ಮಹಿಳಾ ಟಿ20 ವಿಶ್ವಕಪ್: ಗೆಲ್ಲುವ ಪಂದ್ಯ ಕೈ ಚೆಲ್ಲಿದ ಟೀಮ್ ಇಂಡಿಯಾ; ಕಾಂಗೂರು ಪಡೆಗೆ ರೋಚಕ ಜಯ
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ 2024ರ ಪಂದ್ಯದಲ್ಲಿ ಭಾರತ ವಿರುದ್ದ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿದೆ. ಈ ಮೂಲಕ ಟೂರ್ನಿಯಿಂದ ಹೊಗುಳಿಯುವ ಎಲ್ಲ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ವನಿತೆಯರ ತಂಡ ನೀಡಿದ 152 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಮುಗ್ಗರಿಸಿದೆ. ಭಾರತ 9 ವಿಕೆಟ್ ನಷ್ಟ 142 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕಾಂಗೂರು ಪಡೆ ಕೊನೆ ಓವರ್‌ನಲ್ಲಿ ರೋಚಕ ಜಯ ಕಂಡಿತ್ತು. ಟೀಮ್ ಇಂಡಿಯಾ ಪರ ಗೆಲುವಿಗಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ (54) ಏಕಾಂಗಿ ಹೋರಾಟ ನಡೆಸಿದರು. ಆದರೆ ಗೆಲುವು ಟೀಮ್ ಇಂಡಿಯಾಕ್ಕೆ ಸಿಗಲಿಲ್ಲ.

ಟಿ20 ವಿಶ್ವಕಪ್‌ನ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ತಂಡವನ್ನು 9 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಸೆಮಿಫೈನಲ್ ಟಿಕೆಟ್ ಅನ್ನು ಖಚಿತಪಡಿಸಿಕೊಂಡಿದೆ. ಇತ್ತ ಹರ್ಮನ್‌ಪ್ರೀತ್ ಕೌರ್ ಪಡೆಗೆ ಸೆಮಿಫೈನಲ್ ತಲುಪುವ ಹಾದಿ ಕಠಿಣವಾಗಿದೆ.
ಚೇಸಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ಹರ್ಮನ್‌ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಹೊರತುಪಡಿಸಿ ಯಾವುದೇ ಬ್ಯಾಟರ್ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಹರ್ಮನ್‌ಪ್ರೀತ್ ಅಜೇಯ ಅರ್ಧಶತಕ ಗಳಿಸುವ ಮೂಲಕ ಕೊನೆಯ ಓವರ್‌ನವರೆಗೂ ಗೆಲುವಿನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದರು, ಆದರೆ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ. ಹರ್ಮನ್ ಅಜೇಯ 54 ರನ್ ಗಳನ್ನು ಬಾರಿಸಿದರು. ದೀಪ್ತಿ 29 ರನ್ ಗಳಿಸಲಷ್ಟೇ ಶಕ್ತರು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 20 ರನ್ ಗಳಿಸಿ ಔಟಾದರು. ಜೆಮಿಮಾ ರೋಡ್ರಿಗಸ್ 16 ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳಿಗೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ.
ಭಾರತದ ಸೆಮಿಸ್ ಆಸೆ ಜೀವಂತ?
ಆಸ್ಟ್ರೇಲಿಯಾ ವಿರುದ್ಧ ಸೋಲಿನ ನಂತರ ಭಾರತಕ್ಕೆ ಸೆಮಿಫೈನಲ್ ತಲುಪುವ ಭರವಸೆ ಕಡಿಮೆಯಾಗಿದೆ. ಭಾರತ ತಂಡವು ನ್ಯೂಜಿಲೆಂಡ್‌ಗೆ ಸಮಾನನಾಗಿ 4 ಅಂಕಗಳನ್ನು ಹೊಂದಿದೆ. ಎ ಗುಂಪಿನ ಮತ್ತೊಂದು ಕೊನೆಯ ಪಂದ್ಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಭಾರತ ಸೆಮಿಫೈನಲ್‌ಗೆ ಟಿಕೆಟ್ ಪಡೆಯಬಹುದು. ಏಕೆಂದರೆ ನ್ಯೂಜಿಲೆಂಡ್‌ನ ರನ್ ರೇಟ್ ಭಾರತಕ್ಕಿಂತ ಕಡಿಮೆಯಾಗಿದೆ. ಪಾಕಿಸ್ತಾನ ಗೆದ್ದು 4 ಅಂಕಗಳನ್ನು ಪಡೆದರೂ ಅದರ ರನ್ ರೇಟ್ ಮೈನಸ್ ಆಗಿದೆ. ಹೀಗಾಗಿ ಸೆಮಿಫೈನಲ್ ತಲುಪುವ ಸಾಧ್ಯತೆ ಕಡಿಮೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications