U19 World Cup: ಭಾರತಕ್ಕೆ 6 ವಿಕೆಟ್ ಗೆಲುವು
ಐಸಿಸಿ ಅಂಡರ್-19 ವಿಶ್ವಕಪ್ 2026ರಲ್ಲಿ ಭಾರತ ಶುಭಾರಭವನ್ನು ಮಾಡಿದೆ. ಮಳೆ ಬಾಧಿತ ಮೊದಲ ಪಂದ್ಯದಲ್ಲಿ ಭಾರತ ಡಕ್‌ವರ್ತ್-ಲೂಯಿಸ್ ನಿಯಮದಂತೆ ಅಮೆರಿಕವನ್ನು 6 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಆಯುಷ್ ಮಾತ್ರೆ ಪಡೆ ಬಿ ಗುಂಪಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದೆ.
ಭಾರತದ ನಾಯಕ ಆಯುಷ್ ಮ್ಹಾತ್ರೆ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಶಿಸ್ತು ಬದ್ಧ ದಾಳಿಗೆ ಅಮೆರಿಕದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಯುಎಸ್ ತಂಡದ ಪರ ನಿತೀಶ್ ಸುಧಿನಿ 52 ಎಸೆತಗಳಲ್ಲಿ ನಾಲ್ಕು ಬೌಂಡರಿ ನೆರವಿನಿಂದ 36 ರನ್ ಬಾರಿಸಿದರು. ಉಳಿದಂತೆ ಅಮರಿಂದರ್ ಗಿಲ್ ಮತ್ತು ಸಾಹಿಲ್ ಗಾರ್ಗ್ ತಲಾ 16, ಅದ್ನಿತ್ ಜಾಂಬ್ 18 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಆಟಗಾರರು ಬಿಟ್ಟರೆ ಉಳಿದ ಬ್ಯಾಟರ್‌ಗಳು ಒಂದಕ್ಕಿಯಲ್ಲಿ ಆಟವನ್ನು ಮುಗಿಸಿದರು. ಪರಿಣಾಮ ಯುಎಸ್‌ಎ 35.2 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಹೆನಿಲ್ ಪಟೇಲ್ ಬಿಗುವಿನ ದಾಳಿ ನಡೆಸಿ ಮಿಂಚಿದರು. ಇವರು 7 ಓವರ್ ಬೌಲ್ ಮಾಡಿ 16 ರನ್ ನೀಡಿ 5 ವಿಕೆಟ್ ಉರುಳಿಸಿದರು.

ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಗುರಿಯನ್ನು 96 ರನ್‌ಗಳಿಗೆ ಇಳಿಸಲಾಯಿತು. ಭಾರತದ ಸ್ಟಾರ್ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 2 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವೇದಾಂತ್ ತ್ರಿವೇದಿ ಸಹ 2 ರನ್ ಬಾರಿಸುತ್ತಲೇ ಸುಸ್ತಾದರು. ನಾಯಕ ಆಯುಷ್ ಮಾತ್ರೆ ಬಿಗ್ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರೂ ಸಹ ಇವರ ಆಟ 19 ರನ್‌ಗಳಿಗೆ ಕೊನೆಯಾಯಿತು. ಆಯುಷ್ ಮಾತ್ರೆ ಔಟ್ ಆಗುವ ಮುನ್ನ 4 ಬೌಂಡರಿ ಬಾರಿಸಿದ್ದರು. ವಿಹಾನ್ ಮಲೋತ್ರಾ 2 ಬೌಂಡರಿ ಸಹಾಯದಿಂದ 18 ರನ್ ಸಿಡಿಸಿದರು.
ಅಭಿಗ್ಯಾನ್ ಕುಂಡು ಮಿಂಚು
ವಿಕೆಟ್ ಕೀಪರ್ ಬ್ಯಾಟರ್ ಅಭಿಗ್ಯಾನ್ ಕುಂಡು ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು 41 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 42 ರನ್ ಬಾರಿಸಿದರು. ಅಂತಿಮವಾಗಿ ಭಾರತ 17.2 ಓವರ್‌ಗಳಲ್ಲಿ 4 ವಿಕೆಟ್‌ಗೆ 99 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications