ಮಹಿಳಾ ಟಿ20 ವಿಶ್ವಕಪ್ ಫೈನಲ್: ಭಾರತೀಯರಿಂದ ದಾಖಲೆಯ ವೀಕ್ಷಣೆ

ನವದೆಹಲಿ, ಏಪ್ರಿಲ್ 2: ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2020ರ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದಲ್ಲಿ ಸುಮಾರು 9.02 ಮಿಲಿಯನ್ ಅಭಿಮಾನಿಗಳು ಟಿವಿ ಮೂಲಕ ವೀಕ್ಷಿಸಿದ್ದರು. ಫೈನಲ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮತ್ತು ಭಾರತದ ವನಿತೆಯರು ಕಾದಾಡಿದ್ದರು. ದಾಖಲೆಯ ಸಂಖ್ಯೆಯಲ್ಲಿ ಭಾರತೀಯರು ಪಂದ್ಯ ವೀಕ್ಷಿಸಲು ಇದೇ ಕಾರಣ.
ಮಾರ್ಚ್ 8ರ ಭಾನುವಾರ ಮಹಿಳಾ ಟಿ20 ವಿಶ್ವಕಪ್ ಪಂದ್ಯ, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು. 86,174 ಮಂದಿ ಸ್ಟೇಡಿಯಂನಲ್ಲೇ ಪಂದ್ಯ ವೀಕ್ಷಿಸಿದ್ದರು. ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯ ಸೋತಿರದ ಭಾರತ ತಂಡ, ಫೈನಲ್‌ನಲ್ಲೇ ನೀರಸ ಪ್ರದರ್ಶನ ನೀಡಿ, ವಿಶ್ವಕಪ್ ಆಸೆಯನ್ನು ಕೈಚೆಲ್ಲಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರು 85 ರನ್ ಗೆಲುವನ್ನಾಚರಿಸಿದ್ದರು.
ಮಹಿಳಾ ಟಿ20 ವಿಶ್ವಕಪ್ ವೇಳೆಯ ಡಿಜಿಟಲ್ ದತ್ತಾಂಶವನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರ (ಏಪ್ರಿಲ್ 2) ಬಿಡುಗಡೆ ಮಾಡಿದೆ. ಪಂದ್ಯದ ವೇಳೆ ದಾಖಲೆ ಸಂಖ್ಯೆಯಲ್ಲಿ ಭಾರತೀಯ ಕ್ರಿಕೆಟ್ ಪ್ರಿಯರು ಪಂದ್ಯ ವೀಕ್ಷಿಸಿರುವುದನ್ನು ಬಹಿರಂಗಪಡಿಸಿದೆ.
ಟಿ20 ಫೈನಲ್ ಪಂದ್ಯದ ವೇಳೆ ಭಾರತೀಯ ಅಭಿಮಾನಿಗಳು ವೀಕ್ಷಿಸಿದ ಕಾಲಾವಧಿಯನ್ನು ಲೆಕ್ಕಾಚಾರ ಮಾಡಿದರೆ ಬರೊಬ್ಬರಿ 5.4 ಬಿಲಿಯನ್ ನಿಮಿಷಗಳೆಂದು ದಾಖಲೆ ಹೇಳುತ್ತದೆ. ಟೋಟಲ್ ವೀವಿಂಗ್ ಮಿನಿಟ್ಸ್ ಎಂದರೆ ಒಂದು ನಿರ್ದಿಷ್ಟ ಪಂದ್ಯವನ್ನು ಎಷ್ಟು ಮಂದಿ ಎಷ್ಟು ಗಂಟೆಗಳ ಕಾಲ ವೀಕ್ಷಿಸಿದ್ದಾರೆ ಎಂಬ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications