For Quick Alerts
ALLOW NOTIFICATIONS  
For Daily Alerts
 

ICC Player of the Month: ರೇಸ್‌ನಲ್ಲಿ ಭಾರತದ ಶೆಫಾಲಿ ವರ್ಮಾ ಸೇರಿ ಮೂವರು ಆಟಗಾರ್ತಿಯರು

ಐಸಿಸಿ ಪ್ರತಿ ತಿಂಗಳೂ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ತಿಂಗಳು ಪ್ರಶಸ್ತಿ ನೀಡಿದೆ. ಪುರುಷ ಹಾಗೂ ಮಹಿಳಾ ಆಟಗಾರ್ತಿಯರಿಗೆ ಪ್ರತ್ಯೇಕವಾಗಿ ಐಸಿಸಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಈಗ ಡಿಸೆಂಬರ್‌ ತಿಂಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಮಹಿಳಾ ಆಟಗಾರ್ತಿಯರನ್ನು ಈ ಪ್ರಶಸ್ತಿಗೆ ಐಸಿಸಿ ನಾಮನಿರ್ದೇಶನ ಮಾಡಿದೆ. ಈ ಬಾರಿ ಮೂರು ಆಟಗಾರ್ತಿಯರನ್ನು ತಿಂಗಳ ಆಟಗಾರ್ತಿಯರು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.

ಡಿಸೆಂಬರ್ 2025 ತಿಂಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರ್ತಿಯರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಶೆಫಾಲಿ ವರ್ಮಾ ಹೆಸರು ಸಹ ಸೇರಿದೆ. ಶೆಫಾಲಿ ವರ್ಮಾ ಭಾರತದಲ್ಲಿ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆಯನ್ನು ಮಾಡಿತ್ತು. ಶ್ರೀಲಂಕಾ ವಿರುದ್ಧ ಇಡೀ ಸರಣಿಯಲ್ಲಿ ಶೆಫಾಲಿ 181.20 ಸ್ಟ್ರೈಕ್ ರೇಟ್ ಮತ್ತು 80.33 ಸರಾಸರಿಯಲ್ಲಿ 241 ರನ್ ಗಳಿಸಿದ್ದಾರೆ. ಇವರ ಸ್ಥಿರ ಪ್ರದರ್ಶನಕ್ಕೆ ಇವರಿಗೆ ಸರಣಿ ಶ್ರೇಷ್ಠ ಆಟಗಾರ್ತಿ ಗರಿ ಸಂದಿತ್ತು.

ICC Women s Player of the Month Dec 2025 Shafali Verma Sune Luus and Wolvaardt Nominated

ಸುನೆ ಲೂಸ್

ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ್ತಿ ಸುನೆ ಲೂಸ್ ಸಹ ಐರ್ಲೆಂಡ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದರು. ಇವರು ಮೊದಲ ಟಿ20 ಪಂದ್ಯದಲ್ಲಿ 81 ರನ್‌ ಸಿಡಿಸಿ 4 ವಿಕೆಟ್‌ ಕಬಳಿಸಿದ್ದರು. ಇನ್ನು ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ 66 ರನ್‌ ಬಾರಿಸಿ, 1 ವಿಕೆಟ್‌ ಪಡೆದಿದ್ದರು. ಎರಡನೇ ಪಂದ್ಯದಲ್ಲೂ ಇವರು ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಒಂದು ವಿಕೆಟ್‌ ಸಹ ಪಡೆದು ಬೀಗಿದ್ದರು.

ಲಾರಾ ವೋಲ್ವಾರ್ಡ್ಟ್

ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್ ಐರ್ಲೆಂಡ್ ವಿರುದ್ಧಸೊಗಸಾದ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರು ಮೊದಲ ಟಿ20 ಪಂದ್ಯದಲ್ಲಿ ಶತಕದ ಇನಿಂಗ್ಸ್‌ ಮೂಲಕ ಅಬ್ಬರಿಸಿದರು. ಏಕದಿನ ಸರಣಿಯಲ್ಲಿ ಇವರು ಸತತ ಎರಡು ಶತಕಗಳನ್ನು ಬಾರಿಸಿ ಆರ್ಭಟಿಸಿದ್ದರು. ಐರ್ಲೆಂಡ್‌ ವಿರುದ್ಧದ ದಕ್ಷಿಣ ಆಫ್ರಿಕಾ ಕ್ಲೀನ್‌ ಸ್ವೀಪ್ ಸಾಧನೆ ಮಾಡುವಲ್ಲಿ ಇವರ ಕೊಡುಗೆ ಅಪಾರ.

Story first published: Thursday, January 8, 2026, 23:01 [IST]
Other articles published on Jan 8, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+