
ವಿಶ್ವ ಕ್ರಿಕೆಟ್‌ನಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿದೆ. ಇದೀಗ ಮತ್ತೊಂದು ಮಹತ್ವದ ಪ್ರಸ್ತಾಪ ಐಸಿಸಿ ಮುಂದಿದೆ. ವಿಶ್ವಕಪ್‌ನಲ್ಲಿ 16 ತಂಡಗಳು ಭಾಗಿಯಾಗುತ್ತಿದ್ದು ಇದನ್ನು ಹೆಚ್ಚಿಸಬೇಕೆಂಬ ಪ್ರಸ್ತಾಪ ಐಸಿಸಿ ಮುಂದಿದೆ. ಇದು 2023-31 ಅವಧಿಯಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ಈ ಚಿಂತನೆಯನ್ನು ನಡೆಸಲಾಗುತ್ತಿದೆ.
ಕ್ರಿಕೆಟನ್ನು ಐಸಿಸಿ ಫೂಟ್ಬಾಲ್ ಮತ್ತು ಬಾಸ್ಕೆಟ್‌ಬಾಲ್ ಮಾದರಿಯಲ್ಲಿ ವಿಶ್ವಕ್ರೀಡಾ ಲೋಕದಲ್ಲಿ ಅಭಿಮಾನಿಗಳನ್ನು ಭಾರೀ ಸಂಖ್ಯೆಯಲ್ಲಿ ಸೆಳೆಯುವಂತೆ ಮಾಡಬೇಕೆಂಬ ಪ್ರಯತ್ನ ಮಾಡುತ್ತಿದೆ. ಆ ಪ್ರಯತ್ನದ ಭಾಗವಾಗಿ ವಿಶ್ವಕಪ್‌ನಂತಾ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಐಸಿಸಿ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೆ ಒಂದು ಹಂತದ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.
ಈ ಬದಲಾವಣೆ ನಡೆದಿದ್ದೇ ಆದಲ್ಲಿ ಯುಎಸ್‌ಎ, ಕೆನಡಾ, ಜರ್ಮನಿ, ಜಪಾನ್ ಮತ್ತು ನೈಜೀರಿಯಾ ತಂಡಗಳು ಐಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆಯಲಿವೆ. ಇದನ್ನು ಕಾರ್ಯರೂಪ ಬಂದಲ್ಲಿ ಐಸಿಸಿ ಮುಂದೆ ಇದನ್ನು ಕಾರ್ಯರೂಪಕ್ಕೆ ತರಲು ಎರಡು ಮಾದರಿಗಳು ಐಸಿಸಿ ಮುಂದಿವೆ. ಮೊದಲನೆಯದು ಕೆಳ ಕ್ರಮಾಂಕದಲ್ಲಿರುವ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಿದ ಬಳಿಕ ನಿರ್ಣಾಯಕ ಹಂತವನ್ನು ತಲುಪಲಿದೆ. ಇನ್ನೊಂದು ಮಾದರಿ ಎಲ್ಲಾ ತಂಡಗಳ ಜೊತೆಯಲ್ಲಿ ನಾಲ್ಕು ಗುಂಪುಗಳಾಗಿ ವಿಂಗಡಿಸಿ ನಾಕೌಟ್ ಹಂತಕ್ಕೆ ತಲುಪಲಿದೆ. ಈ ಮಾದರಿಯಲ್ಲಿ ಯಾವುದಾದರೂ ಒಂದನ್ನು ಐಸಿಸಿ ಆಯ್ಕೆ ಮಾಡಲಿದೆ.
ಇತ್ತೀಚೆಗಷ್ಟೇ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್‌ಬಗ್ಗೆ ಐಸಿಸಿ ಮುಂದೆ ಪ್ರಸ್ತಾಪ ಬಂದಿದ್ದು ಈ ಬಗ್ಗೆ ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಜೊತೆಗೆ ಡೇ-ನೈಟ್ ಟೆಸ್ಟ್ ಕ್ರಿಕೆಟ್ ಬಗ್ಗೆಯೂ ಹೆಚ್ಚಿನ ಆಸಕ್ತಿ ಮೂಡುತ್ತಿದೆ. ಈ ಮಧ್ಯೆ ಟಿ20 ವಿಶ್ವಕಪ್‌ನಲ್ಲಿ 16 ತಂಡಗಳ ಬದಲಾಗಿ 20 ತಂಡಗಳಿಗೆ ಹೆಚ್ಚಿಸುವ ಬಗ್ಗೆ ಐಸಿಸಿ ಪ್ರಸ್ತಾಪವನ್ನಿಟ್ಟಿದ್ದು ಮುಂದೆ ಅಂತಿಮ ತೀರ್ಮಾನವನ್ನು ತೆಗದುಕೊಳ್ಳಲಿದೆ