಿ (56 ರನ್, 73 ಎಸೆತ, 8x4, 1x6) ಹಾಗೂ ಶುಭಂ ಗಿಲ್ (90ರನ್, 59ಎ, 14x4, 1x6) ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವಿನ ದಡ ಮುಟ್ಟಿಸಿದರು.

Story first published: Friday, January 19, 2018, 15:43 [IST]
Other articles published on Jan 19, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+