ಮಹಿಳಾ ವಿಶ್ವಕಪ್ 2022ರ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ

ಐಸಿಸಿ ಮಹಿಳಾ ವಿಶ್ವಕಪ್ 2022ರ ವೇಳಾಪಟ್ಟಿಯನ್ನು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿದೆ. ಮಾರ್ಚ್ 4ರಿಂದ ಆರಂಭವಾಗುವ ಈ ಮಹತ್ವದ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಮಾರ್ಚ್ 6 ರಿಂದ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಭಾರತ ಮಹಿಳಾ ತಂಡ ತನ್ನ ಮೊದಲ ಹಣಾಹಣಿಯಲ್ಲಿ ಮೂರ್ನಾಲ್ಕು ಕೆಲ ದಿನಗಳ ಹಿಂದೆ ನಡೆಯುವ ಕ್ವಾಲಿಫೈಯರ್ ಪಂದ್ಯದಲ್ಲಿ ತೇರ್ಗಡೆಯಾಗುವ ತಂಡವನ್ನು ಎದುರಿಸಲಿದೆ. ನ್ಯೂಜಿಲೆಂಡ್ ಈ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಈ ವಿಶ್ವಕಪ್‌ನ ಮೊದಲ ಪಂದ್ಯ ಮಾರ್ಚ್ 4ರಂದು ನ್ಯೂಜಿಲೆಂಡ್ ಹಾಗೂ ಕ್ವಾಲಿಫೈಯರ್ ಆಗಲಿರುವ ತಂಡದ ಜೊತೆಗೆ ನಡೆಯಲಿದೆ.
ವೆಲ್ಲಿಂಗ್ಟನ್‌ನ ಬ್ಯಾಸಿನ್ ರಿಸರ್ವ್ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲೆ ಓವಲ್‌ನಲ್ಲಿ ಸೆಮಿ ಫೈನಲ್ ಪಂದ್ಯಗಳು ನಡೆಯಲಿದೆ. ಫೈನಲ್ ಪಂದ್ಯ ಏಪ್ರಿಲ್ 3, 2022ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲೇ ಓವಲ್‌ನಲ್ಲೇ ನಡೆಯಲಿದೆ.
ಮಹಿಳಾ ಕ್ರಿಕೆಟ್‌ನ ಅತ್ಯಂತ ಪ್ರಮುಖ ಟೂರ್ನಿಯಾಗಿರುವ ವಿಶ್ವಕಪ್ 31 ದಿನಗಳಲ್ಲಿ 31 ಪಂದ್ಯಗಳು ನಡೆಯಲಿದೆ. ಮಾರ್ಚ್ 4ರಂದು ಆರಂಭವಾಗುವ ಈ ಟೂರ್ನಿ ಏಪ್ರಿಲ್ 3ರಂದು ಅಂತ್ಯಕಾಣಲಿದೆ. ಕಳೆದ ಮಾರ್ಚ್‌ನಲ್ಲಿ ಟಿ20 ವಿಶ್ವಕಪ್‌ನ ಬಳಿಕ ನಡೆಯುವ ಮೊದಲ ಮಹಿಳಾ ಪ್ರಮುಖ ಕ್ರಿಕೆಟ್ ಟೂರ್ನಿ ಇದಾಗಿರಲಿದೆ. ಈ ಮುನ್ನ ಈ ಟೂರ್ನಿ 2021ರ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ನಡೆಯಬೇಕಾಗಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡುವ ನೊರ್ಧಾರ ಕೈಗೊಳ್ಳಲಾಗಿದೆ.
ಭಾರತ ಗ್ರೂಫ್ ಹಂತದಲ್ಲಿ ಏಳು ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ ನಾಲ್ಕು ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧವಾಗಿದ್ದರೆ ಉಳಿದ ಮೂರು ತಂಡಗಳು ಕ್ವಾಲಿಫೈಯರ್‌ನಲ್ಲಿ ಉತ್ತೀರ್ಣಗೊಂಡು ಸವಾಲೊಡ್ಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications