For Quick Alerts
ALLOW NOTIFICATIONS  
For Daily Alerts
 

ICC Under-19 World Cup: ಮುಶೀರ್‌ ಖಾನ್‌ ಸುನಾಮಿ ಇನಿಂಗ್ಸ್‌: ದಕ್ಷಿಣ ಆಫ್ರಿಕಾದಲ್ಲಿ ಫ್ಯೂಚರ್‌ ಸ್ಟಾರ್‌ ಉದಯ

ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸೂಪರ್ ಸಿಕ್ಸ್‌ನ ಮೊದಲ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 8 ವಿಕೆಟ್‌ಗೆ 295 ರನ್ ಕಲೆ ಹಾಕಿತು. ಭಾರತ ಬೃಹತ್ ಮೊತ್ತ ಕಲೆ ಹಾಕಿದರ ಹಿಂದೆ ಯುವ ಆಟಗಾರನ ಅಮೋಘ ಆಟ ಕಾರಣ. ಸ್ಟಾರ್ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಮುಶೀರ್ ಖಾನ್ ಈ ಇನ್ನಿಂಗ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಿವೀಸ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಯುವ ಆಟಗಾರ ಶತಕ ಸಿಡಿಸಿದರು. ಮುಶೀರ್ 109 ಎಸೆತಗಳಲ್ಲಿ ಶತಕ ಪೂರೈಸಿದರು. ಖಾನ್ 126 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 131 ರನ್ ಗಳಿಸಿದರು. ಈ ಶತಕದೊಂದಿಗೆ ಅವರು ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನೂ ನಮೂದಿಸಿದರು. ಅವರ ಸಹೋದರ ಸರ್ಫರಾಜ್ ಖಾನ್ ಕೂಡ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.

 ICC Under-19 World Cup: Musheer Khan Tsunami Innings: Future Star Rises in South Africa

ಭಾರತ ತಂಡದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಪರ 2 ಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಈ ಪಟ್ಟಿಯಲ್ಲಿ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಹೆಸರೂ ಸೇರಿದೆ. ಮುಶೀರ್ ಖಾನ್ ಕೂಡ ಈಗ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ 2 ಶತಕಗಳನ್ನು ಬಾರಿಸಿದ್ದಾರೆ. ಐಸಿಸಿ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಕೇವಲ 2 ಭಾರತದ ಬ್ಯಾಟ್ಸ್‌ಮನ್‌ಗಳು ಈ ಸಾಧನೆ ಮಾಡಿದ್ದಾರೆ. ಅಂಡರ್-19 ವಿಶ್ವಕಪ್‌ನಲ್ಲಿ ಗಬ್ಬರ್ 3 ಶತಕಗಳನ್ನು ಹೊಂದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಶತಕದಿಂದಾಗಿ ಮುಶೀರ್ ಖಾನ್ 2024 ರ ಅಂಡರ್ 19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು 4 ಇನ್ನಿಂಗ್ಸ್‌ಗಳಲ್ಲಿ 81 ಸರಾಸರಿಯಲ್ಲಿ 325 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ತಮ್ಮ ಬ್ಯಾಟ್‌ನಿಂದ 2 ಶತಕ ಮತ್ತು 1 ಅರ್ಧ ಶತಕವನ್ನು ಸಿಡಿಸಿದ್ದಾರೆ. ಮುಶೀರ್ ಅವರು ಈ ಟೂರ್ನಿಯಲ್ಲಿ ಇದುವರೆಗೆ ಅಬ್ಬರಿಸಿದ ರೀತಿ ಕಂಡು ಅಭಿಮಾನಿಗಳು ಫುಲ್ ಖುಷ್. ಖಾನ್ ಅವರ ಬ್ಯಾಟ್ ಹೀಗೆಯೇ ಮುಂದುವರಿದರೆ, ಶೀಘ್ರದಲ್ಲೇ ಅವರಿಗೆ ಹಿರಿಯ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಬಹುದು.

 ICC Under-19 World Cup: Musheer Khan Tsunami Innings: Future Star Rises in South Africa

ಧೋನಿ ನೆನಪಿಸಿದ ಖಾನ್

ಭಾರತ ತಂಡದ ಇನ್ನಿಂಗ್ಸ್‌ನ 46 ನೇ ಓವರ್‌ ಅನ್ನು ನ್ಯೂಜಿಲೆಂಡ್‌ನ ವೇಗದ ಬೌಲರ್ ಮೇಸನ್ ಕ್ಲಾರ್ಕ್ ಬೌಲ್ ಮಾಡುತ್ತಿದ್ದರು. ಕ್ಲಾರ್ಕ್ ಓವರ್‌ನ ಮೊದಲ ಎಸೆತದಲ್ಲಿ ಮುಶೀರ್ ಖಾನ್ ಸ್ಟ್ರೈಕ್‌ನಲ್ಲಿದ್ದರು. ಮುಶೀರ್ ಮೊದಲ ಎಸೆತದಲ್ಲಿ ಎಂಎಸ್ ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಆಡಿ ಚೆಂಡನ್ನು ಬೌಂಡರಿಯಿಂದ ಹೊರಗೆ ಕಳುಹಿಸಿ 6 ರನ್ ಗಳಿಸಿದರು. ಅವರ ಈ ಶಾಟ್ ಎಂಎಸ್ ಧೋನಿ ಅಭಿಮಾನಿಗಳನ್ನು ನೆನಪಿಸಿತು.

ನ್ಯೂಜಿಲೆಂಡ್ ವಿರುದ್ಧದ ಅವರ ಪ್ರಬಲ ಇನ್ನಿಂಗ್ಸ್‌ನಿಂದಾಗಿ, ಮುಶೀರ್ ಖಾನ್ ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 4 ಇನ್ನಿಂಗ್ಸ್‌ಗಳಲ್ಲಿ 100 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 314 ರನ್ ಗಳಿಸಿದ್ದಾರೆ. ಇಷ್ಟೇ ಅಲ್ಲ, ಶಿಖರ್ ಧವನ್ ನಂತರ ಮುಶೀರ್ ಖಾನ್ ಐಸಿಸಿ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಎರಡು ಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

Story first published: Tuesday, January 30, 2024, 20:12 [IST]
Other articles published on Jan 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+