ಮಹಿಳಾ ಟಿ20 ವಿಶ್ವಕಪ್: ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ; ಹರ್ಮನ್‌ಪಡೆಗೆ 152 ರನ್ ಗುರಿ
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ 2024ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದೆ. ಪರಿಣಾಮ ಆಸ್ಟ್ರೇಲಿಯಾ ಮಹಿಳೆಯರ ತಂಡ 8 ನಷ್ಟಕ್ಕೆ 151 ರನ್ ಗಳನ್ನು ಗಳಿಸಿದೆ. ಭಾರತದ ಗೆಲುವಿಗೆ 152 ರನ್‌ಗಳ ಅವಶ್ಯಕತೆಯಿದೆ.
ಆಸ್ಟ್ರೇಲಿಯಾ ಪರ ಗ್ರೇಸ್ ಹ್ಯಾರಿಸ್ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಕ್ರಮವಾಗಿ 40 ಮತ್ತು 32 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭಾರತದ ಪರ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ರಾಧಾ ಯಾದವ್, ಪೂಜಾ ವಸ್ತ್ರಕರ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಎಲ್ಲಿಸ್ ಪೆರ್ರಿ 32 ರನ್ ಗಳಿಸಿ ಆಸ್ಟ್ರೇಲಿಯಾ 151 ರನ್ ಗಳಿಸಲು ನೆರವಾದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಬೆತ್ ಮೂನಿ 4 ರನ್ ಗಳಿಸಿ ಔಟಾದರೆ, ಜಾರ್ಜಿಯಾ ವೇರ್ಹ್ಯಾಮ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ನಂತರ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕಿ ತಹ್ಲಿಯಾ ಮೆಕ್‌ಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ ಉತ್ತಮ ಜೊತೆಯಾಟವಾಡಿದರು. ತಹ್ಲಿಯಾ ಮೆಕ್‌ಗ್ರಾತ್ 32 ರನ್ ಗಳಿಸಿ ಔಟಾದರು. ಬಳಿಕ ಗ್ರೇಸ್ ಹ್ಯಾರಿಸ್ ಕೂಡ ತಂಡದ ಪರ ಗರಿಷ್ಠ 40 ರನ್ ಹೊಡೆದು ವಿಕೆಟ್ ಕಳೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಎಲ್ಲಿಸ್ ಪೆರ್ರಿ ಜಬ್ದಾವರಿಯುವ ಬ್ಯಾಟಿಂಗ್ ಮಾಡಿ ತಂಡಕ್ಕೆ 32 ರನ್ ಕಾಣಿಸಿ ನೀಡಿದರು. ಉಳಿದಂತೆ ಆಶ್ಲೀಗ್ ಗಾರ್ಡ್ನರ್ (6), ಅನ್ನಾಬೆಲ್ ಸದರ್ಲ್ಯಾಂಡ್ (10) ಮತ್ತು ಸೋಫಿ ಮೊಲಿನೆಕ್ಸ್ (೦) ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಕೊನೆಯಲ್ಲಿ ಫೋಬೆ ಲಿಚ್‌ಫೀಲ್ಡ್ 15 ರನ್ ಕಲೆ ಹಾಕುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications