Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ವಿಶ್ವಕಪ್‌ ತಂಡದಲ್ಲಿ ವಿಜೇತ ನಾಯಕಿಗೆ ಇಲ್ಲ ಸ್ಥಾನ: ತಂಡದಲ್ಲಿ 3 ಭಾರತೀಯರು

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಅಮೋಘ ಸಾಧನೆ ಮಾಡಿದೆ. ಭಾರತ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟಿದೆ. ಈ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ್ತಿಯರ ತಂಡವನ್ನು ಐಸಿಸಿ ಪ್ರಕಟಿಸಿದೆ. ಪ್ರಕಟಿತ ತಂಡದಲ್ಲಿ ವಿಶ್ವಕಪ್ ವಿಜೇತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಉಳಿದಂತೆ ಈ ತಂಡದಲ್ಲಿ ಮೂವರು ಭಾರತೀಯ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಐಸಿಸಿ ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ 12 ಆಟಗಾರ್ತಿಯರನ್ನು ಆಯ್ಕೆ ಮಾಡಿದೆ.

ಟೂರ್ನಿಯಲ್ಲಿ ಭಾರತದ ಪರ ಶ್ರೇಷ್ಠ ಪ್ರದರ್ಶನ ನೀಡಿರುವ ಆಟಗಾರ್ತಿಯರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಆರಂಭಿಕ ಆಟಗಾರ್ತಿಯಾಗಿ ಸ್ಮೃತಿ ಮಂಧಾನ ಸ್ಥಾನ ಪಡೆದಿದ್ದಾರೆ. ಅವರು ಪ್ರಸಕ್ತ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೆಮಿಮಾ ರೋಡ್ರಿಗಸ್ ಅವರಿಗೂ ತಂಡದಲ್ಲಿ ಸ್ಥಾನ ಲಭಿಸಿದೆ. ಇವರು ಆಸೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವುದಲ್ಲದೆ ಭಾರತ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರನ್ನು ಬಿಟ್ಟರೆ ಸರಣಿ ಶ್ರೇಷ್ಠ ಆಟಗಾರ್ತಿ ದೀಪ್ತಿ ಶರ್ಮಾ ಅವರು ಸಹ ಐಸಿಸಿ ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ICC Women s World Cup Champions India s Mandhana Jemimah Deepti in Team of the Tournament

ದಕ್ಷಿಣ ಆಫ್ರಿಕಾ ತಂಡದ ಪರ ಮೂವರು ಆಟಗಾರ್ತಿಯರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕಿ ಲಾರಾ ವೋಲ್ವಾರ್ಡ್ ಅವರಿಗೆ ನಾಯಕತ್ವವನ್ನು ನೀಡಲಾಗಿದೆ. ಇವರು ಮಹಿಳಾ ಏಕದಿನ ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಲ್ಲದೆ ಮರಿಜಾನ್ನೆ ಕಪ್, ನಾಡಿನ್ ಡಿ ಕ್ಲರ್ಕ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾ ತಂಡದ 3, ಇಂಗ್ಲೆಂಡ್‌ ತಂಡ 2, ಪಾಕಿಸ್ತಾನ ತಂಡ ಒಬ್ಬರು ಐಸಿಸಿ ಪ್ರಕಟಿತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹರ್ಮನ್‌ಗೆ ಇಲ್ಲ ಸ್ಥಾನ

ಟೀಮ್ ಇಂಡಿಯಾ ಮಹಿಳಾ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ನಾಯಕಿ ಹರ್ಮನ್ ಪ್ರೀತ್ ಕೌರ್‌ ಅವರಿಗೆ ಐಸಿಸಿ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಭಾರತ ತಂಡ ಐತಿಹಾಸಿಕ ಸಾಧನೆ ಮಾಡುವಲ್ಲಿ ಹರ್ಮನ್ ಕೊಡುಗೆ ಸಹ ಅಪಾರ. ಇವರು ತಂಡವನ್ನು ಉತ್ತಮವಾಗಿ ಮುನ್ನಡೆಸಿದರು. ಅಲ್ಲದೆ ಒತ್ತಡದ ಸಮಯದಲ್ಲೂ ಧೃತಿ ಗೆಡದೆ, ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೇರುವಲ್ಲಿ ಸಫಲರಾದರು.

ಐಸಿಸಿ ವಿಶ್ವಕಪ್ ತಂಡ: ಸ್ಮೃತಿ ಮಂಧಾನ (ಭಾರತ),ಲಾರಾ ವೋಲ್ವಾರ್ಡ್ (ನಾಯಕಿ) (ದಕ್ಷಿಣ ಆಫ್ರಿಕಾ), ಜೆಮಿಮಾ ರೊಡ್ರಿಗಸ್ (ಭಾರತ), ಮರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ), ಆಶ್ ಗಾರ್ಡ್ನರ್ (ಆಸ್ಟ್ರೇಲಿಯಾ), ದೀಪ್ತಿ ಶರ್ಮಾ (ಭಾರತ), ಅನ್ನಾಬೆಲ್ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ನಾಡಿನ್ ಡಿ ಕ್ಲರ್ಕ್, ಸಿದ್ರಾ ನವಾಜ್ (ವಿಕೆಟ್ ಕೀಪರ್) (ಪಾಕಿಸ್ತಾನ), ಅಲಾನಾ ಕಿಂಗ್ (ಆಸ್ಟ್ರೇಲಿಯಾ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್),ನ್ಯಾಟ್ ಸಿವರ್-ಬ್ರಂಟ್ (ಇಂಗ್ಲೆಂಡ್).

Story first published: Tuesday, November 4, 2025, 14:39 [IST]
Other articles published on Nov 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+