ICC WC Super League: ಪಾಕ್‌ಗಿಂತ ಕೆಳ ಸ್ಥಾನದಲ್ಲಿದೆ ಭಾರತ!

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ವಿಭಾಗದ ಕ್ರಿಕೆಟ್ ವರ್ಲ್ಡ್‌ಕಪ್ ಲೀಗ್ ರ್‍ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ 7ನೇ ಸ್ಥಾನಕ್ಕೆ ಜಿಗಿದಿದೆ. ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ರೋಚಕ 7 ರನ್‌ಗಳಿಂದ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಕ್ರಿಕೆಟ್ ವರ್ಲ್ಡ್‌ಕಪ್ ಲೀಗ್ ರ್‍ಯಾಂಕಿಂಗ್‌ನಲ್ಲಿ ಮೇಲಕ್ಕೇರಿದೆ. ಅದರೆ ಭಾರತದ ಬದ್ಧ ಎದುರಾಳಿ ಪಾಕಿಸ್ತಾನಕ್ಕಿಂತಲೂ ಭಾರತ ಕೆಳಸ್ಥಾನದಲ್ಲಿದೆ.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1ರ ಗೆಲುವು ದಾಖಲಿಸಿತ್ತು. ಸರಣಿ ಸೋತರೂ ಕೂಡ ಇಂಗ್ಲೆಂಡ್ ಕ್ರಿಕೆಟ್ ತಂಡ ಕ್ರಿಕೆಟ್ ವರ್ಲ್ಡ್‌ಕಪ್ ಲೀಗ್ ರ್‍ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಆಂಗ್ಲರ ಖಾತೆಯಲ್ಲಿ ಒಟ್ಟು 40 ಅಂಕಗಳಿವೆ.

ಭಾರತಕ್ಕೆ 29 ಅಂಕಗಳು
ಈ ಲೀಗ್‌ಗೆ ಸಂಬಂಧಿಸಿ ಇಂಗ್ಲೆಂಡ್ ಒಟ್ಟು 9 ಪಂದ್ಯಗಳನ್ನು ಆಡಿತ್ತು. ಇದರಲ್ಲಿ 4 ಪಂದ್ಯಗಳಲ್ಲಿ ಗೆದ್ದು 5ರಲ್ಲಿ ಸೋತಿತ್ತು. ಇನ್ನು ಭಾರತ ಒಟ್ಟು 6 ಪಂದ್ಯಗಳನ್ನು ಆಡಿತ್ತು. ಇದರಲ್ಲಿ 3 ಪಂದ್ಯಗಳನ್ನು ಗೆದ್ದು, 3 ಪಂದ್ಯಗಳನ್ನು ಸೋತಿತ್ತು. ಭಾರತ ಈಗ 29 ಅಂಕಗಳನ್ನು ಕಲೆ ಹಾಕಿದೆ.

ಲೀಗ್‌ನಲ್ಲಿ 12 ತಂಡಗಳು
2020ರ ಜುಲೈ 30ರಂದು ಇಂಗ್ಲೆಂಡ್-ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ವೇಳೆ ಈ ಸೂಪರ್ ಲೀಗ್ ಶುರುವಾಗಿತ್ತು. ಈ ಲೀಗ್‌ನಲ್ಲಿ ಒಟ್ಟು 12ರ ಐಸಿಸಿ ಫುಲ್ ಮೆಂಬರ್ ತಂಡಗಳಿವೆ. ಇದರಲ್ಲಿ ನೆದರ್‌ಲ್ಯಾಂಡ್ಸ್, ಜಿಂಬಾಬ್ವೆ ಕೂಡ ಸೇರಿದೆ. ಸದ್ಯದ ರ್‍ಯಾಂಕ್ ಪಟ್ಟಿಯ 2ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ, 3ನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡಗಳಿವೆ.

ಐಸಿಸಿ ವರ್ಲ್ಡ್ ಸೂಪರ್ ಲೀಗ್ ಪಾಯಿಂಟ್ ಟೇಬಲ್
1. ಇಂಗ್ಲೆಂಡ್ - 40 (ಪಾಯಿಂಟ್ಸ್), 2. ಆಸ್ಟ್ರೇಲಿಯಾ - 40, 3. ನ್ಯೂಜಿಲೆಂಡ್ - 30, 4. ಅಫ್ಘಾನಿಸ್ತಾನ - 30, 5. ಬಾಂಗ್ಲಾದೇಶ - 30, 6. ವೆಸ್ಟ್ ಇಂಡೀಸ್ - 30, 7. ಭಾರತ - 29, 8. ಪಾಕಿಸ್ತಾನ - 20, 9. ಜಿಂಬಾಬ್ವೆ - 10, 10. ಐರ್ಲೆಂಡ್ - 10, 11. ಶ್ರೀಲಂಕಾ - (- 2).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications