Women's T20 World Cup 2026: ಇಂದಿನಿಂದ ಟಿ20 ಮಹಾ ಸಮರ; ಭಾರತದ ವೇಳಾಪಟ್ಟಿ, ನೇರಪ್ರಸಾರ, ಪಂದ್ಯದ ಸಮಯದ ಸಂಪೂರ್ಣ ಮಾಹಿತಿ
ವಿಶ್ವದಲ್ಲಿ ಈಗ ಕ್ರೀಡಾ ಹಬ್ಬ ಆರಂಭವಾಗಿದೆ. ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾದಲ್ಲಿ ಫಿಫಾ ವಿಶ್ವಕಪ್ ಆರಂಭವಾದರೆ, ಇತ್ತ ಇಂಗ್ಲೆಂಡ್‌ನಲ್ಲಿ ಮಹಿಳಾ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 10ನೇ ಆವೃತ್ತಿಯ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಸಹ ಭಾಗವಹಿಸುತ್ತಿದ್ದು ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ. ಸೂಪರ್ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದು, ಈ ಮೆಗಾ ಈವೆಂಟ್ ಸಹ ಎಲ್ಲರ ಚಿತ್ತ ಕದ್ದಿದೆ.
ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಬರ್ಮಿಂಗ್‌ಹ್ಯಾಮ್ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈ ವಿಶ್ವಕಪ್‌ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ. ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಎಷ್ಟು ತಂಡಗಳು ಭಾಗವಹಿಸುತ್ತಿವೆ?
10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, 2 ತಂಡಗಳಲ್ಲಿ ವಿಂಗಡಿಸಲಾಗಿದೆ.
ಎಷ್ಟು ದಿನಗಳ ಕಾಲ ಟಿ20 ವಿಶ್ವಕಪ್ ನಡೆಯಲಿದೆ?
ಜೂನ್ 12 ರಿಂದ ಆರಂಭವಾಗುವ ಜುಲೈ 5ರ ವರೆಗೆ ಪಂದ್ಯಗಳು ನಡೆಯಲಿವೆ. ಒಟ್ಟು 24 ದಿನಗಳ ಕಾಲ ಪಂದ್ಯ ನಡೆಯಲಿದೆ.
ಎಷ್ಟು ಪಂದ್ಯಗಳು ನಡೆಯಲಿವೆ?
10ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯ ಸೇರಿದಂತೆ 33 ಪಂದ್ಯಗಳು ನಡೆಯಲಿವೆ.
ಮಹಿಳಾ ಟಿ20 ವಿಶ್ವಕಪ್‌ನ್ನು ಭಾರತದಲ್ಲಿ ಎಲ್ಲಿ ನೋಡಬಹುದು?
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಪಂದ್ಯವನ್ನು ವೀಕ್ಷಿಸಬಹುದಾಗಿದೆ.
ಹಾಲಿ ಚಾಂಪಿಯನ್ ತಂಡ ಯಾವುದು?
2024ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಬಾರಿ ಕಿವೀಸ್ ತಂಡ ಹಾಲಿ ಚಾಂಪಿಯನ್ ಆಗಿ ಕಣಕ್ಕೆ ಇಳಿಯಲಿದೆ.
ಪಂದ್ಯಗಳು ಆರಂಭವಾಗುವ ಸಮಯ ಯಾವಾಗ?
ಭಾರತೀಯ ಕಾಲಮಾನಕ್ಕೆ ಅನುಸಾರವಾಗಿ ಮಧ್ಯಾಹ್ನ 3ಕ್ಕೆ, ಸಂಜೆ 7ಕ್ಕೆ, ರಾತ್ರಿ 11ಕ್ಕೆ ಪಂದ್ಯಗಳು ನಡೆಯಲಿವೆ.
ಪಂದ್ಯಗಳು ಇಂಗ್ಲೆಂಡ್‌ನ ಯಾವೆಲ್ಲಾ ಕ್ರೀಡಾಂಗಣಗಳಲ್ಲಿ ನಡೆಯಲಿವೆ?
ಈ ಬಾರಿಯ ವಿಶ್ವಕಪ್ ಪಂದ್ಯಗಳು ಲಂಡನ್‌ನ ಲಾರ್ಡ್ಸ್ ಮತ್ತು ಓವಲ್, ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್, ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮತ್ತು ಸೌತಾಂಪ್ಟನ್‌ನ ರೋಸ್ ಬೌಲ್ ಕ್ರೀಡಾಂಗಣಗಳಲ್ಲಿ ನಡೆಯಲಿವೆ.
ಭಾರತ ಯಾವ ಗುಂಪಿನಲ್ಲಿ ಸ್ಥಾನ ಪಡೆದಿದೆ?
ಭಾರತ ತಂಡವು 'ಗ್ರೂಪ್ ಎ' ನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಸ್ಥಾನ ಪಡೆದಿವೆ.
ಟಿ20 ವಿಶ್ವಕಪ್‌ನಲ್ಲಿ ಭಾರತದ ವೇಳಾಪಟ್ಟಿ
- ಜೂ.14, ಪಾಕ್ ವಿರುದ್ಧ, ಬರ್ಮಿಂಗ್‌ಹ್ಯಾಮ್, ಸಂಜೆ 7ಕ್ಕೆ
- ಜೂ.17, ನೆದರ್ಲ್ಯಾಂಡ್ಸ್ ವಿರುದ್ಧ, ಲಂಡನ್ (ಲಾರ್ಡ್ಸ್), ರಾತ್ರಿ 11ಕ್ಕೆ
- ಜೂ.20, ಬಾಂಗ್ಲಾದೇಶ ವಿರುದ್ಧ, ಲಂಡನ್ (ಲಾರ್ಡ್ಸ್), ಸಂಜೆ 7ಕ್ಕೆ
- ಜೂ.23, ಆಸ್ಟ್ರೇಲಿಯಾ ವಿರುದ್ಧ, ಮ್ಯಾಂಚೆಸ್ಟರ್, ರಾತ್ರಿ 11ಕ್ಕೆ
- ಜೂ.27, ದಕ್ಷಿಣ ಆಫ್ರಿಕಾ ವಿರುದ್ಧ, ಬರ್ಮಿಂಗ್‌ಹ್ಯಾಮ್, ಸಂಜೆ 7ಕ್ಕೆ
ಟಿ20 ವಿಶ್ವಕಪ್‌ಗೆ ಭಾರತ ತಂಡ ಹೇಗಿದೆ?
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಶ್ರೇಯಾಂಕ ಪಾಟೀಲ್, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಭಾರ್ತಿ ಫುಲ್ಮಾಲಿ, ಕ್ರಾಂತಿ ಗೌಡ್, ನಂದಿನಿ ಶರ್ಮಾ ಮತ್ತು ಶ್ರೀ ಚರಣಿ.
ಗ್ರೂಪ್ 'ಬಿ' ನಲ್ಲಿ ಯಾವೆಲ್ಲಾ ತಂಡಗಳಿವೆ?
ಗ್ರೂಪ್ 'ಬಿ' ನಲ್ಲಿ ಆತಿಥೇಯ ಇಂಗ್ಲೆಂಡ್, ಹಾಲಿ ಚಾಂಪಿಯನ್ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಐರ್ಲೆಂಡ್ ಮತ್ತು ಸ್ಕಾಟ್‌ಲೆಂಡ್ ತಂಡಗಳು ಸ್ಥಾನ ಪಡೆದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

