For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್: ಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ

ICC U-19 World Cup:ಮೊದಲ ಬಾರಿ ಫೈನಲ್ ಗೆ ಲಗ್ಗೆ ಇಟ್ಟ ಬಾಂಗ್ಲಾ | U19 | World cup | India | Bangladesh
ICC U19 World Cup: Bangladesh enter maiden final

ಪೊಚೆಫ್‌ಸ್ಟ್ರೂಮ್, ಫೆಬ್ರವರಿ 6: ಮೊಹಮದುಲ್ ಹಸನ್ ಜಾಯ್ ಬಾರಿಸಿದ ಆಕರ್ಷಕ ಶತಕದ ಕೊಡುಗೆಯಿಂದ ಅಂಡರ್ 19 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಯುವ ತಂಡ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಗುರುವಾರ (ಫೆಬ್ರವರಿ 6) ನಡೆದ ಸೂಪರ್ ಲೀಗ್‌ ಸೆಮಿಫೈನಲ್ 2 ಪಂದ್ಯದಲ್ಲಿ ಬಾಂಗ್ಲಾ, ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್‌ ಗೆಲುವು ಕಂಡಿದೆ.

ಅಂಡರ್ 19 ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾ ಯುವ ತಂಡ ಫೈನಲ್‌ಗೆ ಪ್ರವೇಶಿಸುತ್ತಿರುವುದು ಇದು ಮೊದಲಬಾರಿ. ಈ ಬಾರಿಯೂ ಸೇರಿ ಒಟ್ಟಿಗೆ 7 ಸಾರಿ ಫೈನಲ್ ಪ್ರವೇಶಿಸಿರುವ ಟೀಮ್ ಇಂಡಿಯಾ, ಭಾನುವಾರ (ಫೆಬ್ರವರಿ 9) ಫೈನಲ್‌ನಲ್ಲಿ ಬಾಂಗ್ಲಾ ಸವಾಲು ಸ್ವೀಕರಿಸಲಿದೆ.

ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್, ಬೆಕ್ಹ್ಯಾಮ್ ವೀಲರ್-ಗ್ರೀನಾಲ್ ಅಜೇಯ 75, ನಿಕೋಲಸ್ ಲಿಡ್ಸ್ಟೋನ್ 44, ಫರ್ಗುಸ್ ಲೆಲ್ಮನ್ 24 ಗಮನಾರ್ಹ ರನ್‌ನೊಂದಿಗೆ 50 ಓವರ್‌ನಲ್ಲಿ 8 ವಿಕೆಟ್‌ ನಷ್ಟದಲ್ಲಿ 211 ರನ್ ಕಲೆ ಹಾಕಿತು.

ಚೇಸಿಂಗ್‌ಗೆ ಇಳಿದ ಬಾಂಗ್ಲಾ ತಂಡ, ಮೊಹಮುದುಲ್ ಹಸನ್ 100, ತೌಹಿದ್ ಹೃದಯ್ 40, ಶಹಾದತ್ ಹೊಸೈನ್ 40 ರನ್‌ನೊಂದಿಗೆ 44.1ನೇ ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 215 ರನ್ ಮಾಡಿತು. ಕಿವೀಸ್ ಇನ್ನಿಂಗ್ಸ್‌ನಲ್ಲಿ ಶರೀಫುಲ್ ಇಸ್ಲಾಂ 3, ಶಮೀಮ್ ಹೊಸೈನ್ 2, ಹಸನ್ ಮುರಾದ್ 2, ಶಕಿಬುಲ್ ಹಸನ್ 1 ವಿಕೆಟ್‌ಗಾಗಿ ಗಮನ ಸೆಳೆದರು.

Story first published: Thursday, February 6, 2020, 22:37 [IST]
Other articles published on Feb 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+