Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನವೆಂಬರ್ 11ಕ್ಕೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮರ

ಬೆಂಗಳೂರು, ಜೂನ್ 26: ಹಾಲಿ ವಿಶ್ವ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್​ಆತಿಥ್ಯದಲ್ಲಿ ನವೆಂಬರ್ 8 ರಿಂದ 24ರವರೆಗೆ ಮಹಿಳಾ ಟಿ20 ವಿಶ್ವ ಚಾಂಪಿಯನ್​ಷಿಪ್ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನವೆಂಬರ್ 11ಕ್ಕೆ ನಿಗದಿಯಾಗಿದೆ.

ಎರಡು ಬಾರಿಯ ಸೆಮಿಫೈನಲ್ ಹಂತ ತಲುಪಿರುವ ಸಾಧನೆ ಮಾಡಿರುವ ಭಾರತದ ಮಹಿಳೆಯರ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. 6ನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಎದುರಿಸಲಿದೆ.

ICC Womens World T20, India face NZ in opener on Nov 9 and Pak on Nov 11, t20 DRS to debut,

ನವೆಂಬರ್ 9 ರಂದು ಕಿವೀಸ್ ವಿರುದ್ಧ ಪಂದ್ಯ ನಿಗದಿಯಾಗಿದ್ದರೆ, ನವೆಂಬರ್11 ರಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಆ ಬಳಿಕ ಅರ್ಹತಾ ಹಂತದಿಂದ ಬಂದ ತಂಡ ಹಾಗೂ ಆಸ್ಟ್ರೇಲಿಯಾ ತಂಡವನ್ನು ಕ್ರಮವಾಗಿ ನವೆಂಬರ್ 15 ಹಾಗೂ 17 ರಂದು ಎದುರಿಸಲಿದೆ.

ಮಹಿಳಾ ವಿಶ್ವ ಟಿ20 ಸಂಪೂರ್ಣ ವೇಳಾಪಟ್ಟಿ

10 ತಂಡಗಳ ಟೂರ್ನಿಯಲ್ಲಿ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ 2009ರ ಚೊಚ್ಚಲ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ಕೂಡ ಆಡಲಿದ್ದು, ಕೆರಿಬಿಯನ್ ಮೂರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ನೆದರ್ಲೆಂಡ್​ನಲ್ಲಿ ಜುಲೈ 7ರಿಂದ 14ರವರೆಗೆ ಟಿ20 ವಿಶ್ವಕಪ್ ಅರ್ಹತಾ ಟೂರ್ನಿ ನಡೆಯಲಿದ್ದು, ಫೈನಲ್​ಗೇರಿದ ತಂಡಗಳು ವಿಶ್ವಕಪ್​ಗೆ ಅರ್ಹತೆ ಸಂಪಾದಿಸಲಿವೆ. ಬಾಂಗ್ಲಾದೇಶ, ಐರ್ಲೆಂಡ್, ನೆದರ್ಲೆಂಡ್, ಪಪುವಾ ನ್ಯೂಗಿನಿ, ಸ್ಕಾಟ್ಲೆಂಡ್, ಥಾಯ್ಲೆಂಡ್, ಉಗಾಂಡ ಹಾಗೂ ಯುಎಇ ತಂಡಗಳು ಇದರಲ್ಲಿ ಆಡಲಿವೆ.

ಎಲ್ಲ 23 ಪಂದ್ಯಗಳೂ ನೇರಪ್ರಸಾರವಾಗಲಿದ್ದು, ಇದೇ ಮೊದಲ ಬಾರಿಗೆ ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಡಿಆರ್​ಎಸ್​ಅನ್ನು ಅಳವಡಿಸಲಾಗುತ್ತಿದೆ. ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಅರ್ಹತಾ ಹಂತದ ಒಂದು ತಂಡ ಎ ಗುಂಪಿನಲ್ಲಿದ್ದರೆ, ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಅರ್ಹತಾ ಹಂತದ 2ನೇ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ.

Story first published: Tuesday, June 26, 2018, 16:15 [IST]
Other articles published on Jun 26, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+