For Quick Alerts
ALLOW NOTIFICATIONS  
For Daily Alerts
 

ICC Women's World Cup: ಟೀಮ್ ಇಂಡಿಯಾಕ್ಕೆ ಸೋಲು: ಇಂಗ್ಲೆಂಡ್‌ ಸೆಮಿಫೈನಲ್‌ಗೆ

ಸಂಘಟಿತ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಸೋಲಿನ ದವಡೆಯಿಂದ ಪಾರಾಗಿರುವ ಇಂಗ್ಲೆಂಡ್ ಅಮೋಘ ಜಯ ಸಾಧಿಸುವ ಮೂಲಕ ಸೆಮೀಸ್‌ಗೆ ಅರ್ಹತೆ ಪಡೆದಿದೆ. ಇಂಗ್ಲೆಂಡ್‌ ತಂಡದ ಸ್ಟಾರ್ ಆಟಗಾರ್ತಿ ಹೀದರ್ ನೈಟ್‌ ಶತಕ ಬಾರಿಸಿ ಜಯದಲ್ಲಿ ಮಿಂಚಿದರು.

ಒಂದು ಹಂತದಲ್ಲಿ 234 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಭಾರತ ಒತ್ತಡವನ್ನು ಮೆಟ್ಟಿನಿಂತು ರನ್‌ ಕಲೆ ಹಾಕುವಲ್ಲಿ ವಿಫಲವಾಯಿತು. ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಈ ಅವಧಿಯಲ್ಲಿ 88 ರನ್‌ ಬಾರಿಸಿ ಔಟ್ ಆದರು. ಈ ಬಳಿಕ ಇಂಗ್ಲೆಂಡ್‌ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು. ಸ್ಮೃತಿ 8 ಬೌಂಡರಿ ನೆರವಿನಿಂದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದರು. ಅಲ್ಲದೆ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದರು.

ICC Women s World Cup 20th Match - India vs England Match Report

ಮೂರನೇ ವಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಜೋಡಿ ಅಮೋಘ ಆಟದ ಪ್ರದರ್ಶನ ನೀಡಿತು. ಹರ್ಮನ್ ಪ್ರೀತ್ ಕೌರ್ 10 ಬೌಂಡರಿ ಸಹಾಯದಿಂದ 70 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಸಹ ಅರ್ಧಶತಕ ಬಾರಿಸಿ ಮಿಂಚಿದರು. ಆದರೂ ಟೀಮ್ ಇಂಡಿಯಾ ಮಹತ್ವದ ಸಮಯದಲ್ಲಿ ಅಗತ್ಯ ರನ್‌ಗಳನ್ನು ಕಲೆ ಹಾಕುವಲ್ಲಿ ವಿಫಲವಾಯಿತು. ಪರಿಣಾಮ ಭಾರತ ಇನ್ನು ಸೆಮಿಫೈನಲ್‌ ಹಂತವನ್ನು ಪ್ರವೇಶಿಸಲು ಬೇರೆ ತಂಡಗಳ ಫಲಿತಾಂಶ ಹಾಗೂ ತನ್ನದೇ ಆದ ಪ್ರದರ್ಶನವನ್ನು ಉತ್ತಮವಾಗಬೇಕು. ಅಂದಾಗ ಮಾತ್ರ ಉಪಾಂತ್ಯದ ಕನಸು ನನಸಾಗುತ್ತದೆ.

ಭರ್ಜರಿ ಆರಂಭ

ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಟ್ಯಾಮಿ ಬ್ಯೂಮಾಂಟ್ (22) ಹಾಗೂ ಆಮಿ ಜೋನ್ಸ್ ಜೋಡಿ ಮೊದಲ ವಿಕೆಟ್‌ಗೆ 73 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು.

ಆರಂಭಿಕ ಆಮಿ ಜೋನ್ಸ್ 68 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 56 ರನ್‌ ಸಿಡಿಸಿದರು. ಮೂರನೇ ವಿಕೆಟ್‌ಗೆ ಹೀದರ್ ನೈಟ್‌ ಮತ್ತು ನ್ಯಾಟ್ ಸ್ಕಿವರ್ ಬ್ರಂಟ್‌ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 106 ಎಸೆತಗಳಲ್ಲಿ 113 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು.

ನ್ಯಾಟ್‌ ಸ್ಕೀವರ್ ಬ್ರಂಟ್‌ 38 ರನ್ ಬಾರಿಸಿ ಔಟ್ ಆದರು. ಸೋಫಿಯಾ ಡಂಕ್ಲಿ (15), ಎಮ್ಮಾ ಲ್ಯಾಂಬ್ (11), ಚಾರ್ಲಿ ಡೀನ್ (ಅಜೇಯ 19 ರನ್) ತಂಡದ ಮೊತ್ತವನ್ನು ಹಿಗ್ಗಸಿದರು.

ನೈಟ್ ಶತಕ

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ್ತಿ ಹೀದರ್ ನೈಟ್‌ ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಮೂರನೇ ಏಕದಿನ ಶತಕವನ್ನು ಸಿಡಿಸಿದರು. ಇವರು ಭಾರತದ ವಿರುದ್ಧ ಅವರ ಮೊದಲ ಶತಕವಾಗಿದೆ. ನೈಟ್‌ 91 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಹಾಯದಿಂದ 109 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 288 ರನ್‌ ಕಲೆ ಹಾಕಿತು.

ICC Women s World Cup 20th Match - India vs England Match Report

ಭಾರತದ ಪರ ಸ್ಪಿನ್ ಬೌಲರ್ ದೀಪ್ತಿ ಶರ್ಮಾ 51 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಶ್ರೀ ಚರಣಿ 68 ರನ್‌ಗಳಿಗೆ 2 ವಿಕೆಟ್‌ ಉರುಳಿಸಿದರು.

Story first published: Sunday, October 19, 2025, 18:56 [IST]
Other articles published on Oct 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+