Women's T20 World 2024: ಪಾಕಿಸ್ತಾನ ವಿರುದ್ಧ ಗೆದ್ದರೂ ಭಾರತಕ್ಕೆ ಕಡಿಮೆ ಆಗದ ಸೆಮಿಫೈನಲ್ ಟೆಕ್ಷನ್
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರ ತಂಡ ಉತ್ತಮ ಆರಂಭ ಪಡೆಯಲಿಲ್ಲ. ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 52 ರನ್‌ಗಳಿಂದ ಸೋತ ನಂತರ, ಭಾರತ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಇನ್ನೂ ಜೀವಂತವಾಗಿ ಉಳಿದಿದೆ.
ಪಾಕಿಸ್ತಾನ ವಿರುದ್ಧ ಗೆಲುವು ಭಾರತಕ್ಕೆ ಎ ಗುಂಪಿನಲ್ಲಿ 2 ಅಂಕಗಳನ್ನು ತಂದುಕೊಟ್ಟಿದೆ. ಆದರೆ ಸೆಮಿಫೈನಲ್ ತಲುಪುವುದು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡಕ್ಕೆ ಸುಲಭವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮೊದಲ ಸೋಲಿನ ಬಳಿಕ ಹರ್ಮನ್‌ಪ್ರೀತ್ ಪಡೆಯ ಲೆಕ್ಕಚಾರವೆಲ್ಲ ಉಲ್ಟಾ ಆಗಿದೆ.

ಭಾರತ ತಂಡಕ್ಕೆ ಸೆಮಿಫೈನಲ್ ತಲುಪುವ ಹಾದಿ ಕಠಿಣವಾಗಿದೆ ಎಂಬ ಪ್ರಶ್ನೆ ಇದೀಗ ಎದ್ದಿದ್ದು, ಪಾಕಿಸ್ತಾನ ವಿರುದ್ಧದ ಗೆಲುವಿನ ನಂತರ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದು ಹೇಗೆ? ಎಂಬುದು ಚರ್ಚೆ ನಡೆಯುತ್ತಿದೆ. ಎ ಗುಂಪಿನಲ್ಲಿರುವ ಭಾರತ ಎರಡು ಪಂದ್ಯಗಳಿಂದ ತಲಾ ಒಂದೊಂದು ಸೋಲು ಗೆಲುವು ಕಂಡಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತದ ರನ್ ರೇಟ್ -1.217 ಆಗಿದೆ.
ಎ ಗುಂಪಿನ ಗೆದ್ದ ತಂಡಗಳಲ್ಲಿ ಪೈಕಿ ಭಾರತ ಕಳಪೆ ರನ್ ರೇಟ್ ಹೊಂದಿದೆ. ಆದರೆ ನ್ಯೂಜಿಲೆಂಡ್ (+2.900), ಆಸ್ಟ್ರೇಲಿಯಾ (+1.908) ಮತ್ತು ಪಾಕಿಸ್ತಾನ (+0.555) ಭಾರತಕ್ಕಿಂತ ಉತ್ತಮವಾಗಿವೆ. ಭಾರತಕ್ಕೆ ಈಗ ಗುಂಪು ಹಂತದಲ್ಲಿ ಎರಡು ಪಂದ್ಯಗಳು ಬಾಕಿಯಿದ್ದು, ಸೆಮಿಫೈನಲ್ ತಲುಪಲು ಭಾರತ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಹರ್ಮನ್‌ಪ್ರೀತ್ ಕೌರ್ ಪಡೆ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ, ಅಕ್ಟೋಬರ್ 9 ರಂದು ಎದುರಿಸಲಿದೆ. ಇದಾದ ಬಳಿಕ ಭಾರತ ತನ್ನ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 13 ರಂದು ಆಡಲಿದೆ. ನಿವ್ವಳ ರನ್ ದರವನ್ನು ಸುಧಾರಿಸಲು ಭಾರತ ತಂಡವು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಅಂತರದಿಂದ ಗೆಲುವು ಸಾಧಿಸಿಬೇಕಾಗಿದೆ.
ಭಾರತದ ಸೆಮಿಫೈನಲ್ ಲೆಕ್ಕಚಾರ
ಮುಂದಿನ ಎರಡು ಪಂದ್ಯದಲ್ಲಿ ಭಾರತ ತನ್ನ ನೆಟ್ ರನ್ ರೇಟ್ ಅನ್ನು ಸುಧಾರಿಸದಿದ್ದರೆ, ಆಸ್ಟ್ರೇಲಿಯಾ ಸೋಲು ಮತ್ತು ನ್ಯೂಜಿಲೆಂಡ್ ತಂಡದ ಗೆಲುವನ್ನು ಅವಲಂಬಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ನೇರವಾಗಿ ಸೆಮಿಫೈನಲ್ ತಲುಪು ಅವಕಾಶವನ್ನು ಹೊಂದಿದೆ.
ಎ ಮತ್ತು ಬಿ ಎರಡೂ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಮಾತ್ರ ಸೆಮಿಫೈನಲ್‌ಗೆ ಮುನ್ನಡೆಯಲಿವೆ. ಭಾರತ ತನ್ನ ಗುಂಪಿನಲ್ಲಿ 6 ಅಂಕಗಳನ್ನು ಗಳಿಸಬೇಕಾಗಿದೆ. ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಭಾರತಕ್ಕೆ ಅರ್ಹತೆ ಪಡೆಯುವುದು 6 ಅಂಕಗಳು ಸಾಕು.
ಆದರೆ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸೋಲದಿದ್ದರೆ, ಭಾರತಕ್ಕೆ ಟೂರ್ನಿಯಲ್ಲಿ ಮುಂದೆ ಹೋಗಲು ಕಷ್ಟವಾಗಬಹುದು. ಆಗ ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್‌ನ ರನ್ ರೇಟ್ ಅನ್ನು ಮೀರಬೇಕಾಗುತ್ತದೆ. ಏಕೆಂದರೆ ಪಾಕಿಸ್ತಾನ ಮತ್ತು ಭಾರತ ತಮ್ಮ ಉಳಿದ ಪಂದ್ಯಗಳನ್ನು ಗೆದ್ದರೆ ಮತ್ತು ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ಗೆದ್ದರೆ, ಮೂರು ತಂಡಗಳು ಆರು ಅಂಕಗಳನ್ನು ಹೊಂದಿರಲಿವೆ. ಇದರಿಂದಾಗಿ ರನ್ ರೇಟ್ ಪ್ರಮುಖವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications