ಭಾರತಕ್ಕೆ ಬರಲು ಬಾಂಗ್ಲಾದೇಶ ಹಿಂದೇಟು: ಐಸಿಸಿಯಿಂದ ಅಂತಿಮ ಎಚ್ಚರಿಕೆ
ಭಾರತದಿಂದ ತನ್ನ ಪಂದ್ಯಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡುವ ಬಾಂಗ್ಲಾದೇಶ ಬೇಡಿಕೆಗೆ ಈಗ ಅಂತಿಮ ಹಂತಕ್ಕೆ ಬಂದು ನಿಂತತ್ತೆ ಕಾಣುತ್ತಿದೆ. ಭಾರತಕ್ಕೆ ಪಂದ್ಯಗಳನ್ನು ಆಡಲು ಪ್ರಯಾಣ ಬೆಳೆಸುವುದೇ ಎಂಬುದನ್ನು ಜನವರಿ 21 ರೊಳಗೆ ಸ್ಪಷ್ಟಪಡಿಸುವಂತೆ ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು (ಬಿಸಿಬಿ) ಕೇಳಿದೆ.
ವರದಿಗಳ ಪ್ರಕಾರ ಶನಿವಾರ (ಜ.17) ರಂದು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಸಿಸಿಗೆ ಗಡುವು ನೀಡಿದೆ. ಐಸಿಸಿ ಹಾಗೂ ಬಿಸಿಬಿ ನಡುವೆ ಒಂದು ವಾರದಲ್ಲಿ ನಡೆದ ಇದು ಎರಡನೇ ಸಭೆ ಆಗಿತ್ತು. ಭದ್ರತಾ ಕಾರಣಗಳನ್ನು ನೀಡಿ ಬಿಸಿಬಿ ಟಿ20 ವಿಶ್ವಕಪ್‌ನ ಪಂದ್ಯಗಳನ್ನು ಭಾರತದಲ್ಲಿ ಆಡಲು ನಿರಾಕರಿಸಿತ್ತು. ಭಾರತದಲ್ಲಿ ಆಡಿದರೆ ತಂಡದ ಸುರಕ್ಷತೆಯ ಬಗ್ಗೆ ತನಗೆ ಕಳವಳವಿದೆ ಎಂದು ಬಿಸಿಬಿ ಹೇಳಿದೆ.ಅಲ್ಲದೆ ಭಾರತದ ಜೊತೆಗೆ ಜಂಟಿಯಾಗಿ ಟಿ20 ವಿಶ್ವಕಪ್ ಆತಿಥ್ಯವನ್ನು ವಹಿಸಲಿರುವ ಶ್ರೀಲಂಕಾದಲ್ಲಿ ಪಂದ್ಯ ನಡೆಸಬೇಕೆಂದು ಬಿಸಿಬಿ ಕೇಳಿಕೊಂಡಿತ್ತು.

ಐಸಿಸಿ ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ್ದು, ಈ ವೇಳಾಪಟ್ಟಿಗೆ ಬದ್ಧವಾಗಿದೆ. ಇನ್ನು ವೇಳಾಪಟ್ಟಿಯಲ್ಲಿ ಬದಲಾಯಿಸಲಾಗುವುದಿಲ್ಲ. ಬಾಂಗ್ಲಾ ಗ್ರೂಪ್ ಸಿನಲ್ಲಿ ಆಡಬೇಕು ಎಂದು ಐಸಿಸಿ ಸ್ಪಷ್ಟವಾಗಿ ಹೇಳಿದೆ.
ಗುಂಪು ಬದಲಿಸುವಂತೆ ಬೇಡಿಕೆ
ಬಿಸಿಬಿ ತನ್ನ ಗುಂಪನ್ನು ಬದಲಿಸುವಂತೆ ಐಸಿಸಿಗೆ ಬೇಡಿಕೆಯನ್ನು ಇಟ್ಟಿತ್ತು. ಅಲ್ಲದೆ ಸಿ ಗುಂಪಿನ ಬದಲಿಗೆ ಬಿ ಗುಂಪಿನಲ್ಲಿ ತಂಡಕ್ಕೆ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿತ್ತು. ಈ ಬೇಡೆಕೆಯನ್ನು ಐಸಿಸಿ ತಿರಸ್ಕರಿಸಿದೆ. ಶನಿವಾರ ನಡೆದ ಐಸಿಸಿ ಹಾಗೂ ಬಿಸಿಬಿ ಸಭೆಯಲ್ಲಿ ಗುಂಪು ಬದಲಾವಣೆಗೆ ಮನವಿಯನ್ನು ಮಾಡಿಕೊಂಡಿತ್ತು. ಆದರೆ ಐಸಿಸಿ, ಬಿಸಿಬಿ ಮನವಿಯನ್ನು ತಿರಸ್ಕರಿಸಿದೆ. ಬಾಂಗ್ಲಾದೇಶ ತಂಡಕ್ಕೆ ಭಾರತದಲ್ಲಿ ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಐಸಿಸಿ ಬಿಸಿಬಿಗೆ ಭರವಸೆ ನೀಡಿದೆ.
ಬಾಂಗ್ಲಾದೇಶ ತನ್ನ ಗುಂಪು ಹಂತದ ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್, ಇಟಲಿ ಮತ್ತು ಇಂಗ್ಲೆಂಡ್ ವಿರುದ್ಧ ಮತ್ತು ನೇಪಾಳ ವಿರುದ್ಧ ಮುಂಬೈನಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ.
ಐಪಿಎಲ್‌ನಿಂದ ಮುಸ್ತಾಫಿಜುರ್ ಔಟ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 9.2 ಕೋಟಿ ರೂ. ನೀಡಿ ಬಾಂಗ್ಲಾದೇಶ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಇದಾದ ಬಳಿಕ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರ ನಡೆದಿತ್ತು. ಇದನ್ನು ವಿರೋಧಿಸಿ ಭಾರತದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೆ ಐಪಿಎಲ್‌ನಿಂದ ಬಾಂಗ್ಲಾ ಆಟಗಾರರನ್ನು ನಿಷೇಧಿಸುವಂತೆ ಕೂಗು ಕೇಳಿ ಬಂದಿತ್ತು.
ಬಿಸಿಸಿಐ ಮುಸ್ತಾಫಿಜುರ್ ರಹಮಾನ್ ಅವರನ್ನು ಕೆಕೆಆರ್ ತಂಡದಿಂದ ಕೈ ಬಿಡುವಂತೆ ಸೂಚಿಸಿದೆ. ಅಲ್ಲದೆ ಅವರ ಬದಲಿಗೆ ಬೇರೆ ಆಟಗಾರರನ್ನು ಕೊಳ್ಳಲು ಸಹ ಅವಕಾಶವನ್ನು ಸಹ ನೀಡಿದೆ. ಈ ಬೆಳವಣಿಗಳಿಗೆ ಬಳಿಕ ಬಾಂಗ್ಲಾದೇಶ ಸಹ ಐಪಿಎಲ್ ನೇರ ಪ್ರಸಾರಕ್ಕೆ ತಡೆ ಒಡ್ಡಿತ್ತು. ಅಲ್ಲದೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣ ಬೆಳೆಸುವುದಿಲ್ಲ ಎಂದು ಬಾಂಗ್ಲಾ ಸೂಚಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications