ಅಂಡರ್ 19 ವಿಶ್ವಕಪ್ : ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಮೌಂಟ್ ಮಾಗಾನುಯಿಯ ಬೇ ಓವಲ್(ನ್ಯೂಜಿಲೆಂಡ್), ಜನವರಿ 14: ವಿಶ್ವಕಪ್ ಅಂಡರ್ 19 ಟೂರ್ನಮೆಂಟ್ ನಲ್ಲಿ ಟೀಂ ಇಂಡಿಯಾದ ಯುವ ತಂಡವು ಶುಭಾರಂಭ ಮಾಡಿದೆ. ಭಾನುವಾರದಂದು ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 100ರನ್ ಗಳ ಅಂತರದ ಜಯ ದಾಖಲಿಸಿದೆ.
329 ರನ್ ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದರೂ ನಿರಂತರವಾಗಿ ವಿಕೆಟ್ ಕಳೆದುಕೊಂಡು 42.5 ಓವರ್ ಗಳಲ್ಲಿ 228 ಸ್ಕೋರಿಗೆ ಆಲೌಟ್ ಆಯಿತು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡಿತು 328 ರನ್ ಸ್ಕೋರ್ ಮಾಡಿತು.
ಭಾರತ ಇನ್ನಿಂಗ್ಸ್ : ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ಮನ್ಜೋತ್ ಕಾಲ್ರ (86) ಹಾಗೂ ನಾಯಕ ಪೃಥ್ವಿ ಶಾ 94ರನ್ ಗಳಿಸಿ, ಮೊದಲ ವಿಕೆಟ್ ಗೆ 180ರನ್ ಗಳ ಬೃಹತ್ ಜೊತೆಯಾಟ ಸಾಧಿಸಿದರು.
ನಂತರ ಬಂದ ಶುಭಂ ಗಿಲ್ 63ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು. ಕೊನೆ ಹಂತದಲ್ಲಿ ಕೇವಲ 8 ಎಸೆತಗಳಲ್ಲಿ ಅಭಿಶೇಕ್ ಶರ್ಮ ಅವರು 23ರನ್(2 ಸಿಕ್ಸರ್, 2 ಬೌಂಡರಿ) ಚೆಚ್ಚಿದರು.
ಜನವರಿ 13ರಿಂದ ಫೆಬ್ರವರಿ 03ರ ತನಕ ವಿಶ್ವಕಪ್ ಟೂರ್ನಮೆಂಟ್ ಪಂದ್ಯಗಳು ನಿಗದಿಯಾಗಿವೆ. ಕ್ರೈಸ್ಟ್ ಚರ್ಚ್, ಕ್ವೀನ್ಸ್ ಟೌನ್, ಟಾರಂಗ ಹಾಗೂ ವಾಂಗರಾಯಿ ನಗರಗಳ 7 ಮೈದಾನಗಳಲ್ಲಿ 16 ತಂಡಗಳು ಸೆಣಸಲಿವೆ. ಜನವರಿ 28ರಂದು ಕ್ರೈಸ್ಟ್ ಚರ್ಚ್ ನ ಬರ್ಟ್ ಸುಕ್ಲಿಫ್ ಓವಲ್ ನಲ್ಲಿ ಅಂತಿಮ ಹಣಾಹಣಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications