ಮುಂದಿನ ವರ್ಷ ನಡೆಯಲಿರುವ ಅಂಡರ್ 19 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ
ಮುಂದಿನ ವರ್ಷ ಅಂದರೆ 2014ರಲ್ಲಿ ಅಂಡರ್ 19 ವಿಶ್ವಕಪ್ ಟೂರ್ನಿ ಆಯೋಜನೆಯಾಗಲಿದೆ. ಈ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಇಂದು ಪ್ರಕಟಿಸಿದೆ. ಶ್ರೀಲಂಕಾ ಈ ಟೂರ್ನಿಯ ಆಯೋಜನೆಯನ್ನು ಮಾಡಲಿದ್ದು ಜನವರಿ 13ರಿಂದ ಆರಂಭವಾಗಿ ಫೆಬ್ರವರಿ 4ರಂದು ಫೈನಲ್ ಪಂದ್ಯ ನಡೆಯಲಿದೆ.
ಮುಂದಿನ ವರ್ಷದ ಅಂಡರ್ 19 ವಿಶ್ವಕಪ್ ಟೂರ್ನಿ 15ನೇ ಆವೃತ್ತಿಯ ಟೂರ್ನಿ ಆಗಿರಲಿದೆ. 16 ತಂಡಗಳು ಈ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿದ್ದು 2006ರ ಬಳಿಕ ಶ್ರೀಲಂಕಾ ಇದೇ ಮೊದಲ ಬಾರಿಗೆ ಟೂರ್ನಿಯ ಆತಿಥ್ಯವನ್ನು ವಹಿಸಲಿದೆ. ಜನವರಿ 13ರಂದು ಆತಿಥೆಯ ಶ್ರೀಲಂಕಾ ಜಿಂಬಾಬ್ವೆ ತಂಡವನ್ನು ಎದುರಿಸುವ ಮೂಲಕ ಈ ಟೂರ್ನಿಗೆ ಚಾಲನೆ ದೊರೆಯಲಿದೆ.

ಇನ್ನು ವೆಸ್ಟ್ ಇಂಡೀಸ್‌ನಲ್ಲಿ 2022ರ ಆವೃತ್ತಿಯ ಅಂಡರ್ 19 ವಿಶ್ವಕಪ್ ಗೆದ್ದು ಹಾಲಿ ಚಾಂಪಿಯನ್ ಎನಿಸಿಕೊಂಡಿರುವ ಭಾರತ ತಂಡ ಉದ್ಘಾಟನೆಯ ಮರುದಿನ ಬಾಂಗ್ಲಾದೇಶ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ವೆಸ್ಟ್ ಇಂಡೀಸ್ ಆಯೋಜಿಸಿದ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಚಾಂಪಿಯನ್ ಪಟ್ಟಕ್ಕೇರಿತ್ತು.
ಇನ್ನು ಮುಂದಿನ ವರ್ಷ ನಡೆಯಲಿರುವ ಈ ಟೂರ್ನಿಯ ಮಾದರಿ ಕಳೆದ ಮಾದರಿಗಿಂತ ಭಿನ್ನವಾಗಲಿದೆ. 16 ತಂಡಗಳು ಭಾಗವಹಿಸಲಿರುವ ಟೂರ್ನಿಯಲ್ಲಿ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಎಲ್ಲಾ ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳಾಗಿ ಸೆಣೆಸಾಟ ನಡೆಸಲಿದೆ. ಇನ್ನು ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ. ಗ್ರೂಪ್ ಹಂತದ ಪಂದ್ಯಗಳು ಜನವರಿ 13ರಿಂದ 21ರ ವರೆಗೆ ಆಯೋಜನೆಯಾಗಲಿದೆ.
ಇನ್ನು ಭಾರತ ತಂಡ ಗ್ರೂಪ್ 'ಎ'ಯಲ್ಲಿದ್ದು ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಯುಎಸ್‌ಎ ಈ ಗುಂಪಿನಲ್ಲಿರುವ ಯಳಿದ ಮೂರು ತಂಡಗಳಾಗಿದೆ. ಜನವರಿ 14ರಂದು ಭಾರತ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಿದರೆ ಜನವರಿ 18ರಂದು ಯುಎಸ್‌ಎ ಭಾರತಕ್ಕೆ ಎದುರಾಳಿಯಾಗಿರಲಿದೆ. ಇನ್ನು ಜನವರಿ 20ರಂದು ಐರ್ಲೆಂಡ್ ವಿರುದ್ಧ ಗ್ರೂಫ್ ಹಂತದ ಕೊನೆಯ ಪಂದ್ಯವನ್ನಾಡಲಿದೆ ಭಾರತ.
ಭಾರತವನ್ನು ಬಾಂಗ್ಲಾದೇಶ, ಐರ್ಲೆಂಡ್ ಮತ್ತು USA ಎ ಗುಂಪಿನಲ್ಲಿದ್ದರೆ ಗ್ರೂಪ್ 'ಬಿ'ಯಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳು ಇದೆ. ಇನ್ನು 'ಸಿ' ಗುಂಪಿನಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಕಾಣಿಸಿಕೊಂಡಿದ್ದು, ಡಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳು ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications