Women's T20 World Cup 2024: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ, ನ್ಯೂಜಿಲೆಂಡ್; ಕನ್ನಡತಿಗೆ ಸಿಗುತ್ತಾ ಚಾನ್ಸ್?
2024ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ವನಿತೆಯರ ತಂಡವು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ 7.30ಕ್ಕೆ ನಡೆಯಲಿದೆ. ಎರಡೂ ತಂಡಗಳು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿವೆ.
ಕಳೆದ 8 ಆವೃತ್ತಿಗಳಲ್ಲಿ ಭಾರತ ವನಿತೆಯರ ತಂಡವು ಒಮ್ಮೆ ಮಾತ್ರ ಫೈನಲ್ ತಲುಪಿದೆ. 2020ರಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋಲು ಕಂಡಿದೆ. ಕಳೆದ ವರ್ಷದ ಸೋಲಿನ ನೋವನ್ನು ಮರೆತು ಹರ್ಮನ್‌ಪ್ರೀತ್ ಕೌರ್ ಮುನ್ನೆಡೆಸುತ್ತಿರುವ ಭಾರತ ತಂಡ ಯುಎಇಯಲ್ಲಿ ವಿಶ್ವಕಪ್ ಗೆಲ್ಲಲು ಭರ್ಜರಿ ತಯಾರಿ ನಡೆಸಿದೆ. ಈ ಬಾರಿ ಭಾರತ ತಂಡದ ಬಲವು ಯುವ ಮತ್ತು ಅನುಭವಿ ಆಟಗಾರ್ತಿಯರ ಉತ್ತಮ ಮಿಶ್ರಣವಾಗಿದೆ.

ಕನ್ನಡತಿಗೆ ಚಾನ್ಸ್?
ಟಿ20 ವಿಶ್ವಕಪ್‌ನಲ್ಲಿ ಆಶಾ ಶೋಭನಾ, ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ತಮ್ಮ ಸ್ಪಿನ್-ಬೌಲಿಂಗ್ ಸಾಮರ್ಥ್ಯದೊಂದಿಗೆ ಭಾರತಕ್ಕೆ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಅವರ ಬ್ಯಾಟಿಂಗ್ ಬಲವೂ ಭಾರತಕ್ಕೆ ವರದಾನವಾಗಲಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಕನ್ನಡತಿ ಶ್ರೇಯಾಂಕಾ ಪಾಟೀಲ್ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆಯುವ ಸಾಧ್ಯತೆಯಿದೆ. ಸ್ಪಿನ್ ಪಿಚ್‌ಗಳಲ್ಲಿ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ಇದನ್ನು ಪರಿಗಣಿಸಿ ಹರ್ಮನ್‌ಪ್ರೀತ್ ಕೌರ್ ಅವಕಾಶ ನೀಡಬಹುದು.
ಪಿಚ್ ವರದಿ
ಮಹಿಳಾ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಐದು ಪಂದ್ಯಗಳನ್ನು ಆಡಲಾಗಿದೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 90 ಮಾತ್ರ. ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿದ್ದರೆ, ಮೂರು ಸಂದರ್ಭಗಳಲ್ಲಿ ಗುರಿಯನ್ನು ಬೆನ್ನಟ್ಟಿದ ತಂಡಗಳು ಜಯ ಗಳಿಸಿವೆ. ಇದಲ್ಲದೆ, ಈ ಪಿಚ್ ಸ್ಪಿನ್ ಬೌಲಿಂಗ್‌ಗೆ ಹೆಚ್ಚು ಅನುಕೂಲಕರವಾಗಿದೆ.
ಹೆಡ್-ಟು-ಹೆಡ್
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇದುವರೆಗೆ 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಭಾರತ 4 ಪಂದ್ಯಗಳನ್ನು ಮಾತ್ರ ಗೆದ್ದಿದೆ. ನ್ಯೂಜಿಲೆಂಡ್ 9 ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿದೆ. ಈ ಅಂಕಿಅಂಶಗಳನ್ನು ಲೆಕ್ಕಿಸದ ಭಾರತ ತಂಡವು ಪ್ರತಿ ವರ್ಷ ಗೆಲುವು ಸಾಧಿಸಲು ಹೋರಾಡುತ್ತಿದೆ.
ಉಭಯ ತಂಡ ಸಂಭಾವ್ಯ ಪ್ಲೇಯಿಂಗ್-11
ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕ ಪಾಟೀಲ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಆಶಾ ಶೋಭನಾ, ರಾಧಾ ಯಾದವ್, ರೇಣುಕಾ ಸಿಂಗ್.
ನ್ಯೂಜಿಲೆಂಡ್: ಸುಜೀ ಬೇಟ್ಸ್, ಅಮೆಲಿಯಾ ಕೆರ್, ಸೋಫಿ ಡಿವೈನ್ (ನಾಯಕಿ), ಬ್ರೂಕ್ ಹ್ಯಾಲಿಡೇ, ಮ್ಯಾಡಿ ಗ್ರೀನ್, ಇಸಾಬೆಲ್ಲಾ ಗೇಜ್ (ವಿಕೆಟ್ ಕೀಪರ್), ಫ್ರಾನ್ ಜೊನಾಸ್, ಲೀ ಕಾಸ್ಪರೆಕ್, ಜೆಸ್ ಕೆರ್, ಮೊಲ್ಲಿ ಪೆನ್‌ಫೋಲ್ಡ್, ರೋಸ್ಮರಿ ಮೈರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications