ಜುಲೈ ಮಧ್ಯಂತರದವರೆಗೂ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರ ಅಸಂಭವ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಜುಕೈ ಮಧ್ಯಂತರದವರೆಗೂ ಟಿ20 ವಿಶ್ವಕಪ್ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ತೀರ್ಮಾನಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿರುವ ವಿಶ್ವಕಪ್‌ನ ನಿರ್ಧಾರವನ್ನು ಮುಂದಿನ ವಾರ್ಷಿಕ ಸಭೆಗೆ ಮುನ್ನ ತೆಗೆದುಕೊಳ್ಳದಿರಲು ಐಸಿಸಿ ನಿರ್ಧರಿಸಿದೆ.
ಐಸಿಸಿ ಟಿ20 ವಿಶ್ವಕಪ್ ಬಗ್ಗೆ ತೆಗೆದುಕೊಳ್ಳುವ ನಿರ್ಧಾರವೇನು ಎಂಬುದನ್ನು ಬಿಸಿಸಿಐ ಕಾದು ಕುಳಿತಿದೆ. ಹಾಗಾಗಿ ಅದಕ್ಕೆ ಮತ್ತಷ್ಟು ನಿರಾಸೆಯಾಗಿರುವುದು ಸುಳ್ಳಲ್ಲ. ಗುರುವಾರ ಐಸಿಸಿ ಮಂಡಳಿಯ ಸದಸ್ಯರು ಈ ತಿಂಗಳಲ್ಲಿ ಎರಡನೇ ಬಾರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸೇರಿದ್ದರು. ಈ ಸಭೆಯಲ್ಲಿ ಐಸಿಸಿ ಮುಖ್ಯಸ್ಥ ಸ್ಥಾನದ ಚುನಾವಣೆಯ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಶಶಾಂಕ್ ಮನೋಹರ್ ಸ್ಥಾನಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಕೂಲಿನ್ ಗ್ರೇವ್ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಮತ್ತೊಂದೆಡೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ ಅದು ಇನ್ನೂ ಖಚಿತವಾಗಿಲ್ಲ.
ಹದಿನೈದು ದಿನಗಳ ಹಿಂದೆ ತನ್ನ ಹಿಂದಿನ ಮಂಡಳಿಯ ಸಭೆಯ ನಂತರ ಐಸಿಸಿ ಟಿ 20 ವಿಶ್ವಕಪ್ 2020ಕ್ಕೆ ನಿಗದಿಪಡಿಸಿದ ಸಮಯದಲ್ಲಿ ಕೆಲ ತಕ್ಷಣದ ಯೋಜನೆಗಳನ್ನು ಅನ್ವೇಷಿಸುವುದನ್ನು ಮುಂದುವರಿಸುವುದಾಗಿ ಹೇಳಿತ್ತು. ಆದರೆ ಈ ಬಗ್ಗೆ ಇನ್ನೂ ಖಚಿತ ನಿಲುವಿಗೆ ಐಸಿಸಿಗೆ ಬರಲು ಸಾಧ್ಯವಾಗಿಲ್ಲ.
ಈ ಮಧ್ಯೆ ಈ ಬಾರಿಯ ಟಿ20 ವಿಶ್ವಕಪ್ ಆಯೋಜನೆ ಮಾಡುವ ಆಸ್ಟ್ರೇಲಿಯಾ ಕೊರೊನಾ ವೈರಸ್ ಮಧ್ಯೆ ಈ ವರ್ಷ ವಿಶ್ವಕಪ್ ನಡೆಸುವುದು ಅಸಂಭವ ಮತ್ತು ಅವಾಸ್ತವ ಎಂದು ಹೇಳಿಕೊಂಡಿತ್ತು. ಹೀಗಾಗಿ ಬಿಸಿಸಿಐ ತನ್ನ ಬಹುಕೋಟಿ ಟೂರ್ನಿಯಾದ ಐಪಿಎಲ್‌ಅನ್ನು ಈ ವರ್ಷ ಉಳಿಸಿಕೊಳ್ಳಲು ಪ್ರಯತ್ನಗಳನ್ನು ಪಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications