ಮಹಿಳಾ ಟಿ20 ವಿಶ್ವಕಪ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲಿನ ಕಹಿ
2024ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. 102 ರನ್‌ಗಳಿಗೆ ಭಾರತ ವನಿತೆಯರ ತಂಡ ಆಲೌಟಾಗಿದೆ. ಭಾರತ ವಿರುದ್ಧ ನ್ಯೂಜಿಲೆಂಡ್ 58 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ನ್ಯೂಜಿಲೆಂಡ್ ನೀಡಿದ 161 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಹರ್ಮನ್‌ಪ್ರೀತ್ ಕೌರ್ ಪಡೆ ಒಂದು ಓವರ್ ಬಾಕ ಇರುವಂತೆ 102 ರನ್‌ಗಳಿಗೆ ಸರ್ವಪತನವಾಗಿದೆ. ಟೀಮ್ ಇಂಡಿಯಾ ಪರ ಉತ್ತಮ ಜೊತೆಯಾಟ ಕಾಣಿಸಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಸುಲಭ ಗೆಲುವನ್ನು ಭಾರತ ಕೈ ಚೆಲ್ಲಿದೆ.

ಮಂಕಾದ ಭಾರತ
ವಿಶ್ವಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾದಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ನ್ಯೂಜಿಲೆಂಡ್ ಬೌಲಿಂಗ್ ದಾಳಿ ಮುಂದೆ ಟೀಮ್ ಇಂಡಿಯಾದ ಯಾವುದೇ ಬ್ಯಾಟರ್ ಗರಿಷ್ಠ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಹರ್ಮನ್‌ಪ್ರೀತ್ ಕೌರ್ ತಂಡದ ಪರ ಗರಿಷ್ಠ 15 ರನ್ ಗಳಿಸಿದರು. ಆರಂಭಿಕರಾದ ಸ್ಮೃತಿ ಮಂಧಾನ (12) ಮತ್ತು ಶಫಾಲಿ ವರ್ಮಾ (2) ತಂಡಕ್ಕೆ ಭದ್ರ ಬುನಾದಿ ಹಾಕವಲ್ಲಿ ಎಡುವಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೆಮಿಮಾ ರಾಡ್ರಿಗಸ್ (13), ರಿಚಾ ಘೋಷ್ (12) ಮತ್ತು ದೀಪ್ತಿ ಶರ್ಮಾ (13) ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ನ್ಯೂಜಿಲೆಂಡ್ ಪರ ರೋಸ್ಮರಿ ಮೈರ್ ಗರಿಷ್ಠ 4 ವಿಕೆಟ್ ಕಬಳಿಸಿದರೆ, ಲೀ ತಹುಹು 3 , ಕಾರ್ಸನ್ 2 ವಿಕೆಟ್ ಪಡೆಯುವ ಮೂಲಕ ಭಾರತವನ್ನು ಸೋಲಿಸಿದರು.
ಕಿವೀಸ್‌ಗೆ ಉತ್ತಮ ಆರಂಭ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಿತು. ಸುಜಿ ಬೇಟ್ಸ್ (27) ಮತ್ತು ಜಾರ್ಜಿಯಾ ಪಾಲ್ಮರ್ (34) ಮೊದಲ ವಿಕೆಟ್‌ಗೆ 67 ರನ್ ಕಲೆ ಹಾಕಿದರು. ಅಮೆಲಿಯಾ ಕೆರ್ 13 ರನ್ ಗಳಿಸಿ ಔಟಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸೋಫಿ ಡಿವೈನ್ ಅಮೋಘ ಪ್ರದರ್ಶನ ನೀಡಿ ಅರ್ಧಶತಕ ಗಳಿಸಿ ಕೊನೆಯವರೆಗೂ ಅಜೇಯರಾಗಿ ಉಳಿದರು. ಈ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಿತು. ಅವರು 36 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿದರು. ಭಾರತದ ಪರ ರೇಣುಕಾ ಸಿಂಗ್ 2 ವಿಕೆಟ್ ಪಡೆದರೆ, ಅರುಂಧತಿ ರೆಡ್ಡಿ ಮತ್ತು ಆಶಾ ಸೋಭಾನ ತಲಾ ಒಂದು ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications