ICC U19 World Cup: ಯುಎಸ್‌ಎಗೆ ಸವಾಲು ಎಸೆಯಲಿದೆ ಭಾರತ: ಪಂದ್ಯದ ಸಮಯ, ನೇರಪ್ರಸಾರದ ಮಾಹಿತಿ
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಐಸಿಸಿ ಟಿ20 ವಿಶ್ವಕಪ್ ಮುಂದಿನ ತಿಂಗಳು ಆರಂಭವಾಗಲಿದೆ. ಅದಕ್ಕೂ ಮುನ್ನ, ಅಂಡರ್-19 ವಿಶ್ವಕಪ್ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸೇರಿದಂತೆ 16 ತಂಡಗಳು ಭಾಗವಹಿಸುತ್ತಿವೆ. ಭಾರತ ಈ ವಿಶ್ವಕಪ್‌ನಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತ ಸೇರಿದಂತೆ ಬಾಂಗ್ಲಾದೇಶ, ನ್ಯೂಜಿಲೆಂಡ್, ಯುಎಸ್‌ಎ ತಂಡಗಳು ಭಾಗವಹಿಸುತ್ತಿವೆ.
ಭಾರತ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಆಯುಷ್ ಮಾತ್ರೆ ಮುಂದಾಳತ್ವದ ತಂಡದಲ್ಲಿ ಎಲ್ಲರ ಕಣ್ಣುಗಳು ವೈಭವ್ ಸೂರ್ಯವಂಶಿ ಅವರ ಮೇಲೆ ನೆಟ್ಟಿವೆ. ವೈಭವ್ ಸೂರ್ಯವಂಶಿ ಈಗಾಗಲೇ ಅಂತಾರಾಷ್ಟ್ರೀಯ ಅಂಡರ್ 19 ಪಂದ್ಯಗಳಲ್ಲಿ ಮನಮೋಹಕ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಅಂಡರ್ 19 ವಿಶ್ವಕಪ್‌ನಲ್ಲಿ ಆಡುತ್ತಿರುವುದರಿಂದ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿವೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಧಮಾಕೆದಾರ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಗುರುವಾರ ನಡೆಯಲಿರುವ ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಇವರ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಯಾವ ತಂಡದೊಂದಿಗೆ ಮೊದಲ ಪಂದ್ಯವನ್ನು ಆಡಲಿದೆ?
ಗುರುವಾರ ಭಾರತ ಅಂಡರ್ 19 ತಂಡ ಯುಎಸ್‌ಎ ವಿರುದ್ಧ ಕಾದಾಟ ನಡೆಸಲಿದೆ.
ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ಯಾರು?
ಯುವ ಆಟಗಾರ ಆಯುಷ್ ಮ್ಹಾತ್ರೆ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಭಾರತ ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಭಾರತ U19 ತಂಡ: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವಿಹಾನ್ ಮಲ್ಹೋತ್ರಾ, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್), ಕನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ದೀಪೇಶ್ ದೇವೇಂದ್ರನ್, ಕಿಶನ್ ಕುಮಾರ್ ಸಿಂಗ್, ಹೆನಿಲ್ ಪಟೇಲ್, ಉಧವ್ ಮೋಹನ್, ಆರ್.ಎಸ್. ಅಂಬ್ರಿಷ್, ಮೊಹಮ್ಮದ್ ಎನಾನ್ ಮತ್ತು ಹರ್ವನ್ ಪಂಗಾಲಿಯ

ಯುಎಸ್‌ಎ ಅಂಡರ್ 19 ತಂಡವನ್ನು ಮುನ್ನಡೆಸುವುದು ಯಾರು? ಹಾಗೂ ತಂಡ ಹೇಗಿರುವ ಸಾಧ್ಯತೆ ಇದೆ
ಅಂಡರ್ 19 ವಿಶ್ವಕಪ್‌ನಲ್ಲಿ ಯುಎಸ್‌ಎ ತಂಡವನ್ನು ಉತ್ಕರ್ಷ್ ಶ್ರೀವಾಸ್ತವ ಮುನ್ನಡೆಸಲಿದ್ದಾರೆ.
ಯುಎಸ್‌ಎ ಅಂಡರ್ 19 ಸಂಭಾವ್ಯ ತಂಡ: ಅಮರಿಂದರ್ ಗಿಲ್, ಸಾಹಿಲ್ ಗಾರ್ಗ್, ಅರ್ಜುನ್ ಮಹೇಶ್, ಉತ್ಕರ್ಷ್ ಶ್ರೀವಾಸ್ತವ (ನಾಯಕ), ಅದ್ನೀತ್ ಜಾಂಬ್, ಅಮೊಘ್ ಅರೆಪಲ್ಲಿ, ನಿತೀಶ್ ಸುದಿನಿ, ಶಿವ ಶಾನಿ, ಆದಿತ್ ಕಪ್ಪಾ, ಸಾಹಿರ್ ಭಾಟಿಯಾ, ರಿಯಾನ್ ತಾಜ್, ಅದ್ವೈತ್ ಕೃಷ್ಣ, ಶಬರೀಶ್ ಪ್ರಸಾದ್, ರಿತ್ವಿಕ್ ಅಪ್ಪಿಡಿ ಮತ್ತು ರಿಷಬ್ ಶಿಂಪಿ.
ಅಂಡರ್ 19 ವಿಶ್ವಕಪ್ ಪಂದ್ಯಗಳು ಯಾವಾಗ ಆರಂಭವಾಗುತ್ತವೆ?
ಭಾರತ, ಯುಎಸ್‌ಎ ಅಂಡರ್ 19 ವಿಶ್ವಕಪ್ ತಂಡಗಳು ಭಾರತೀಯ ಕಾಲಾಮಾನದ ಪ್ರಕಾರ ಮಧ್ಯಾಹ್ನ 1:00 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೆ ಅರ್ಧ ಗಂಟೆ ಮೊದಲು ಟಾಸ್ ನಡೆಯಲಿದೆ.
ಅಂಡರ್ 19 ವಿಶ್ವಕಪ್ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು?
ಅಂಡರ್ 19 ವಿಶ್ವಕಪ್ ಪಂದ್ಯಗಳನ್ನು ಸ್ಟಾರ್ ಸ್ಫೋರ್ಟ್ಸ್ ನೆಟ್ ವರ್ಕ್‌ನಲ್ಲಿ ವೀಕ್ಷಿಸಬಹುದು.
ಬಾಂಗ್ಲಾದೇಶದ ವಿರುದ್ಧ ಭಾರತ ಅಂಡರ್ 19 ಯಾವಾಗ ಕಣಕ್ಕೆ ಇಳಿಯಲಿದೆ?
ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಅಂಡರ್ 19 ತಂಡ ಜನವರಿ 17ಕ್ಕೆ ಕಣಕ್ಕೆ ಇಳಿಯಲಿದೆ.
ನ್ಯೂಜಿಲೆಂಡ್ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯವನ್ನು ಭಾರತ ಯಾವಾಗ ಆಡಲಿದೆ?
ಜನವರಿ 24 ರಂದು ಭಾರತ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications