ಐಸಿಸಿ ಅಂಡರ್-19 ವಿಶ್ವಕಪ್ 2024: 15 ಸದಸ್ಯರ ಭಾರತ ತಂಡ ಪ್ರಕಟ; ಉದಯ್ ಸಹರಾನ್‌ಗೆ ನಾಯಕತ್ವ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನಿಯರ್ ಆಯ್ಕೆ ಸಮಿತಿಯು ಉದಯ್ ಸಹರಾನ್ ನಾಯಕತ್ವದಲ್ಲಿ ಮುಂಬರುವ ದಕ್ಷಿಣ ಆಫ್ರಿಕಾದಲ್ಲಿ ತ್ರಿಕೋನ ಸರಣಿ ಮತ್ತು 2024ರ ಐಸಿಸಿ ಪುರುಷರ ಅಂಡರ್-19 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತದ ತಂಡವನ್ನು ಪ್ರಕಟಿಸಿದೆ.
ಭಾರತ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತ್ರಿಕೋನ ಸರಣಿಯು ಡಿಸೆಂಬರ್ 29, 2023ರಂದು ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯವನ್ನು ಜನವರಿ 10, 2024ರಂದು ನಿಗದಿಪಡಿಸಲಾಗಿದೆ.

ಮುಂದಿನ ಅಂಡರ್-19 ಪುರುಷರ ವಿಶ್ವಕಪ್ ಪಂದ್ಯಾವಳಿಯು 15ನೇ ಆವೃತ್ತಿಯಾಗಿದೆ. ಕೊನೆಯ ಬಾರಿಗೆ 2022ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದಾಗ ಭಾರತ ತನ್ನ ಐದನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪಂದ್ಯಾವಳಿಯು ಜನವರಿ 19ರಿಂದ ಪ್ರಾರಂಭವಾಗಲಿದೆ. ಒಟ್ಟು 41 ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 11ರಂದು ಫೈನಲ್ ನಡೆಯಲಿದೆ.
ಹಾಲಿ ಚಾಂಪಿಯನ್ ಭಾರತ ತಂಡವು ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಯುಎಸ್‌ಎ ತಂಡಗಳೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳು ಸೇರಿವೆ.
ಸಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾ ತಂಡಗಳಿದ್ದರೆ, ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳು ಡಿ ಗುಂಪಿನಲ್ಲಿವೆ.

ಟೀಮ್ ಇಂಡಿಯಾ ತಮ್ಮ ಅಂಡರ್-19 ವಿಶ್ವಕಪ್ ಅಭಿಯಾನವನ್ನು ಜನವರಿ 20, 2024ರಂದು ಬಾಂಗ್ಲಾದೇಶ ವಿರುದ್ಧ ಬ್ಲೋಮ್‌ಫಾಂಟೈನ್‌ನಲ್ಲಿ ಆಡುವ ಮೂಲಕ ಪ್ರಾರಂಭಿಸಲಿದೆ.
ಭಾರತವು ತನ್ನ ಮುಂದಿನ ಎರಡು ಗುಂಪಿನ ಪಂದ್ಯಗಳನ್ನು ಐರ್ಲೆಂಡ್ ಮತ್ತು ಯುಎಸ್ಎ ವಿರುದ್ಧ ಕ್ರಮವಾಗಿ ಜನವರಿ 25 ಮತ್ತು 28ರಂದು ಆಡಲಿದೆ.
2024ರ ಅಂಡರ್-19 ವಿಶ್ವಕಪ್‌ಗಾಗಿ ಭಾರತ ತಂಡ
ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಅರವಲ್ಲಿ ಅವನೀಶ್ ರಾವ್ (ವಿಕೆಟ್ ಕೀಪರ್), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ ಮತ್ತು ನಮನ್ ತಿವಾರಿ.
ಬ್ಯಾಕ್ ಅಪ್ ಆಟಗಾರರು
ದಿಗ್ವಿಜಯ್ ಪಾಟೀಲ್ (ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ), ಜಯಂತ್ ಗೋಯತ್ (ಹರಿಯಾಣ ಕ್ರಿಕೆಟ್ ಸಂಸ್ಥೆ), ಪಿ ವಿಘ್ನೇಶ್ (ತಮಿಳುನಾಡು ಕ್ರಿಕೆಟ್ ಸಂಸ್ಥೆ), ಕಿರಣ್ ಚೋರ್ಮಲೆ (ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications